Advertisement

2025ರ ಒಳಗಾಗಿ ರೈಲ್ವೇ ಇಲಾಖೆಯಿಂದ ಪೂರ್ಣ ಪ್ರಮಾಣದಲ್ಲಿ ಇವಿ ಬಳಕೆಗೆ ಗುರಿ

10:38 PM Oct 11, 2022 | Team Udayavani |

ನವದೆಹಲಿ: ರೈಲ್ವೇ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಇರುವ ಎಲ್ಲಾ ರೀತಿಯ ಇಂಧನಗಳಿಂದ ಚಲಿಸುವ ವಾಹನಗಳ ಬಳಕೆಯನ್ನು ತ್ಯಜಿಸಿ 2025ರ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ಚಾಲಿತ ವಾಹನಗಳನ್ನು ಬಳಸುವ ಗುರಿ ಹಾಕಿಕೊಂಡಿದೆ.

Advertisement

ಈ ಬಗ್ಗೆ ಮಂಗಳವಾರ ಹೊಸ ನೀತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಅದರ ಅನ್ವಯ ಪ್ರಮುಖ ರೈಲು ನಿಲ್ದಾಣಗಳಲ್ಲಿ, ರೈಲ್ವೇ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳ ಆವರಣದಲ್ಲಿ ವಾಹನಗಳನ್ನು ಚಾರ್ಜ್‌ ಮಾಡುವ ವ್ಯವಸ್ಥೆ ಅಭಿವೃದ್ಧಿಗೊಳಿಸಲೂ ಕ್ರಮಗಳನ್ನು ಅನುಸರಿಸುವ ಉದ್ದೇಶ ಹೊಂದಲಾಗಿದೆ.

ಜಗತ್ತಿನ ಮಾನದಂಡಕ್ಕೆ ಅನುಸಾರವಾಗಿ 2030ರ ವೇಳೆಗೆ 46 ಸಾವಿರ ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರಗಳನ್ನು ಹೊಂದಬೇಕಾಗಿದೆ. ರೈಲ್ವೇ ವಲಯಗಳಿಗೆ ನೀಡಲಾಗಿರುವ ಗುರಿಯ ಪ್ರಕಾರ 2023ರ ಡಿಸೆಂಬರ್‌ ಅಂತ್ಯಕ್ಕೆ ಶೇ.20ರಷ್ಟು ಹಾಲಿ ವಾಹನಗಳ ಬಳಕೆ ತಗ್ಗಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next