ವಸಾಹತು ಕಾಲದ ಕೆಂಪು ಬಣ್ಣದ ಸಮವಸ್ತ್ರಕ್ಕೆ ಇತಿಶ್ರೀ ಹಾಡಿ, ಹೊಸ ಬಗೆಯ ಉಡುಪುಗಳನ್ನು ಅಳವಡಿಸುವ ಬಗ್ಗೆ ರೈಲ್ವೇ ಇಲಾಖೆ ಚಿಂತನೆ ನಡೆಸಿದೆ. ಈ ಸಂಬಂಧ ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವಿನಿ ಲೊಹಾನಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಕೂಲಿಗಳಿಗೆ ಹೊಸ ಸಮವಸ್ತ್ರ ಮತ್ತು ಪ್ರಯಾಣಿಕರ ಜತೆ ಅವರು ನಡೆದುಕೊಳ್ಳಬೇಕಾದ ರೀತಿ ನೀತಿಗಳ ಬಗ್ಗೆ ವಿವರ ನೀಡುವಂತೆ ಸೂಚಿಸಿದ್ದಾರೆ.
Advertisement
ಅಲ್ಲದೆ, ಇದುವರೆಗಿನ “ಕೂಲಿ’ ಹೆಸರು ಹೋಗಿ, “ಸೌಲಭ್ಯದಾತರು’ ಎಂಬ ಹೆಸರು ಕೂಡ ಇವರಿಗೆ ಬರುವ ಸಾಧ್ಯತೆಗಳಿವೆ. ಸ್ವಾತಂತ್ರ್ಯ ಬಂದಾಗಿ ನಿಂದಲೂ ರೈಲ್ವೇ ಸ್ಟೇಷನ್‌ಗಳಲ್ಲಿ ಕೆಲಸ ಮಾಡುವ ಕೂಲಿಗಳ ಸ್ಥಿತಿ ಸುಧಾರಿಸಿಯೇ ಇಲ್ಲ. ಆಗಿನಿಂದಲೂ ಇವರ ಯೂನಿಫಾರ್ಮ್ ಎಂದು ಗುರು ತಿಸಿಕೊಂಡದ್ದು ಕೇವಲ ಕೆಂಪು ಶರ್ಟ್ ಮತ್ತೂಂದು ಹೆಗಲ ಮೇಲಿನ ಟವೆಲ್. ಅಲ್ಲದೆ ತಮ್ಮ ಸ್ಥಿತಿ ಬದಲಾಗದ ಹಿನ್ನೆಲೆಯಲ್ಲಿ ಇವರ ಕೆಲಸ ಕೂಡ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿತ್ತು.
ಅಷ್ಟಕ್ಕೂ ಬದಲಾವಣೆ ಬಗ್ಗೆ ಕೆಲವು ಕಾರಣ ನೀಡಲಾಗಿದೆ. ಪ್ರಯಾಣಿಕರ ಜತೆ ಸೌಮ್ಯವಾಗಿ ನಡೆದುಕೊಳ್ಳುವ ಕೌಶಲ ತರಬೇತಿ ಕೂಲಿಗಳಿಗೆ ಅಗತ್ಯವಿದೆ. ರೈಲು ನಿಲ್ದಾಣದಲ್ಲಿ ಎಲ್ಲರಿಗಿಂತ ಮೊದಲು ಪ್ರಯಾಣಿಕರ ಜತೆ ಸಂವಹನ ನಡೆಸು ವವರೇ ಕೂಲಿಕಾರರು. ಹೀಗಾಗಿ ಅವರ ನಡವಳಿಕೆ ಪ್ರಯಾಣಿಕರನ್ನು ನೋಯಿಸುವಂತೆ ಇರಬಾರದು. ಪ್ರಯಾಣಿಕರ ಜತೆಗಿನ ಸಂಬಂಧ ವೃದ್ಧಿಸುವಂತಿರ ಬೇಕು, ತೃಪ್ತಿ ದಾಯಕವಾಗಿ ಇರಬೇಕು ಎಂದು ಲೊಹಾನಿ ಹೇಳಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.