Advertisement
ಜನಸಂದಣಿ ಕಡಿಮೆ ಮಾಡಿ ಸೋಂಕು ನಿಯಂತ್ರಿ ಸುವ ಉದ್ದೇಶ ದಿಂದ ಜೂನ್‌ನಲ್ಲಿ ಪಾಲ್ಘಾಟ್ ವಿಭಾಗದ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣ ಗಳಲ್ಲಿ ಪ್ಲಾಟ್‌ಫಾರಂ ಶುಲ್ಕವನ್ನು ಇದ್ದ 10 ರೂ.ಗಳಿಂದ 50 ರೂ.ಗಳಿಗೂ ಕೊಂಕಣ ರೈಲ್ವೇಯ ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಕುಮಟಾ, ಕಾರವಾರ ನಿಲ್ದಾಣಗಳಲ್ಲಿ 10ರಿಂದ 30 ರೂ.ಗಳಿಗೂ ಏರಿಕೆ ಮಾಡಲಾಗಿತ್ತು. ಶುಲ್ಕ ಹೆಚ್ಚಳ ತಾತ್ಕಾಲಿಕ ಎಂದು ಆಗ ಇಲಾಖೆ ಹೇಳಿತ್ತು.
Related Articles
ಕೇರಳ ಹೊರತುಪಡಿಸಿ ದೇಶಾದ್ಯಂತ ಸೋಂಕು ಪ್ರಮಾಣ ಇಳಿಕೆಯಾಗಿದ್ದು ಬಹುತೇಕ ರೈಲುಗಳ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಪ್ಲಾಟ್‌ಫಾರಂ ಪ್ರವೇಶ ಶುಲ್ಕ ಇಳಿಕೆಯಾಗದಿರುವುದು ಸಮಸ್ಯೆ ಸೃಷ್ಟಿಸಿದೆ. ಪ್ರಯಾಣಿಕರನ್ನು ಎದುರುಗೊಳ್ಳಲು, ಬೀಳ್ಕೊಡಲು ಅಥವಾ ಅವರ ಲಗೇಜು ತರಲು ನೆರವಾಗುವ ಉದ್ದೇಶದಿಂದ ಜನರು ದುಬಾರಿ ಮೊತ್ತ ಪಾವತಿಸಿ ಪ್ಲಾಟ್‌ಫಾರಂ ಟಿಕೆಟ್ ಖರೀದಿಸಬೇಕಾಗಿದೆ.
Advertisement
ಪ್ರಯಾಣದಷ್ಟೇ ಪ್ಲಾಟ್‌ಫಾರಂ ಶುಲ್ಕ!ಮಹಿಳೆಯೋರ್ವರು ಮಂಗಳೂರು ಸೆಂಟ್ರಲ್‌ಗೆ ರೈಲಿನಲ್ಲಿ ಆಗಮಿಸಿದ್ದರು. ಟಿಕೆಟ್ ದರ 55 ರೂ. ಆಗಿತ್ತು. ಅವರ ಜತೆ ಕೆಲವು ಲಗೇಜು ಇದ್ದ ಕಾರಣ ಕರೆದೊಯ್ಯಲು ಪತಿ ನಿಲ್ದಾಣಕ್ಕೆ ಹೋಗಿದ್ದರು. ಅವರು ಪ್ಲಾಟ್‌ಫಾರಂ ಪ್ರವೇಶಿಸಲು 50 ರೂ. ತೆರಬೇಕಾಯಿತು ಎಂದು ಹೇಳಿದ್ದಾರೆ. ಪ್ಲಾಟ್‌ಫಾರಂ ದುಬಾರಿ ಪ್ರವೇಶ ಶುಲ್ಕ ಜನರಿಗೆ ಹೊರೆಯಾಗುತ್ತಿದೆ. ಸದ್ಯ ಸೋಂಕು ಇಳಿಕೆಯಾಗಿದ್ದರಿಂದ ಶುಲ್ಕವನ್ನು ಹಿಂದಿನಷ್ಟೇ ಮಾಡಬೇಕು ಎಂದು ಪಾಲ್ಘಾಟ್ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಗಮನ ಸೆಳೆದು ಆಗ್ರಹಿಸುತ್ತೇನೆ.
– ಹನುಮಂತ ಕಾಮತ್, ಪಾಲ್ಘಾಟ್ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