Advertisement

ಇಳಿಯುವ ರೈಲ್ವೆ ಸ್ಟೇಶನ್‌ಗೆ 20 ನಿಮಿಷ ಇರುವಾಗಲೇ ಇನ್ನು SMS alert

03:20 PM Jul 26, 2018 | Team Udayavani |

ಹೊಸದಿಲ್ಲಿ : ರೈಲು ಪ್ರಯಾಣಿಕರು ರಾತ್ರಿ 11ರಿಂದ ಬೆಳಗ್ಗೆ 7 ಗಂಟೆಯ ವರೆಗಿನ ಅವಧಿಯಲ್ಲಿ ತಾವು ಇಳಿದುಕೊಳ್ಳುವ ತಾಣಕ್ಕೆ 20 ನಿಮಿಷ ಇರುವಾಗಲೇ SMS alert  ಪಡೆಯಲಿದ್ದಾರೆ. 

Advertisement

ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಈ ಎಸ್‌ಎಂಎಸ್‌ ಅಲರ್ಟ್‌ ಸೌಕರ್ಯವನ್ನು ಆರಂಭಿಸಲಿದೆ ಎಂಧು ಸಹಾಯಕ ರೈಲ್ವೇ ಸಚಿವ ರಾಜನ್‌ ಗೊಹೇನ್‌ ಅವರಿಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖೀತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. 

ಗಮ್ಯ ತಾಣ SMS alert  ಸೌಕರ್ಯವು 139 ಮೂಲಕ ಸಿಗಲಿದೆ; ಮೀಸಲು ಪ್ರಯಾಣಿಕರು 139 ರೈಲ್ವೇ ಎನ್‌ಕ್ವಯರಿ ಸರ್ವಿಸ್‌ ಇಂಟರಾಕ್ಟೀವ್‌ ವಾಯ್‌ಸ್‌ ರೆಸ್ಪಾನ್ಸ್‌ (ಐವಿಆರ್‌), ಕಸ್ಟಮರ್‌ ಸರ್ವಿಸ್‌ ಎಕ್ಸಿಕ್ಯುಟಿವ್‌ ನೆರವಿನ 139 ರೈಲ್ವೆ ಎನ್‌ಕ್ವಯರಿ ಸರ್ವಿಸ್‌ ಮತ್ತು ಎಸ್‌ಎಂಎಸ್‌ 139 ಮೂಲಕ, ಕೇವಲ ಒಂದು ಸರಳ ಕೀವರ್ಡ್‌ ಬಳಸಿಕೊಂಡು  ಡೆಸ್ಟಿನೇಶನ್‌ ಅಲರ್ಟ್‌  ಸೆಟ್‌ ಮಾಡಿಕೊಳ್ಳಬಹುದಾಗಿದೆ ಎದು ಸಚಿವರು ಪ್ರಕಟನೆಯೊಂದರಲ್ಲಿ ಹೇಳಿದ್ದಾರೆ.

ಗಮ್ಯ ತಾಣ ಹೆಸರನ್ನು ತಮ್ಮ ಮೊಬೈಲ್‌ ನಂಬರ್‌ನಲ್ಲಿ  ಅಲರ್ಟ್‌ ಕಾಲ್‌ ಸೆಟ್‌ ಮಾಡುವ ಮೂಲಕ  ಪ್ರಯಾಣಿಕರು ತಮ್ಮ ಮೊಬೈಲ್‌ ನಂಬರ್‌ಗೆ ಡೆಸ್ಟಿನೇಶನ್‌ ಅಲರ್ಟ್‌ ದೃಢೀಕರಣ ಮೆಸೇಜ್‌ ಪಡೆಯುತ್ತಾರೆ. 

ಭಾರತೀಯ ರೈಲ್ವೆ ಈಚೆಗೆ ವೃದ್ಧ ಮತ್ತು ವಿಕಲಾಂಗ ಪ್ರಯಾಣಿಕರಿಗಾಗಿ ಸಾರಥಿ ಸೇವೆಯಂತಹ ಕೆಲವು ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ಆರಂಭಿಸಿದೆ. ಇದರಿಂದಾಗಿ ಈ ವರ್ಗದ ಪ್ರಯಾಣಿಕರು ಪಾವತಿ ನೆಲೆಯಲ್ಲಿ  ಬ್ಯಾಟರಿ ಚಾಲಿತ ಕಾರು ಸೇವೆಯನ್ನು ಬುಕ್‌ ಮಾಡಬಹುದಾಗಿದೆ; ಪೋರ್ಟರ್‌ ಸೇವೆಯನ್ನು  ಪಡೆಯಬಹುದಾಗಿದೆ. ಈಗಾಗಲೇ ಈ ವರ್ಗದ ಪ್ರಯಾಣಿಕರಿಗೆ ಪಿಕಪ್‌ ಮತ್ತು ಡ್ರಾಪ್‌ ಹಾಗೂ ವೀಲ್‌ಚೇರ್‌ ಸೇವೆಗಳು ಉಪಲಬ್ಧವಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next