Advertisement
ರಾಜ್ಯ ವಿಕೇಂದ್ರೀಕರಣ ಯೋಜನೆ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಉದ್ಘಾಟಿಸಿದರು.
Related Articles
Advertisement
ಸಾಮಾಜಿಕ ಮುಖಂಡ ಉಲ್ಲಾಸ ಶಾನಭಾಗ ಮಾತನಾಡಿ, ರಾಜಕಾರಣಿಗಳಿಗೆ ಮತ್ತು ಪರಿಸರವಾದಿಗಳಿಗೆ ಹೊರದೇಶ ಗಳಿಂದ ಹಣ ಬರುತ್ತದೆ. ಹಾಗಾಗಿ ಅವರು ಇಂತಹ ಯೋಜನೆ ತಡೆಯುತ್ತಾರೆ ಎಂದು ಆರೋಪಿಸಿದರು.
ಈ ಹೆದ್ದಾರಿಯಲ್ಲಿ ಅದಿರು ಸಂಚಾರ ಸ್ಥಗಿತಗೊಳಿಸಬೇಕು. ಮತ್ತು ರೇಲ್ವೆ ಬೇಕೆಂಬುದು ಎಲ್ಲರ ಕೂಗಾದರೆ ನಮ್ಮನ್ನಾಳುವ ಜನಪ್ರತಿನಿಧಿಗಳು ಅವರ ಪ್ರಣಾಳಿಕೆ ಪ್ರಕಾರ ತಲೆಕೆಡಿಸಿಕೊಂಡು ರೇಲ್ವೆ ಯೋಜನೆ ಕಾರ್ಯರೂಪಕ್ಕೆ ತರಲಿ ಅವರೇಕೆ ಮೀನಮೇಷ ಎಣಿಸುತ್ತಾರೆ ಎಂದು ಘಟ್ಟಿಯಾಗಿ ಕೇಳಬೇಕು ಎಂದು ಕಿಸಾನ್ ಸಂಘದ ನರಸಿಂಹ ಸಾತೊಡ್ಡಿ ಪ್ರಶ್ನಿಸಿದರು.
ಕೆ.ಎಸ್. ಭಟ್ಟ, ಎನ್.ಕೆ. ಭಟ್ಟ, ನಾಗರಾಜ ಮದ್ಗುಣಿ, ಅಚ್ಚುತಕುಮಾರ್, ಮತ್ತಿತರರು ಅಭಿಪ್ರಾಯ ಹೇಳಿದರು.
ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಹೋರಾಟ ನಡೆದಿದೆ. ವಾಜಪೇಯಿ ಪ್ರಧಾನಿ ಇದ್ದಾಗ ಶಂಕುಸ್ಥಾಪನೆ ನಡೆಯಿತು. ಕಲಘಟಗಿವರೆಗೆ ಪ್ರಾರಂಭಿಕ ಕಾಮಗಾರಿ ನಡೆದಿದೆ. ನಂತರ ಢೋಂಗಿ ಪರಿಸರ ವಾದಿಗಳಿಂದಾಗಿ ಯೋಜನೆಗೆ ಅಡ್ಡಗಾಲಾಯಿತು. ಜಿಲ್ಲೆಯಲ್ಲಿ ಬೇರೆ ಬೇರೆ ಯೋಜನೆಯಿಂದ ಪರಿಸರ ಹಾನಿ ಆಗದೇ ಇದ್ದದ್ದು, ಇಲ್ಲಿ ಮಾತ್ರ ಪರಿಸರ ಹಾನಿ ಆಗುತ್ತದೆ ಎನ್ನುವುದು ಸರಿಯಲ್ಲ. ಅಭಿವೃದ್ಧಿ ಆಗಬೇಕಾದರೆ ಸ್ವಲ್ಪ ಮಟ್ಟಿಗೆ ಹಾನಿ ಆದರೂ, ಸಹಿಸಿಕೊಳ್ಳಬೇಕು. ಪರಿಸರ ಹಾನಿ ಎಂಬ ನೆಪದ ನಡುವೆ ಇಲ್ಲಿಗೆ ರೈಲು ಯೋಜನೆ ತಡೆಗೆ ಹುನ್ನಾರ ನಡೆದಿದೆ. ಜಿಲ್ಲೆಯಲ್ಲಿ ಯಲ್ಲಾಪುರ ಮಾತ್ರ ರೇಲ್ವೆ ರಹಿತ ತಾಲೂಕಾಗುವ ಅಪಾಯವಿದೆ. ಕಾರಣ ರೈಲ್ವೆಗಾಗಿ ಜನಧ್ವನಿ ಎತ್ತರಿಸುವ ತುರ್ತು ಕೆಲಸ ಆಗಬೇಕಿದೆ ಎಂದರು.
ಜಿಲ್ಲಾ ರೇಲ್ವೆ ಸಮಿತಿ ಉಪಾಧ್ಯಕ್ಷ ವೆಂಕಟು ಮಾಸ್ತರ,ನೈರುತ್ಯ ರೇಲ್ವೆ ಸಲಹಾ ಸಮಿತಿ ಸದಸ್ಯ ಕೃಷ್ಣಾನಂದ ದೇವನಳ್ಳಿ, ಪಪಂ ಅಧ್ಯಕ್ಷೆ ಸುನಂದಾದಾಸ್, ನಿವೃತ್ತ ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ, ಪ್ರಮುಖರಾದ ಡಿ.ಎನ್. ಗಾಂವ್ಕಾರ, ಕೆಜೆಯು ಅಧ್ಯಕ್ಷ ಶಂಕರ ಭಟ್ಟ ತಾರಿಮಕ್ಕಿ ಇದ್ದರು. ಮಲೆನಾಡು ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಸ್ವಾಗತಿಸಿದರು. ಕೇಬಲ್ ನಾಗೇಶ ನಿರ್ವಹಿಸಿದರು. ವೇಣುಗೋಪಲ ಮದ್ಗುಣಿ ವಂದಿಸಿದರು.