Advertisement
ದ.ಕ.: ಕೆಲವೆಡೆ ಮಳೆಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಶುಕ್ರವಾರ ಸಂಜೆ ವೇಳೆಗೆ ಸಾಧಾರಣ ಮಳೆ ಬಂದಿದೆ. ವೇಣೂರಿನ ಹೊಸಂಗಡಿ, ಬಡಕೋಡಿ ಗ್ರಾಮದಲ್ಲಿ ಧಾರಾಕಾರ ಮಳೆಯಾಗಿದೆ. ಬೆಳ್ತಂಗಡಿಯಲ್ಲಿಯೂ ಮಳೆ ಬಂದಿದೆ. ಸುಳ್ಯ ತಾಲೂಕಿನ ವಿವಿಧಡೆ ಗುಡುಗು ಸಹಿತ ಮಳೆಯಾಗಿದೆ.
ಬೆಂಗಳೂರು: ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಕೆಲವೆಡೆ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಯಿತು. ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿಯಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 6 ಸೆಂ.ಮೀ. ಮಳೆ ಸುರಿಯಿತು. ರವಿವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಸಿಡಿಲು ಬಡಿದು ಹಾನಿ
ಅಜೆಕಾರು: ಶಿರ್ಲಾಲು ಹಂಕಿಬೆಟ್ಟು ಮನೆ ನಿವಾಸಿ ಶ್ರೀನಿವಾಸ್ ನಾಯಕ್ ಅವರ ದನದ ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ದಾಸ್ತಾನು ಮಾಡಿದ ಬೈಹುಲ್ಲಿಗೆ ಬೆಂಕಿ ಸ್ಪರ್ಶವಾಗಿದೆ. ಹಟ್ಟಿಯಲ್ಲಿದ್ದ ಆರು ಜೆರ್ಸಿ ದನಗಳಿಗೆ ಯಾವುದೇ ಹಾನಿಯಾಗಿಲ್ಲ. ಕಾಶಿಬೆಟ್ಟು ಪ್ರದೇಶದಲ್ಲಿ ವಿದ್ಯುತ್ ಕಂಬಕ್ಕೆ ಮರ ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿದೆ. ಸುಮಾರು ಎರಡು ತಾಸು ಕೆರ್ವಾಶಿ, ಶಿರ್ಲಾಲು, ಅಂಡಾರು, ಅಜೆಕಾರು ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ.