Advertisement

ಶೀಘ್ರವೇ ರೈಲೂಟದಲ್ಲಿ ಬದಲಾವಣೆ

05:15 AM Jun 06, 2018 | Karthik A |

ಸದ್ಯದಲ್ಲೇ ನೀವು ರೈಲುಗಳಲ್ಲಿ ಸಿಗುವ ಆಹಾರದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತೀರಿ. ರೈಲುಗಳಲ್ಲಿ ಪೂರೈಕೆಯಾಗುವ ಆಹಾರದ ಗುಣಮಟ್ಟದ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿರುವುದರಿಂದ, ಪ್ರಮಾಣಕ್ಕಿಂತ ಗುಣಮಟ್ಟಕ್ಕೇ ಹೆಚ್ಚು ಒತ್ತು ನೀಡಲು ಭಾರತೀಯ ರೈಲ್ವೇ ಕೆಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮ (IRCTC) ಚಿಂತನೆ ನಡೆಸಿದ್ದು, ಪ್ರಸ್ತಾವ‌ವನ್ನು ರೈಲ್ವೇ ಮಂಡಳಿಗೆ ಕಳುಹಿಸಿದೆ. ಇದಕ್ಕೆ ಒಪ್ಪಿಗೆ ಸಿಕ್ಕಿದರೆ, ರೈಲಿನಲ್ಲಿನ ಊಟದ ಪ್ರಮಾಣ ಹಾಗೂ ಮೆನುವಿನಲ್ಲೂ ಸಣ್ಣಮಟ್ಟಿಗೆ ಬದಲಾವಣೆ ಆಗಲಿದೆ.

Advertisement

ಕಾರಣವೇನು?
ಆಹಾರದ ಗುಣಮಟ್ಟದ ಬಗ್ಗೆ ಕೇಳಿಬರು ತ್ತಿರುವ ದೂರುಗಳು ಒಂದು ಕಾರಣವಾ ದರೆ, ಕಚ್ಚಾ ವಸ್ತುಗಳ ದರ ಏರಿಕೆಯಾಗಿರುವುದರಿಂದ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವುದು ಸವಾಲಾಗಿ ಪರಿಣಮಿಸಿರುವುದೂ IRCTC ಈ ನಿರ್ಧಾರಕ್ಕೆ ಕಾರಣ.

ಪರಿಸರ ದಿನ
ವಿಶ್ವ ಪರಿಸರ ದಿನವಾದ ಮಂಗಳವಾರದಿಂದ ಕೆಲವು ರಾಜಧಾನಿ ಹಾಗೂ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಜೈವಿಕ ವಿಘಟನೀಯ ಕಂಟೇನರ್‌ ಗಳಲ್ಲಿ ಆಹಾರವನ್ನು ಪೂರೈಸಲು IRCTC ಆರಂಭಿಸಿದೆ. 

– ಒಟ್ಟಾರೆ ಊಟದ ಪ್ರಮಾಣವನ್ನು 700 ಗ್ರಾಂಗೆ ಇಳಿಸಲು ಚಿಂತನೆ
– ದಾಲ್‌ ಪ್ರಮಾಣ ಈಗಿರುವ 150 ಗ್ರಾಂ ಬದಲು 100-120 ಗ್ರಾಂ
– ಮಾಂಸಾಹಾರಿ ಊಟಕ್ಕೆ ಚಿಕನ್‌ ಪೀಸ್‌ ಬದಲು ಬೋನ್‌ ಲೆಸ್‌ ಚಿಕನ್‌ ಗ್ರೇವಿ
– ಹಸಿ ತರಕಾರಿಯನ್ನೂ ಒದಗಿಸುವ ವ್ಯವಸ್ಥೆ
– ವಿಮಾನದಲ್ಲಿರುವ ಕಾಂಬೋ ಮೀಲ್ಸ್‌ ಆಫ‌ರ್‌
– ಸೂಪ್‌ ಮತ್ತು ಬ್ರೆಡ್‌ ಸ್ಟಿಕ್‌ ಪೂರೈಕೆ ರದ್ದು

900 ಗ್ರಾಂ : ಸದ್ಯ ನೀಡಲಾಗುತ್ತಿರುವ ಊಟದ ಪ್ರಮಾಣ

Advertisement

700 ಗ್ರಾಂ : ಇನ್ನು ಮುಂದೆ ನೀಡಲು ಚಿಂತನೆ

Advertisement

Udayavani is now on Telegram. Click here to join our channel and stay updated with the latest news.

Next