Advertisement

DK- Udupi ಜಿಲ್ಲೆಗಳ ರೈಲ್ವೇ ಪ್ರಯಾಣಿಕರ ಆಗ್ರಹ; ಹಳೇ ಬೇಡಿಕೆಗಳು ಕೂಡಲೇ ಈಡೇರಲಿ

12:09 AM Dec 02, 2023 | Team Udayavani |

ಮಂಗಳೂರು: ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇದರಲ್ಲಿ ಮೈಸೂರು ವಿಭಾಗ, ಪಾಲಕ್ಕಾಡ್‌ ವಿಭಾಗ ಹಾಗೂ ಕೊಂಕಣ ರೈಲ್ವೇ ವಿಭಾಗದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರೈಲ್ವೇ ವ್ಯವಸ್ಥೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮಸ್ಯೆಗಳ ಪಟ್ಟಿ ಇಲ್ಲಿದೆ.

Advertisement

ಮಂಗಳೂರು ಸೆಂಟ್ರಲ್‌,
ಮಂಗಳೂರು ಜಂಕ್ಷನ್‌
-ಮಂಗಳೂರು ಸೆಂಟ್ರಲ್‌ನಲ್ಲಿ “ಪ್ಲಾಟ್‌ಫಾರ್ಮ್ ಇಲ್ಲ’ ಎಂಬ ನೆಪದ ಕಾಲ ಮುಗಿದಿದೆ. ಈಗ 4 ಹಾಗೂ 5ನೇ ಹೊಸ ಪ್ಲಾಟ್‌ಫಾರ್ಮ್ ಆಗಿರುವುದರಿಂದ ಮಂಗಳೂರು ಜಂಕ್ಷನ್‌ಗೆ ಇರುವ ರೈಲು ಸೇವೆಯನ್ನು ಸೆಂಟ್ರಲ್‌ಗೆ ವಿಸ್ತರಿಸಲು ಯಾವುದೇ ತೊಂದರೆ ಇಲ್ಲ. ನಗರದ “ಗೂಡ್‌ಶೆಡ್‌’ ಉಳ್ಳಾಲಕ್ಕೆ ಸ್ಥಳಾಂತರವಾಗಿದ್ದು ಸೆಂಟ್ರಲ್‌ಗೆ ಬಂದ ರೈಲಿಗೆ ತಂಗಲೂ ಅವಕಾಶವಿದೆ. ಹಾಗಾಗಿ ಮುಖ್ಯವಾಗಿ ಮುಂಬಯಿ ಸಿಎಸ್‌ಟಿ- ಮಂಗಳೂರು ಜಂಕ್ಷನ್‌, ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಮಂಗಳೂರು ಜಂಕ್ಷನ್‌ ಗೋಮಟೇಶ್ವರ ಎಕ್ಸ್‌ಪ್ರೆಸ್‌, ಯಶವಂತಪುರ- ಮಂಗಳೂರು ಜಂಕ್ಷನ್‌ ಸಾಪ್ತಾಹಿಕ ಹಗಲು ರೈಲು ಹಾಗೂ ಮಂಗಳೂರು ಜಂಕ್ಷನ್‌- ವಿಜಯಪುರ ಎಕ್ಸ್‌ಪ್ರೆಸ್‌ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು.
– ಇಂಟರ್‌ ಸಿಟಿ ಹೈಸ್ಪೀಡ್‌ ರೈಲು “ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರಿನಿಂದ ಆರಂಭಿಸಬೇಕು.
– ಮಂಗಳೂರು ಸೆಂಟ್ರಲ್‌ ನಿಲ್ದಾಣ 100 ವರ್ಷ ಹಳೆಯದಾಗಿದ್ದು “ವಿಶ್ವದರ್ಜೆ’ಗೇರಲಿದೆ ಎಂಬ “ಆಶ್ವಾಸನೆ’ ಕೂಡಲೇ ಕಾರ್ಯರೂಪಕ್ಕೆ ಬರಬೇಕು. ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಈಗ ಇರುವ 1 ಪ್ರವೇಶದ ಜತೆಗೆ ಅತ್ತಾವರ ಭಾಗದಲ್ಲಿ ಮತ್ತೊಂದು ಪ್ರವೇಶ ದ್ವಾರ ಮಾಡಿ ಮೂಲಸೌಕರ್ಯ ಕಲ್ಪಿಸಬೇಕು.
– ಪ್ರಸ್ತುತ ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ಒಂದನೇ ಪ್ಲಾಟ್‌ಫಾರ್ಮ್ನಿಂದ ಎರಡು ಮತ್ತು ಮೂರನೇ ಪ್ಲಾಟ್‌ಫಾರ್ಮ್ಗಳಿಗೆ ಪ್ರಯಾಣಿಕರ ಮೇಲ್ಸೇತುವೆ (ಎಫ್‌ಒಬಿ) ಇದೆ. ಅದೇ ಸೌಲಭ್ಯ ಹೊಸ ಪ್ಲಾಟ್‌ಫಾರ್ಮ್ಗಳಿಗೂ ಕಲ್ಪಿಸಬೇಕು.
-ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಎಟಿಎಂ ಸಹಿತ ವಿವಿಧ ಮೂಲಸೌಕರ್ಯಗಳನ್ನು ಜಾರಿಗೊಳಿಸಬೇಕು. ಇಲ್ಲಿ ಪ್ಲಾಟ್‌ಫಾರ್ಮ್ ಇನ್ನೆರಡು ಪ್ಲಾಟ್‌ಫಾರ್ಮ್ಗಳನ್ನು ನಿರ್ಮಿಸಬೇಕು.
-ಸುರತ್ಕಲ್‌ ಸಹಿತ ವಿವಿಧ ನಿಲ್ದಾಣಗಳಲ್ಲಿ ಎರಡನೇ ಪ್ಲಾಟ್‌ಫಾರ್ಮ್ ಅಗತ್ಯವಿದೆ. ವಿವಿಧ ರಾಜ್ಯಗಳ ಪ್ರಯಾಣಿಕರು ಇರುವ ಕಾರಣ ಎಲ್ಲ ರೈಲುಗಳಿಗೂ ಇಲ್ಲಿ ನಿಲುಗಡೆ ಬೇಕೆನ್ನುತ್ತಾರೆ ಜನರು.
– ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯವರೆಗೆ ವಿಸ್ತರಿಸಬೇಕು.

