Advertisement
ಬುಧವಾರ ಸಂಜೆ ಬೀಸಿದ ಗುಡುಗು ಸಹಿತ ಬಿರುಗಾಳಿ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಫಲಕ್ಕೆ ಬಂದಿರುವ ನೇಂದ್ರ ಮತ್ತು ಏಲಕ್ಕಿ ಬಾಳೆ ಕಂದು ಅರ್ಧಕ್ಕೆ ಮುರಿದು ಗೊನೆ ಸಹಿತ ನೆಲಕಚ್ಚಿದ್ದರೆ, ನೂರಾರು ತೆಂಗಿನ ಮರಗಳು ಬುಡ ಸಹಿತ ಉರುಳಿ ಬಿದ್ದಿವೆ. ಜಮೀನಿನಲ್ಲಿದ್ದ ಮರಗಳು ನೆಲಕ್ಕುರುಳಿವೆ. ಶುಂಠಿ ಜಮೀನಿನಲ್ಲಿ ಹಾಕಿಕೊಂಡಿದ್ದ ಹತ್ತಾರು ಶೆಡ್‌ಗಳು ಬಿರುಗಾಳಿಗೆ ಹಾರಿ ಹೋಗಿವೆ.
Related Articles
Advertisement
ಇಷ್ಟೆಲ್ಲಾ ಅನಾಹುತವಾಗಿದ್ದರೂ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿರುವ ಕಂದಾಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡದೆ ರೈತರು ಪರಿಹಾರ ಪಡೆಯುವುದು ಹೇಗೆಂಬ ಆಂತಕದಲ್ಲಿದ್ದಾರೆ.
ಜನ ಪ್ರತಿನಿಧಿಗಳು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡದಂತಾಗಿದೆ. ಇನ್ನಾದರೂ ಕಂದಾಯ ಇಲಾಖೆ ಅಧಿಕಾರಿಗಳು ಹಾನಿ ಸ್ಥಳಕ್ಕೆ ಭೇಟಿ ಇತ್ತು ಸೂಕ್ತ ಪರಿಹಾರ ಕೊಡಿಸಬೇಕೆಂದು ತೋಟದ ಬೆಳೆಗಾರರು ಆಗ್ರಹಿಸಿದ್ದಾರೆ.