Advertisement

ಆನೆಗಳನ್ನು ಕೊಂದ ಟ್ರೇನ್‌ ಎಂಜಿನ್‌ ವಶಕ್ಕೆ!

01:43 PM Oct 26, 2020 | Nagendra Trasi |

ಗುವಾಹಟಿ: ಸೆಪ್ಟೆಂಬರ್‌ ತಿಂಗಳಲ್ಲಿ ಎರಡು ಆನೆಗಳ ಸಾವಿಗೆ ಕಾರಣವಾದ ಗೂಡ್ಸ್‌ ಟ್ರೇನೊಂದರ ಎಂಜಿನ್‌ ಅನ್ನು ಅಸ್ಸಾಂನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೀಗೆ ನಡೆದಿರುವುದು ದೇಶದಲ್ಲಿ ಇದೇ ಮೊದಲು. ಸೆಪ್ಟೆಂಬರ್‌ 26 ಹಾಗೂ 27ರಂದು ಅಸ್ಸಾಂನ ಹೊಜಾಯ್‌ ಜಿಲ್ಲೆಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಗೂಡ್ಸ್‌ಟ್ರೇನ್‌ಗೆ ಸಿಲುಕಿ ಎರಡು ಆನೆಗಳು ಮೃತಪಟ್ಟಿದ್ದವು.

Advertisement

“ಅವಘಡ ನಡೆದ ಸ್ಥಳಗಳು ಆನೆ ಕಾರಿಡಾರ್‌ ವ್ಯಾಪ್ತಿಯಲ್ಲಿ ಬರುತ್ತವೆ. ಈ ಪ್ರದೇಶದಲ್ಲಿ ರೈಲಿನ ವೇಗ ಗಂಟೆಗೆ 40 ಕಿ. ಮೀ.ಗಿಂತ ಕಡಿಮೆಯಿರಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಸಿದ್ದೆವು. ಆದರೆ ಈ ರೈಲು ಗಂಟೆಗೆ 60 ಕಿ.ಮಿ. ವೇಗದಲ್ಲಿ ಸಾಗುತ್ತಿತ್ತು.

ಎರಡನೇ ಅಪಘಾತದ ತೀವ್ರತೆ ಹೇಗಿತ್ತೆಂದರೆ ಒಂದೂವರೆ ವರ್ಷದ ಆನೆಯನ್ನು ರೈಲು ಸುಮಾರು ಒಂದು ಕಿಲೋಮೀಟರ್‌ವರೆಗೂ ಎಳೆದೊಯ್ದಿದೆ. ನಾವೀಗ ರೈಲ್ವೆ ಅಧಿಕಾರಿಗಳ ವಿರುದ್ಧ ವನ್ಯಜೀವಿ(ಸಂರಕ್ಷಣೆ) ಕಾಯ್ದೆ 1972 ಅಡಿಯಲ್ಲಿ ದೂರು ದಾಖಲಿಸಿದೆ.

ಆಕ್ಷೇಪಾರ್ಹ ಹೇಳಿಕೆ: ಕಮಲ್‌ಗೆ ನೋಟಿಸ್‌

ಮಧ್ಯಪ್ರದೇಶದ ಬಿಜೆಪಿ ನಾಯಕಿ ಇಮಾರತಿ ದೇವಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌ ಅವರಿಗೆ ಚುನಾವಣಾ ಆಯೋಗ ಬುಧವಾರ ನೋಟಿಸ್‌ ನೀಡಿದೆ.

Advertisement

48 ಗಂಟೆಗಳ ಒಳಗಾಗಿ ಅದಕ್ಕೆ ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿಗೆ ತಾಕೀತು ಮಾಡಿದೆ. ಕಳೆದ ಭಾನುವಾರ ಗ್ವಾಲಿಯರ್‌ನ ದಬ್ರಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಕಮಲ್‌ನಾಥ್‌ ಬಿಜೆಪಿ ಅಭ್ಯರ್ಥಿ, ಸಚಿವೆ ಇಮಾರತಿ ದೇವಿಯವರನ್ನು ಐಟಂ ಎಂದು ಕರೆದಿದ್ದರು.

ಅದಕ್ಕೆ ತೀವ್ರ ಆಕ್ರೋಶವೂ ವ್ಯಕ್ತವಾ ಗಿತ್ತು. ಕಮಲ್‌ ವಿರುದ್ಧ ಚುನಾವಣಾ ಆಯೋಗಕ್ಕೆ ದೂರೂ ಸಲ್ಲಿಕೆಯಾಗಿತ್ತು. ಅವರು ಕ್ಷಮೆಯಾಚಿಸ ಬೇಕೆಂದು ಪ್ರತಿಭಟನೆ ನಡೆದಿತ್ತು. ರಾಷ್ಟ್ರೀಯ ಮಹಿಳಾ ಆಯೋಗವೂ ವಿವರಣೆ ನೀಡುವಂತೆ ಕಮಲ್‌ ನಾಥ್‌ರಿಗೆ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next