ಮುಂಬಯಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಜಯ ಗಳಿಸಿದ ಉತ್ತರ ಮುಂಬಯಿ ಕ್ಷೇತ್ರದ ಸಂಸದ ಗೋಪಾಲ್ ಸಿ. ಶೆಟ್ಟಿ ಅವರನ್ನು ಬೊರಿವಲಿ ರೈಲ್ವೇ ಯಾತ್ರಿ ಸೇವಾ ಸಂಘದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಬೊರಿವಲಿ ರೈಲ್ವೇ ಯಾತ್ರಿ ಸೇವಾ ಸಂಘದ ಗೌರವಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ ಮತ್ತು ಪದಾಧಿಕಾರಿಗಳು ಮಂಗಳವಾರ ಬೊರಿವಲಿಯ ಸಂಸದ ಗೋಪಾಲ್ ಶೆಟ್ಟಿ ಅವರ ಕಚೇರಿಯಲ್ಲಿ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಪಶ್ಚಿಮ ಉಪ
ನಗರದ ಮೂಲಕ ಮಂಗಳೂರಿಗೆ ರೈಲನ್ನು ಪ್ರಾರಂಭಿಸುವ ಯೋಜನೆಯ ಬಗ್ಗೆ ಸಂಸದ ಗೋಪಾಲ್ ಶೆಟ್ಟಿಯವರು ಇಲಾಖೆಯೊಂದಿಗೆ ಚರ್ಚಿಸುತ್ತಿದ್ದು, ಪ್ರಸಕ್ತ ಬೇಸಿಗೆ ರಜಾ ದಿನದ ವಿಶೇಷ ರೈಲು ಪ್ರಾರಂಭಗೊಂಡಿದ್ದು, ಈ ರೈಲನ್ನು ಕ್ಲಪ್ತ ಸಮಯದಲ್ಲಿ ದಿನನಿತ್ಯದ ರೈಲನ್ನಾಗಿ ಪರಿವರ್ತಿಸಲು ರೈಲ್ವೇ ಯಾತ್ರಿ ಸಂಘವು ದೆಹಲಿಯ ರೈಲ್ವೇ ಪ್ರಬಂಧಕ, ರೈಲ್ವೇ ಸಚಿವರನ್ನು ಈ ಹಿಂದೆ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ರೈಲ್ವೇ ಇಲಾಖೆಯು ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸಂಸದರು ಸೂಚಿಸಿದ್ದರು.
ರಜಾ ಕಾಲದ ಬೇಸಿಗೆಯಲ್ಲಿ ತಾತ್ಕಾಲಿಕವಾಗಿ ಪ್ರಾರಂಭಗೊಂಡ ರೈಲಿಗೆ ಅಭೂತಪೂರ್ವ ಬೆಂಬಲವು ಪ್ರಯಾಣಿಕರಿಂದ ದೊರೆತಿದ್ದು, ದಕ್ಷಿಣ ಕನ್ನಡಿಗರ ಕನಸಿನ ಕೂಸಾದ ಈ ಪಶ್ಚಿಮ ಉಪನಗರ ರೈಲನ್ನು ಶಾಶ್ವತವಾಗಿ ದಿನಂಪ್ರತಿ ರೈಲಾಗಿ ಪರಿವರ್ತಿಸುವಂತೆ ಈ
ಸಂದರ್ಭದಲ್ಲಿ ಸಂಸದರಿಗೆ ಮನವರಿಕೆ ಮಾಡಲಾಯಿತು. ಪ್ರಸಕ್ತ ಮುಂಬಯಿ ಬಾಂದ್ರಾ ದಿಂದ ಮಂಗಳೂರಿಗೆ ಪ್ರಯಾ
ಣಿಸುತ್ತಿರುವ ಈ ರೈಲು ಪ್ರಯಾಣಿಕರಿಂದ ತುಂಬಿ ತುಳುಕು
ತ್ತಿದ್ದು, ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲಿ ಕಾದಿರಿಸಲಾಗುತ್ತಿದೆ. ರೈಲ್ವೇ ಯಾತ್ರಿ ಸಂಘದ ದೀರ್ಘ ಕಾಲದ ಪ್ರಯತ್ನಕ್ಕೆ ಆದಷ್ಟು ಬೇಗ ಪ್ರತಿ
ಫಲ ದೊರೆಯುವಂತೆ ಗೋಪಾಲ್ ಶೆಟ್ಟಿ ಅವರಲ್ಲಿ ವಿನಂತಿಸಲಾಯಿತು. ಸಂಘದ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, ಉಪಾಧ್ಯಕ್ಷ ಪ್ರೇಮನಾಥ್ ಪಿ. ಕೋಟ್ಯಾನ್, ಗೌರವ ಕಾರ್ಯದರ್ಶಿ ರಜಿತ್ ಎಲ್. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಉದ್ಯಾವರ