Advertisement

ಮುಂದುವರೆದ ಕೃಷ್ಣೆಯ ಪ್ರವಾಹ ರುದ್ರನರ್ತನ

07:08 PM Jul 27, 2021 | Team Udayavani |

ಬನಹಟ್ಟಿ: ಕೃಷ್ಣಾ ನದಿಯ ನೀರು ಗಂಟೆಯಿಂದ ಗಂಟೆಗೆ ಹೆಚ್ಚಾಗುತ್ತಿರುವುದರಿಂದ ನದಿ ತೀರದ ಜನರು ಪ್ರವಾಹದ ಭೀತಿಯಲ್ಲಿದ್ದಾರೆ. ತಾಲೂಕಿನಲ್ಲಿ ಕೃಷ್ಣೆಯ ಪ್ರವಾಹ ರುದ್ರನರ್ತನ ಮುಂದುವರೆದಿದೆ. ಈಗಾಗಲೇ ಸಮೀಪದ ಮದನಮಟ್ಟಿ, ಹಳಿಂಗಳಿ, ಅಸ್ಕಿ, ಆಸಂಗಿ, ಕುಲಹಳ್ಳಿ. ತಮದಡ್ಡಿ ಹಾಗೂ ಹಿಪ್ಪರಗಿ ಗ್ರಾಮದ ಜನರಿಗೆ ಭಾರಿ ತೊಂದರೆಯಾಗಿದೆ.

Advertisement

ಈಗ ರಬಕವಿ ನಗರಕ್ಕೂ ಪ್ರವಾಹದ ಭೀತಿ ಉಂಟಾಗಿದೆ. ರಬಕವಿಯ ಹೊರವಲಯದಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಕೃಷ್ಣಾ ನದಿಯ ನೀರು ಕೆಲವೇ ಮೀಟರ್ ದೂರದಲ್ಲಿರುವುದರಿಂದ ನಗರದ ಜನರು ಪ್ರವಾಹದ ಆತಂಕದಲ್ಲಿದ್ದಾರೆ.

ಇದನ್ನೂ ಓದಿ: 7 ರಾಜ್ಯಗಳ 22 ಜಿಲ್ಲೆಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳ: ಕಳವಳಕಾರಿ ಎಂದ ಕೇಂದ್ರ ಸರ್ಕಾರ

ನದಿಯ ನೀರು ಇನ್ನಷ್ಟು ಹೆಚ್ಚಾದರೆ ರಬಕವಿ ನಗರದ ಮನೆಗಳಲ್ಲಿ ನೂರಾರು ಪಾವರ್ ಲೂಮ್ ಮಗ್ಗಗಳಿಗೆ ಭಾರಿ ಪ್ರಮಾಣದಲ್ಲಿ ತೊಂದರೆಯಾಗಲಿದೆ.

Advertisement

ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ರಬಕವಿಯಿಂದ ಮದನಮಟ್ಟಿ, ಹಳಿಂಗಳಿ ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗ ಸಂಪೂರ್ಣವಾಗಿ ಜಲಾವೃಗೊಂಡಿದೆ. ಇದರಿಂದಾಗಿ ಸದ್ಯ ಮದನಮಟ್ಟಿ ಗ್ರಾಮ ಜಲಾವೃತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next