ಉಡುಪಿ ರೈಲು ನಿಲ್ದಾಣ
– ವಂದೇಭಾರತ್‌ ರೈಲು ಸೇವೆಯನ್ನು ಜಿಲ್ಲೆಗೆ ವಿಸ್ತರಿಸಬೇಕು.
– ಕೇರಳ ಮತ್ತು ತಮಿಳುನಾಡಿನಿಂದ ಮಂಗಳೂರು ಸೆಂಟ್ರಲ್‌ಗೆ ಬರುವ ರೈಲುಗಳ ಸೇವೆಯನ್ನು ಉಡುಪಿಗೂ ವಿಸ್ತರಿಸಬೇಕು.
– ಇಂದ್ರಾಳಿ ನಿಲ್ದಾಣದಲ್ಲಿ ಎಸ್ಕಲೇಟರ್‌ ಹಲವು ವರ್ಷಗಳಿಂದ ನಿರುಪಯುಕ್ತವಾಗಿದ್ದು ಅದನ್ನು ದುರಸ್ತಿಪಡಿಸಿ ಸೂಕ್ತ ಸ್ಥಳದಲ್ಲಿ ಪುನರ್‌ ಸ್ಥಾಪಿಸುವಂತಾಗಬೇಕು.
– ಇಂದ್ರಾಳಿ ರೈಲು ನಿಲ್ದಾಣದಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಟಿಕೆಟ್‌ ಇದ್ದವರು ಮತ್ತು ಇಲ್ಲದವರು ಮುಕ್ತವಾಗಿ ಹೋಗಿ ಬರಲು ಇರುವ ವ್ಯವಸ್ಥೆಯನ್ನು ಸರಿಪಡಿಸಬೇಕು.
– ಇಂದ್ರಾಳಿ ನಿಲ್ದಾಣದ ಮೂಲಸೌಕರ್ಯ ನಿರ್ವಹಣೆ ವ್ಯವಸ್ಥಿತಗೊಳ್ಳಬೇಕು.
– ಇಂದ್ರಾಳಿ ಸಹಿತ ಪ್ರಮುಖ ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್ ಮೇಲ್ಛಾವಣಿ ಸೋರುತ್ತದೆ. ಇದನ್ನು ಸರಿಪಡಿಸಿ ಎಲ್ಲ ಪ್ಲಾಟ್‌ಫಾರ್ಮ್ಗಳಿಗೆ ಶೆಡ್‌ ವ್ಯವಸ್ಥೆ ಕಲ್ಪಿಸಬೇಕು.
– ಜಿಲ್ಲೆಯ ರೈಲು ನಿಲ್ದಾಣ ಸಂಪರ್ಕ ರಸ್ತೆಗಳ ದುರಸ್ತಿ ಕೂಡಲೇ ಆಗಬೇಕು.
– ನಂದಿಕೂರು, ಬೆಳಪು ಕೈಗಾರಿಕೆ ಪ್ರದೇಶದ ಬಳಿ ರೈಲು ನಿಲ್ದಾಣವಿದ್ದರೂ ರೈಲುಗಳು ನಿಲ್ಲುವುದಿಲ್ಲ. ಇಲ್ಲಿÉ ಎಲ್ಲ ಎಕ್ಸ್‌ಪ್ರೆಸ್‌ಗ‌ಳು ನಿಲ್ಲಬೇಕು. ಇಂದ್ರಾಳಿ ನಿಲ್ದಾಣದ ಬಳಿಯ ರೈಲು ಉಗ್ರಾಣದಲ್ಲಿರುವ ಪರಿಕರಗಳನ್ನು ವ್ಯವಸ್ಥಿತ ರೀತಿಯಲ್ಲಿಡಲು ಕ್ರಮ ಕೈಗೊಳ್ಳಬೇಕು.

