Advertisement
ಪರ್ಯಾಯ ಮಾರ್ಗವಿಲ್ಲ: ಸಾರ್ವಜನಿಕರ ತೆರಿಗೆ ಹಣದಲ್ಲಿ ಕಾಮಗಾರಿ ಆರಂಭಿಸಿರುವ ಅಧಿಕಾರಿಗಳು ನಿಗದಿತ ಸಮಯದಲ್ಲಿ ಕಾಮಗಾರಿಪೂರ್ಣಗೊಳಿಸಿಲ್ಲ, ಬದಲಿ ವ್ಯವಸ್ಥೆ ಕೂಡ ಮಾಡಿಲ್ಲ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗಿದೆ. ಅವೈಜ್ಞಾನಿಕ ಅಂಡರ್ ಪಾಸ್‌ಗಳಿಂದ ಮಳೆ ನೀರು ನಿಂತು ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ.
ಕಾಮಗಾರಿಯಿಂದ ವಾಹನಗಳ ತೀವ್ರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಟ್ರಾಫಿಕ್ ಕಾರಣಕ್ಕೆ ಈ ಕಾಮಗಾರಿ ನಡೆಸಲಾಗಿತ್ತು. ಆದರೇ ಇದು ಅವೈಜ್ಞಾನಿಕವಾಗಿ ಕೂಡಿದ್ದು ಅಂಡರ್‌ಪಾಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಟೀಕೆಗೆ ಗುರಿಯಾಗಿದೆ.
Related Articles
Advertisement
ಗ್ರಾಮಸ್ಥರ ಪರದಾಟ: ಎಲ್ಲಾ ಕಡೆ ಅಂಡರ್ ಪಾಸ್ ನಿರ್ಮಾನ ಮಾಡಿರುವ ಜಾಗಗಳಲ್ಲಿ ರೈಲ್ವೇ ಇಲಾಖೆಯು ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಮಳೆಯಿಂದ ಕೆಳಸೇತುವೆ ಜಲಾವೃತವಾಗಿದೆ. ಡಾಬಾ ಗೇಟ್‌ನಿಂದ ಐವಿಸಿ ರಸ್ತೆ ಸಂಪರ್ಕಿಸುವ ರಸ್ತೆ ಆಗಿರುವುದರಿಂದ ಉಗನವಾಡಿ ಕನ್ನಮಂಗಲ ಪಾಳ್ಯ, ಜಾಲಿಗೆ , ಅರದೇಶನ ಹಳ್ಳಿ , ಸಿಂಗರಹಳ್ಳಿ, ಇಲ್ಲತೊರೆ ಇನ್ನಿತರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದೇ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆ ಬಿಟ್ಟರೆ ಸುತ್ತುಬಳಸಿ ಗ್ರಾಮಗಳನ್ನು ಸೇರಬೇಕು ಎಂದು ಗ್ರಾಮಸ್ಥರು ಅಳಲು ತೋಡಿ ಕೊಂಡಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ನೀರು ನಿಲ್ಲದಂತೆ ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೈಲ್ವೆ ಇಲಾಖೆಯು ಅವೈಜ್ಞಾನಿಕ ಅಂಡರ್ ಪಾಸ್‌ಗಳನ್ನು ನಿರ್ಮಾಣ ಮಾಡಿದ್ದು, ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಮಾಡಿಲ್ಲ. ಇಂತಹ ಅವೈಜ್ಞಾನಿಕ ಅಂಡರ್ ಪಾಸ್‌ಗಳಿಂದ ಐದಾರು ಕಿಲೋಮೀಟರ್ ಸುತ್ತಿ ಗ್ರಾಮಗಳನ್ನು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ.
-ಪಿ.ನಾಗೇಶ್,
ಕನ್ನಮಂಗಲ ಗ್ರಾಪಂ ಸದಸ್ಯ