Advertisement
ಈ ಎರಡು ಕಾಮಗಾರಿಯನ್ನು ಹೊಸದಾಗಿ ಅಳವಡಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಜ. 21ರಂದು ಬೆಳಗ್ಗೆ 9ರಿಂದ ಜ.22ರ ಸಂಜೆ 5ರ ವರೆಗೆ ಕ್ರಾಸಿಂಗ್‌ನ್ನು ಸಂಪೂರ್ಣವಾಗಿ ಬಂದ್ ಮಾಡಿ ಕಾಮಗಾರಿ ನಡೆಯುತ್ತಿದೆ. ಪೂನಾ ಮೂಲದ ಸಂಸ್ಥೆಯೊಂದಿಗೆ ಗುತ್ತಿಗೆಯನ್ನು ಪಡೆದುಕೊಂಡಿದ್ದು ಸುಮಾರು 50 ಮಂದಿ ಕಾರ್ಮಿಕರೊಂದಿಗೆ ಜೆಸಿಬಿ ಸಹಿತ ಹಳಿಯನ್ನು ತೆಗೆಯುವ ಕಾರ್ಯದಿಂದ ಮೊದಲ್ಗೊಂಡು ಮರಳಿ ಹೊಸದಾಗಿ ಅಳವಡಿಸುವವರೆಗೆ ನಡೆಯಲಿದೆ.
Related Articles
Advertisement
ನಲುಗಿದ ಕೊಪ್ಪಲ ರಸ್ತೆ..?ಹಳೆಯಂಗಡಿ ಸುತ್ತಮುತ್ತ ಇರುವ ನಾಗರಿಕರು ತಮ್ಮ ವಾಹನಗಳನ್ನು ಇಂದಿರಾನಗರದ ಮೂಲಕ ಕೊಪ್ಪಲ ರಸ್ತೆಯನ್ನು ಬಳಸಿಕೊಂಡು ಹಳೆಯಂಗಡಿ ಹೆದ್ದಾರಿಯನ್ನು ಸಂಪರ್ಕಿಸುತ್ತಿದ್ದು, ತೀರ ಇಕ್ಕಟ್ಟಿನ ತಿರುವ ಮುರುವು ಸಹಿತ ರಸ್ತೆ ಕಿರಿದಾಗಿರುವ ಕೊಪ್ಪಲ ರಸ್ತೆಯು ವಾಹನಗಳ ಸಂಚಾರದಿಂದ ನಲುಗಿದ್ದು, ಸೇತುವೆಯ ಕೆಳಗೆ ಮಣ್ಣಿನ ರಸ್ತೆ ಸಹಿತ ಸಣ್ಣ ಕೆರೆಯ ಪ್ರದೇಶ, ರಸ್ತೆಯೊಂದಿಗೆ ಇರುವ ಮನೆಗಳು ಅದರ ಆವರಣ ಗೋಡೆಯ ಕಿರು ರಸ್ತೆಯಲ್ಲಿ ಘನವಾಹಗಳು ಸಂಚರಿಸಿದರೇ ರಸ್ತೆ ಕೆಡುವುದು ನಿಶ್ಚಿತ ಎಂದು ಸ್ಥಳೀಯರು ತಮ್ಮ ಆತಂಕವನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು. ನೆನಪಾದ ಮೇಲ್ಸೇತುವೆ.?
ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ಗೆ ಅತೀ ಬೇಡಿಕೆಯಲ್ಲಿರುವ ಮೇಲ್ಸೇತುವೆ ಯೋಜನೆ ಶುಕ್ರವಾರ ಮತ್ತೆ ನೆನಪಾದವು, ನಿರಂತರ ವಾಹನಗಳ ಸಂಚಾರ ಹಾಗೂ ಗೇಟ್ ಅಳವಡಿಸುವಾಗ ಇರುವ ರಸ್ತೆ ಒತ್ತಡದ ಜತೆಗೆ ನಿರಾತಂಕವಾಗಿ ಸಾಗಲು ಮೇಲ್ಸೇತುವೆ ಇದ್ದಿದ್ದಲ್ಲಿ ಇಂದು ರಸ್ತೆಯನ್ನು ಸಹ ಬಂದ್ ಮಾಡುವ ಆವಶ್ಯಕತೆಯೇ ಇರುತ್ತಿರಲಿಲ್ಲ, ಜನಪ್ರತಿನಿಧಿಗಳ ಭರವಸೆ ಅ ಧಿಕಾರಿಗಳ ಭೇಟಿ, ಬದಲಾಗುತ್ತಿರುವ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಬೇಸರದಿಂದ ಹಿರಿಯ ಗ್ರಾಮಸ್ಥರೊಬ್ಬರು ಹೇಳಿಕೊಂಡರು. ಹಳಿ ಅಳವಡಿಸುವ ಕಾರ್ಯ ಆರಂಭ
ಮಂಗಳೂರಿನಿಂದ ಹಳೆಯಂಗಡಿಯ ರೈಲ್ವೇ ಕ್ರಾಸಿಂಗ್‌ನವರೆಗೆ ಈಗಾಗಲೇ ಈ ಹಳಿಗಳನ್ನು ಅಳವಡಿಸುವ ಕಾರ್ಯವನ್ನು ನಡೆಸಿದೆ. ಹಳೆಯಂಗಡಿಯ ಪಕ್ಕದ ಕಲ್ಲಾಪುವಿನ ರೈಲ್ವೇ ಕ್ರಾಸಿಂಗ್‌ನಲ್ಲಿ ಕಳೆದ ಮೂರು ತಿಂಗಳಿನ ಹಿಂದೆಯೇ ನಡೆಸಲಾಗಿದೆ. ಇಲ್ಲಿ ರಸ್ತೆಯೊಂದರ ಕಿರು ಸೇತುವೆಯ ನಿರ್ಮಾಣ ಮಾಡುವಾಗ ರಸ್ತೆಯನ್ನು ಬಂದ್ ಮಾಡಿದ್ದಾಗ ಈ ಸಮಯದಲ್ಲಿಯೇ ರೈಲ್ವೇ ಹಳಿಯ ಕಾರ್ಯ ನಡೆಸಲಾಗಿದೆ. ಇನ್ನುಳಿದಂತೆ ಮೂಲ್ಕಿ ವ್ಯಾಪ್ತಿಯ ಕೊಲಕಾಡಿ ಹಾಗೂ ಮೈಲೊಟ್ಟು ಬಳಿಯ ಕ್ರಾಸಿಂಗ್‌ನಲ್ಲಿ ಹಳಿಯನ್ನು ಅಳವಡಿಸುವ ಕಾರ್ಯ ನಡೆಯಲು ಬಾಕಿಯಾಗಿದೆ ಎಂದು ಮೂಲ್ಕಿ ವ್ಯಾಪ್ತಿಯ ಎಲ್ಲ ಕ್ರಾಸಿಂಗ್‌ನ ನಿರ್ವಹಣೆ ನಿಗಾ ನಡೆಸುತ್ತಿರುವ ಚಂದ್ರಹಾಸ್ “ಉದಯವಾಣಿ ಸುದಿನಕ್ಕೆ ಮಾಹಿತಿ ನೀಡಿದರು.