ಕುಂದಾಪುರ, ಬೈಂದೂರು ತಾಲೂಕು
– ಬೆಂಗಳೂರು – ಮೈಸೂರು- ಮುರ್ಡೇಶ್ವರ ರೈಲಿನ ಅವೈಜ್ಞಾನಿಕ ವೇಳಾಪಟ್ಟಿ ಸರಿಪಡಿಸಿ ಒಂದು ಗಂಟೆ ಮುಂಚಿತ ಸಂಚರಿಸುವಂತೆ ಮಾಡಬೇಕು.
– ಸೇನಾಪುರದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲ್ಲಿಸಬೇಕು. ಇದರಿಂದ ದೂರ-ದೂರದ ಊರುಗಳಲ್ಲಿ ಕೆಲಸ ಮಾಡುವ ಇಲ್ಲಿನ 24 ಗ್ರಾಮಗಳ ಜನರಿಗೆ ಪ್ರಯೋಜನವಾಗಲಿದೆ.
– ಮೂಡ್ಲಕಟ್ಟೆಯಲ್ಲಿರುವ ರೈಲು ನಿಲ್ದಾಣದ ಮೇಲ್ಛಾವಣಿ ದುರಸ್ತಿ ಸಹಿತ ಇನ್ನಿತರ ಮೂಲಸೌಕರ್ಯ ವೃದ್ಧಿಯಾಗಬೇಕು.
-ಯಶವಂತಪುರ- ಕಾರವಾರ ಮಧ್ಯೆ ಪ್ರತೀ ದಿನ ಸಂಚರಿಸುವ ಪಂಚಗಂಗಾ ಎಕ್ಸ್‌ ಪ್ರಸ್‌ಗೆ ಬೇಡಿಕೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಬೋಗಿ ಅಳವಡಿಸುವ ಸಾಧ್ಯತೆಯಿದೆ. ಇದರಿಂದ ರೈಲಿನ ವೇಗ ತಗ್ಗಿ ಪ್ರಯಾಣ ವಿಳಂಬವಾದೀತು. ಹಾಗಾಗಿ ಬೆಂಗಳೂರಿನಿಂದ ಕರಾವಳಿಗೆ ಮತ್ತೂಂದು ಹೊಸ ರೈಲು ಆರಂಭಿಸಬೇಕು.
-ಗೋವಾ- ಮಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚರಿಸಲಿ. ಅದನ್ನು ಮಡಗಾಂವ್‌-ಮುಂಬಯಿ ರೈಲಿಗೂ ಜೋಡಿಸಬಹುದು.
– ತಿರುಪತಿಗೆ ಕುಂದಾಪುರ, ಕಾರವಾರದಿಂದ ನೇರ ರೈಲು ಸೇವೆ ಒದಗಿಸಲಿ.
– ಮಂಗಳೂರು – ಕಾರವಾರ ನಡುವೆ ಸಂಜೆ ವೇಳೆ (ಮಧ್ಯಾಹ್ನ 3.30ರಿಂದ ರಾತ್ರಿ 9.30ರ ನಡುವೆ ಯಾವುದೇ ರೈಲು ಇಲ್ಲ) ರೈಲು ಸೇವೆ ಇಲ್ಲ. ಇದರಿಂದ ತೊಂದರೆಯಾಗುತ್ತಿದೆ. ಸರಿಪಡಿಸಬೇಕು.

