Advertisement
ಗ್ರಾಹಕರು ಮೊದಲಿಗೆ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬೇಕು. ಟಿಕೆಟ್ ಖಾತರಿ ಕುರಿತು ಇ-ಮೇಲ್ ಅಥವಾ ಎಸ್‌ಎಂಎಸ್‌ನಲ್ಲಿ ಸಂದೇಶ ದೊರಕುತ್ತದೆ. ಒಮ್ಮೆ ಟಿಕೆಟ್ ಖಚಿತವಾದ ಬಳಿಕ ಗ್ರಾಹಕರು ತಮ್ಮ ಇ-ವ್ಯಾಲೆಟ್‌ನಿಂದ ಹಣ ಪಾವತಿಸಬೇಕು. ಹಣ ಪಾವತಿಗೆ ಟಿಕೆಟ್ ಖಾತರಿಯಾದ ಬಳಿಕ 14 ದಿನಗಳ ಕಾಲಾವಕಾಶ ಇರುತ್ತದೆ. 14 ದಿನಗಳೊಳಗೆ ಹಣ ಪಾವತಿಸದಿದ್ದರೆ ಟಿಕೆಟ್ ಬೆಲೆ ಮೇಲೆ ವಾರ್ಷಿಕ ಶೇ.36ರಷ್ಟು ಬಡ್ಡಿ ರೂಪದಲ್ಲಿ ದಂಡ ವಿಧಿಸಲಾಗುತ್ತದೆ. ಈ ಸೌಲಭ್ಯ ಪಡೆಯಲು ಗ್ರಾಹಕರು ಮೊದಲಿಗೆ irctc.payonedelivery.co.in ವೆಬ್‌ಸೈಟ್‌ನಲ್ಲಿ ತಮ್ಮ ವೈಯಕ್ತಿಕ ವಿವರವನ್ನು ಆಧಾರ್ ಅಥವಾ ಪ್ಯಾನ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. Advertisement
ತತ್ಕಾಲ್ ಬುಕಿಂಗ್‌ಗೆ ‘ಬುಕ್ ನೌ ಪೇ ಲೇಟರ್’ಸೌಲಭ್ಯ
09:10 AM Aug 04, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.