Advertisement

ಮಂಗಳೂರಿನಲ್ಲಿ ರೈಲ್ವೇ ಐಸೊಲೇಶನ್‌ ವಾರ್ಡ್‌ ಸಿದ್ಧ

07:13 PM Apr 11, 2020 | sudhir |

ಮಂಗಳೂರು: ಕೋವಿಡ್ 19 ಪ್ರಮಾಣ ಇನ್ನಷ್ಟು ಏರಿಕೆಯಾದರೆ ಅದನ್ನು ಎದುರಿಸಲು ಹಾಗೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ರೈಲ್ವೇ ಇಲಾಖೆ ಈಗಾಗಲೇ ತಮ್ಮ ಬೋಗಿಗಳನ್ನು ಐಸೊಲೇಶನ್‌ ವಾರ್ಡ್‌ಗಳಾಗಿ ಪರಿವರ್ತಿ ಸಿದ್ದು, ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ಇಂತಹ 20 ರೈಲ್ವೇ ಬೋಗಿಗಳು ಬಳಕೆಗೆ ಸಿದ್ಧವಾಗಿವೆ.

Advertisement

ಸದ್ಯ ದಕ್ಷಿಣ ಕನ್ನಡದಲ್ಲಿ ಕೋವಿಡ್ 19 ಸೋಂಕು ಕನಿಷ್ಠ ಪ್ರಮಾಣದಲ್ಲಿರುವ ಕಾರಣ ಐಸೊಲೇಶನ್‌ ರೈಲ್ವೇ ಬೋಗಿಗಳನ್ನು ಅಗತ್ಯವಿರುವ ಪ್ರದೇಶಗಳಿಗೆ ರವಾನಿಸುವ ನಿರೀಕ್ಷೆಯಿದೆ. ವೈದ್ಯಕೀಯ ತಜ್ಞರ ವಿಭಾಗದ ಮಾರ್ಗ ಸೂಚಿಯಂತೆ ಈ ಬೋಗಿಗಳು ಸಿದ್ಧವಾಗಿವೆ.

ಎಲ್ಲ ಬೆಡ್‌ಗಳಿಗೆ ಸುರಕ್ಷಾ ನೆಟ್‌
20 ಬೋಗಿಗಳು ತಲಾ 16 ಬೆಡ್‌ಗಳನ್ನು ಹೊಂದಿರಲಿವೆ. ಎಲ್ಲ ಬೆಡ್‌ಗಳು ಸುರಕ್ಷಾ ನೆಟ್‌ ಒಳಗೊಂಡಿರುತ್ತವೆ. ಬೋಗಿಯ ಸ್ಲಿಪರ್‌ ಕೋಚ್‌ಗಳ ನಡುವಿನ ಮಲಗುವ ಬರ್ತ್‌ಗಳನ್ನು ತೆಗೆದು ಕೆಳಗಿನ ಬರ್ತ್‌ ಅನ್ನು ಪೂರ್ಣ ಪ್ರಮಾಣದ ಹಾಸಿಗೆಯಾಗಿ ಬದಲಿಸಲಾಗಿದೆ. ಪ್ರತಿ ಬೋಗಿಯಲ್ಲಿ ವೈದ್ಯರು, ದಾದಿಯರು ಹಾಗೂ ಸಹಾಯಕ ಸಿಬಂದಿಯ ವಿಶ್ರಾಂತಿ ಕೊಠಡಿ ಇರುತ್ತದೆ. ಕೆಲವು ಟಾಯ್ಲೆಟ್‌ಗಳನ್ನು ಸ್ನಾನಗೃಹಗಳಾಗಿ ಪರಿವರ್ತಿಸಲಾಗಿದೆ. ಎಲ್ಲ ಬೋಗಿಗಳಲ್ಲಿ ಯುರೋಪಿಯನ್‌ ಹಾಗೂ ಸಾಮಾನ್ಯ ಕಮೋಡ್‌ಗಳು ಇವೆ.

ಟಾಯ್ಲೆಟ್‌ ಹಾಗೂ ಸ್ನಾನಗೃಹಗಳಲ್ಲಿರುವ ನೀರಿನ ನಳ್ಳಿಗಳನ್ನು ಅಡಿಯಲ್ಲಿ ಬಕೆಟ್‌ ಇಡಲು ಅನುಕೂಲ ವಾಗುವಂತೆ ಎತ್ತರಿಸ ಲಾಗಿದೆ. ಮೊಬೈಲ್‌, ಲ್ಯಾಪ್‌ಟಾಪ್‌ ಚಾರ್ಜ್‌ ಮಾಡಲು ವ್ಯವಸ್ಥೆ ಇದೆ. ವೈದ್ಯಕೀಯ ಉಪಕರಣಗಳ ಬಳಕೆಗೆ ಅನುಕೂಲ ವಾಗುವಂತೆ 230 ವೋಲ್ಟ್ ಸಾಮರ್ಥಯ ತನಕದ ವಿದ್ಯುತ್‌ ಪೂರೈಕೆ ವ್ಯವಸ್ಥೆ, ಡಸ್ಟ್‌ ಬಿನ್‌, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಗಳಿವೆ ಎಂದು ರೈಲ್ವೇ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next