ಪುತ್ತೂರು ತಾಲೂಕು
ಪುತ್ತೂರಿನ ಕಬಕ ಪುತ್ತೂರು ನಿಲ್ದಾದಲ್ಲಿ ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಸಂಚರಿಸುವ ಎಲ್ಲ ಪ್ರಯಾಣಿಕ ರೈಲುಗಳು ಇಲ್ಲಿ ನಿಲ್ಲುತ್ತವೆ. ಅಕ್ಟೋಬರ್‌ ವರೆಗಿನ ಮಾಹಿತಿ ಪ್ರಕಾರ 2022-23ನೇ ಸಾಲಿನಲ್ಲಿ ಈ ನಿಲ್ದಾಣದಿಂದಲೇ ನೈಋತ್ಯ ರೈಲ್ವೇ ವಲಯವು ವಿವಿಧ ಮೂಲಗಳಿಂದ 1,40,51,813 ರೂ. ಆದಾಯ ಗಳಿಸಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ!
1. ಆದರ್ಶ ರೈಲು ನಿಲ್ದಾಣ ಯೋಜನೆಯಡಿ ಒಂದು ಪ್ಲಾಟ್‌ಫಾರ್ಮ್ ಹೊರತುಪಡಿಸಿ ಬೇರಾವ ಸೌಲಭ್ಯ ಒದಗಿಸಿಲ್ಲ.
ಈ ನಿಲ್ದಾಣದಲ್ಲಿ 24 ಕೋಚುಗಳ ರೈಲು ನಿಲ್ಲುವ ಸಾಮರ್ಥ್ಯವುಳ್ಳ ಎರಡು ಪ್ಲಾಟ್‌ಫಾರ್ಮ್ ಗಳಿವೆ. ಒಂದನೇ ಪ್ಲಾಟ್‌ಫಾರ್ಮ್ನಲ್ಲಿ ರೈಲು ನಿಲ್ದಾಣದ ಕಟ್ಟಡದ ಜತೆಗೆ ಹೊಂದಿಕೊಂಡಿರುವ ಶೆಡ್‌ ಬಿಟ್ಟರೆ ಎರಡೂ ಬದಿಯಲ್ಲಿ ಶೆಡ್‌ ಇಲ್ಲ. ಹಳೆಯ ಶೆಡ್‌ ಅನ್ನು ಎತ್ತರಿಸಬೇಕಿದೆ. ಪ್ಲಾಟ್‌ಫಾರ್ಮ್ ಉದ್ದಕ್ಕೂ ವಿಸ್ತರಿಸಬೇದೆ.
2. ಡಿಜಿಟಲ್‌ ಕೋಚ್‌ ಸೂಚನಾ ಫಲಕ ಬೇಕು
ಇದೇ ನಿಲ್ದಾಣದಲ್ಲಿ ಡಿಜಿಟಲ್‌ ಕೋಚ್‌ ಸೂಚನಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ,.
3. ಅಸರ್ಮಪಕ,ಅಸುರಕ್ಷಿತ ಪಾರ್ಕಿಂಗ್‌ ಸ್ಥಳ!
ಈ ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಇರುವ ಸ್ಥಳದ ನಿರ್ವಹಣೆಯಾಗಲೀ, ಅಭಿವೃದ್ಧಿಯಾಗಲೀ ಆಗಿಲ್ಲ. ಜೋರು ಮಳೆ ಬಂದರೆ ಕೆಸರಿನಿಂದ ಈ ಸ್ಥಳ ತುಂಬಿರುತ್ತದೆ. ರಾತ್ರಿ ಹೊತ್ತಲ್ಲಿ ದಾರಿ ತೋರಿಸಲು ಒಂದು ಲೈಟೂ ಇಲ್ಲ. ಪಾರ್ಕಿಂಗ್‌ ಸ್ಥಳದ ಸುತ್ತಲೂ ಹುಲ್ಲು ಬೆಳೆದು ತೊಂದರೆಯಾಗುತ್ತಿದೆ. ಆದರೆ ಇದರ ಶುಚಿತ್ವ ಆಗಬೇಕು.

