ಬೇಸಗೆ ರಜೆ ಮುಗಿದ ಸಮಯ ಹೊಸ ಯುನಿಫಾರ್ಮ್, ಹೊಸ ಪುಸ್ತಕ, ಹೊಸ ತರಗತಿ ಸಂಭ್ರಮವೋ ಸಂಭ್ರಮ. ಆ ಸಂತೋಷಕ್ಕೆ ಹೆಚ್ಚು ಖುಷಿ ನೀಡಲು ಮಳೆರಾಯ ಬಂದೆ ಬಿಡುತ್ತಾನೆ.
ಶಾಲೆ ಬಿಡುವ ಹೊತ್ತಿನಲ್ಲಿ ಮಳೆ ಬಂದರೆ ಖುಷಿಯೋ ಖುಷಿ. ಮಳೆ ನೀರಿನಲ್ಲಿ ಆಟವಾಡುತ್ತಾ ಮನೆಗೆ ಬರುತ್ತಿದ್ದೆವು. ಮಳೆಯಲ್ಲಿ ನಾವು ನೆನೆದರೂ ಪರವಾಗಿಲ್ಲ. ಬ್ಯಾಗ್ ಮತ್ತು ಪುಸ್ತಕ ನೆನೆಯಬಾರದೆಂದು ಹೆಚ್ಚಾಗಿ ಬ್ಯಾಗ್‌ಗೆ ಕೂಡೆ ಇಡುತ್ತಿದ್ದೆವು.
ಮಳೆಗಾಲದ ರಜೆ ಸಮಯದಲ್ಲಿ ಗೆಳೆಯರೆಲ್ಲ ಸೇರಿ ಮಳೆ ನೀರು ಹರಿಯುವ ತೊರೆಗೆ ಹೋಗಿ ಮೀನು ಹಿಡಿಯುವುದು, ಮೊದಲೇ ತಯಾರಿಸಿಕೂಂಡು ಬಂದ ಕಾಗದದ ದೋಣಿಯನ್ನು ನೀರಿನಲ್ಲಿ ಬೀಡುವುದು ಯಾರ ದೋಣಿ ಮುಳುಗುವುದಿಲ್ಲ ಎಂದು ನೋಡುವುದು ಸಂಜೆಯಾಗುವ ಸಮಯಕ್ಕೆ ಮನೆಗೆ ಬಂದು ಅಮ್ಮ ಮಾಡಿಟ್ಟ ಬಿಸಿ ಬಿಸಿಯಾದ ಚಾ ಮತ್ತು ತಿಂಡಿಯನ್ನು ಸೇವಿಸುವುದು ಮಳೆಗಾಲದ ಸಮಯದಲ್ಲಿ ಬಾಯಿ ಚಪ್ಪರಿಸುತ್ತಿರಲು ತುಂಬಾ ಋಷಿಯಾಗುತ್ತಿತ್ತು.
ಶಾಲೆ ಬಿಟ್ಟ ಕೂಡಲೇ ಗುಡ್ಡ, ತೋಡು, ಕಾಡುಗಳನ್ನು ದಾಟಿ ಬರುವುದು ಬರುವ ದಾರಿಯಲ್ಲಿ ಮಳೆ ನೀರು ಹರಿಯುತ್ತಿದ್ದರೆ ಅದರಲ್ಲಿ ಕುಪ್ಪಳಿಸುವುದು ಇವೆೆಲ್ಲ ಈಗ ಮಧುರ ನೆನಪುಗಳಾಗಿ ಉಳಿದಿವೆ. 2/3 ಕಿ.ಮೀ. ನಡೆದು ಶಾಲೆಗೆ ಹೋದವರಿಗೆ ಮಳೆಯ ನೆನಪುಗಳು ಹೆಚ್ಚಾಗಿ ಇರುತ್ತವೆ. ಆದರೆ ಈಗ ಕಾಲ ಬದಲಾಗಿದೆ. ಮನೆ ಮುಂದೆ ಸ್ಕೂಲ್ ಬಸ್ ಹತ್ತಿದರೆ ಶಾಲೆ ಮುಂದೆ ಬಸ್ ನಿಲ್ಲುತ್ತೇ. ನಾನು 7 ನೇ ಕ್ಲಾಸ್‌ನಲ್ಲಿ ಕಲಿಯುತ್ತಿರುವಾಗ ಒಂದು ದಿನ ಶಾಲೆಗೆ ಹೋಗುವಾಗ ಕೊಡೆ ತೆಗೆದುಕೊಂಡು ಹೋಗಲು ಮರೆತು ಶಾಲೆ ಬಿಟ್ಟ ಗಳಿಗೆಯಿಂದ ಪ್ರಾರಂಭವಾದ ಮಳೆ ನಾನು ಮನೆ ತಲುಪುವವರೆಗೂ ಹಾಗೆಯೇ ಸುರಿಯುತ್ತಿತು. ಅದೇ ಮಳೆಯಲ್ಲಿ ನಾನು ನೆನೆದುಕೊಂಡು ಬಂದು ಮನೆ ಸೇರಿದ್ದೂ, ಅಮ್ಮ ಹೊಡೆದದ್ದು ಈಗಲೂ ಮರೆಯಲು ಸಾಧ್ಯವಿಲ್ಲ. ಆ ಮಳೆಯಲ್ಲಿ ನೆನೆದ ಪರಿಣಾಮ 2ದಿನ ಜ್ವರ ನೆಗಡಿಯಿಂದ ಮಲಗಿದ್ದು ನೆನಪಾಗುತ್ತದೆ ಮಳೆಯಲ್ಲಿ ನಿದ್ದೆ ಮಾಡುವುದೆಂದರೆ ಖುಷಿ. ಮಳೆಯ ಅಂದಿನ ನೆನಪುಗಳನ್ನು ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ಮಧುರ ನೆನಪುಗಳನ್ನು ಹೊತ್ತು ತರುವ ಮಳೆ ಎಲ್ಲರಿಗೂ ಅಚ್ಚುಮೆಚ್ಚು.
ಜಾಸ್ಮಿನ್ ಥೋಮಸ್
ಎಂಪಿಎಂ ಕಾಲೇಜ್, ಕಾರ್ಕಳ