Advertisement
ಕಳೆದ 2-3 ದಿನಗಳಿಂದ ನಗರ ದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ನಗರದ ಅಭಿವೃದ್ಧಿ ಸ್ತಂಭಗಳಾದ ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಬಿಡಿಎ ಹಾಗೂ ಬಿಎಂಆರ್‌ಸಿಎಲ್ ನಿಂದ ರಸ್ತೆ, ಮೇಲ್ಸೇತುವೆ, ನೀರಿನ ಕೊಳವೆ ಅಳವಡಿಕೆ, ಮೆಟ್ರೋ ನಿಲ್ದಾಣ, ವಸತಿ ಗೃಹ ನಿರ್ಮಾ ಣದಂತಹ ನೂರಾರು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದವು. ನಿರಂತರ ಮಳೆಯಿಂದ ಕಾಮಗಾರಿ ಸ್ಥಳದಲ್ಲಿ ಸಾಕಷ್ಟು ನೀರು ನಿಲ್ಲುತ್ತಿದೆ. ಅಗೆದ ಗುಂಡಿಗಳಲ್ಲಿ ನೀರು ತುಂಬುತ್ತಿದೆ.
Related Articles
Advertisement
“ಮಳೆಯಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಣೆಯೂ ಕಷ್ಟ ಸಾಧ್ಯವಾಗಿದ್ದು, ಕಾಮ ಗಾರಿಯ ಗುಣ ಮಟ್ಟಕ್ಕೆ ಹಾನಿಯಾಗುತ್ತದೆ. ಹೀಗಾಗಿ ಮಳೆ ಕಡಿಮೆಯಾಗುವವರೆಗೂ ಕಾಮಗಾರಿಗಳನ್ನು ಮುಂದೂಡಲಾಗಿದೆ’ ಎನ್ನುತ್ತಾರೆ ಖಾಸಗಿ ಸಂಸ್ಥೆ ಎಂಜಿನಿಯರ್ ಸುಹಾಸ್‌ನಾಯಕ್.
ಮುಂಜಾಗ್ರತಾ ಕ್ರಮವಾಗಿಯೂ ಸ್ಥಗಿತ
ನಿರಂತರ ಮಳೆಯಿಂದ ಮಣ್ಣು ಸಡಿಲವಾಗಿರುತ್ತದೆ. ದೊಡ್ಡ ಕಟ್ಟಡ, ಸೇತುವೆ ಕಾಮಗಾರಿಗಳಲ್ಲಿ ಮಣ್ಣು, ಗೋಡೆ ಕುಸಿತ ಉಂಟಾಗುವ ಸಾಧ್ಯತೆಗಳಿರುತ್ತದೆ. ವಿದ್ಯುತ್ ಅವಘಡಗಳು ಉಂಟಾಗುತ್ತವೆ. ಇದರಿಂದ ಕಾರ್ಮಿಕರು ಅಪಾಯಕ್ಕೆ ಸಿಲುಕುತ್ತಾರೆ. ಹೀಗಾಗಿಯೇ, ಹಲವು ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಕಾಮಗಾರಿಗಳನ್ನು ತಾತ್ಕಾಲಿಕ ನಿಲ್ಲಿಸಲಾಗಿದೆ. ಸುರಕ್ಷಿತ ಸ್ಥಳದಲ್ಲಿರುವ ಮತ್ತು ಒಳಾಂಗಣ ಕಾಮಗಾರಿಗಳು ನಡೆಸಲಾಗುತ್ತಿದೆ ಎನ್ನು ತ್ತಾರೆ ಬಿಬಿಎಂಪಿ, ಬಿಡಿಎ ಎಂಜಿನಿಯರ್‌ಗಳು.
ನಷ್ಟ ಇಲ್ಲ; ಮುಕ್ತಾಯ ವಿಳಂಬ
ಮಳೆ ಯಿಂದ ಸ್ಥಗಿತಗೊಂಡ ಕಾಮಗಾರಿಗಳಿಂದ ಇಲಾಖೆಗಳಿಗೆ ಹೆಚ್ಚಿನ ನಷ್ಟವಿಲ್ಲ. ಆದರೆ, ಕಾಮಗಾರಿಗಳು ನಿಗದಿತ ಸಮಯಕ್ಕೆ ಮುಕ್ತಾಯವಾಗುವುದಿಲ್ಲ. ರಸ್ತೆ ಗುಂಡಿ ವಿಚಾರದಲ್ಲಿ ಮಾತ್ರ ಮಳೆ ಹೆಚ್ಚಾದಷ್ಟು ಗುಂಡಿಗಳ ಸಂಖ್ಯೆ ಹೆಚ್ಚಳವಾಗುತ್ತದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.