Advertisement

ಬಂಟ್ವಾಳ ತಾಲೂಕು
ಅಜ್ಜಿಬೆಟ್ಟು-ದೈಪಲ ಸಂಪರ್ಕ; ಈಡೇರದ ಮೇಲ್ಸೆತುವೆ ಬೇಡಿಕೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಅಜ್ಜಿಬೆಟ್ಟಿನಿಂದ ದೈಪಲ ಸಂಪರ್ಕಕ್ಕೆ ರೈಲು ಹಳಿ ಅಡ್ಡಿಯಾಗಿದೆ. ಇಲ್ಲಿ ಕೂಡಲೇ ಮೇಲ್ಸೇತುವೆ ನಿರ್ಮಿಸಬೇಕಿದೆ. ಇದರಿಂದ ವಿದ್ಯಾರ್ಥಿಗಳ ಸಹಿತ ದೈಪಲ ಭಾಗದ ನೂರಾರು ಮಂದಿ ದೈನಂದಿನ ಕೆಲಸ ಕಾರ್ಯಗಳಿಗಾಗಿ ಹಳಿ ದಾಟುವ ಪರಿಸ್ಥಿತಿಯಿದೆ. ಇದನ್ನು ಸರಿಪಡಿಸಬೇಕು.
ಅಜ್ಜಿಬೆಟ್ಟು, ದೈಪಲ ಮಧ್ಯೆ ರೈಲು ಹಳಿಯು ಕೆಳಮಟ್ಟದಲ್ಲಿ ಸಾಗುತ್ತಿದ್ದು, ಈ ಎರಡು ಎತ್ತರ ಪ್ರದೇಶಗಳ ಮಧ್ಯೆ ಅತ್ಯಾಧುನಿಕ ತಂತ್ರಜ್ಞಾನದ ಸ್ಟೀಲ್‌ಬಿÅಜ್‌ ನಿರ್ಮಿಸಬಹುದು ಎಂಬುದು ಹೋರಾಟಗಾರರ ಅಭಿಪ್ರಾಯ.

ರಸ್ತೆ ಅಭಿವೃದ್ಧಿಗೆ ಇಲಾಖೆ ಅಡ್ಡಿ
ಅಜ್ಜಿಬೆಟ್ಟಿನಿಂದ ಶ್ರೀ ಕುಂಭೋದರಿ ದೇವಸ್ಥಾನ ಸಂಪರ್ಕ ರಸ್ತೆಯ 680 ಮೀ. ವ್ಯಾಪ್ತಿ ರೈಲ್ವೇ ಇಲಾಖೆಯ ಅಧೀನದಲ್ಲಿದ್ದು, ಇಲ್ಲಿ ರಸ್ತೆ ಅಭಿವೃದ್ಧಿಗೆ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಸ್ಥಳೀಯರು ಸಾಕಷ್ಟು ಬಾರಿ ದ.ಕ.ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಜತೆಗೆ ಮೈಸೂರು ವಿಭಾಗ ಕಚೇರಿಗೂ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಪ್ರಸ್ತುತ ಈ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.

ಫರಂಗಿಪೇಟೆ ನಿಲ್ದಾಣ ಮೇಲ್ದರ್ಜೆ
ಫರಂಗಿಪೇಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಸ್ಥಳೀಯ ಹೋರಾಟ ಸಮಿತಿಯ ಹಲವು ವರ್ಷಗಳ ಬೇಡಿಕೆ. ಫರಂಗಿಪೇಟೆ ಯಿಂದ ಕುಂಪನಮಜಲು ಸಂಪರ್ಕಕ್ಕೆ ಅಂಡರ್‌ ಪಾಸ್‌ ನಿರ್ಮಾಣದ ಬೇಡಿಕೆಯೂ ಇದೆ.

ಸುಳ್ಯ ತಾಲೂಕು
ಸುಳ್ಯ/ಸುಬ್ರಹ್ಮಣ್ಯ: ಸುಬ್ರಹ್ಮಣ್ಯ -ಪುತ್ತೂರು-ಮಂಗಳೂರು ನಡುವೆ ಬೆಳಗ್ಗೆ ಮತ್ತು ಸಂಜೆಯೂ ಪ್ಯಾಸೆಂಜರ್‌ ರೈಲು ಸಂಚರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ ಇನ್ನೂ ಕಾರ್ಯಗತ ಗೊಂಡಿಲ್ಲ.
– ಬೆಳಗ್ಗೆ ಹಾಗೂ ಸಂಜೆ ಪ್ಯಾಸೆಂಜರ್‌ ರೈಲು ಸಂಚರಿಸುವುದರಿಂದ ಈ ಭಾಗದ ಉದ್ಯೋಗಿಗಳು, ವಿದ್ಯಾರ್ಥಿಗಳು ಮಂಗಳೂರು, ಪುತ್ತೂರು ಭಾಗಕ್ಕೆ ತೆರಳಲು ಅನೂಕೂಲವಾಗಲಿದೆ. ಈಗ ಮದ್ಯಾಹ್ನ ಸುಬ್ರಹ್ಮಣ್ಯ- ಮಂಗಳೂರು ನಡುವೆ ಪ್ಯಾಸೆಂಜರ್‌ ರೈಲು ಓಡಾಟ ಇದೆ.
– ಕಡಬ ತಾಲೂಕು ಕೇಂದ್ರದ ಸಮೀಪದ ಕೋಡಿಂಬಾಳ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇದೆ. ಜತೆಗೆ ಎಕ್ಸ್‌ಪ್ರೆಸ್‌ ರೈಲುಗಳಿಗೆ ನಿಲುಗಡೆ ನೀಡುವಂತೆಯೂ ಬೇಡಿಕೆ ಇದೆ. ಇದಕ್ಕೂ ಸ್ಪಂದನೆ ಸಿಕ್ಕಿಲ್ಲ.
-ಕಡಬ ತಾಲೂಕಿನ ಎಡಮಂಗಲ ಪೇಟೆಯ ಎರಡು ಕಡೆ ರೈಲ್ವೇ ಗೇಟು ಇದ್ದು, ದಿನನಿತ್ಯ ಹಲವು ಬಾರಿ ರೈಲು ಸಾಗುವಾಗ ಗೇಟು ಹಾಕುವುದರಿಂದ ವಾಹನ ಸವಾರರು ಸಮಸ್ಯೆ ಅನುಭವಿ ಸುತ್ತಾರೆ. ಇಲ್ಲಿ ಮೇಲ್ಸೇತುವೆ/ಕೆಳ ಸೇತುವೆ ನಿರ್ಮಿಸುವಂತೆ ಬೇಡಿಕೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next