Advertisement

ತಿಂಗಳಿಗೆ 24 ರೈಲ್ವೇ ಟಿಕೆಟ್‌ ಬುಕಿಂಗ್‌ ಮಾಡಲು ಅವಕಾಶ; ರೈಲಿನಲ್ಲಿ ಸಾತ್ವಿಕ ಊಟ

01:07 AM Jun 07, 2022 | Team Udayavani |

ಹೊಸದಿಲ್ಲಿ: ಐಆರ್‌ಸಿಟಿಸಿ ಆ್ಯಪ್‌ ಅಥವಾ ವೆಬ್‌ಸೈಟ್‌ನಲ್ಲಿ ರೈಲ್ವೇ ಟಿಕೆಟ್‌ ಬುಕ್‌ ಮಾಡಿಕೊಂಡು ಪ್ರಯಾಣ ಮಾಡುವವರಿಗೆ ಐಆರ್‌ಸಿಟಿಸಿ ಶುಭಸುದ್ದಿ ಕೊಟ್ಟಿದೆ.

Advertisement

ತಿಂಗಳಿಗೆ ಬುಕಿಂಗ್‌ ಮಾಡಬಹುದಾದ ಟಿಕೆಟ್‌ಗಳ ಮಿತಿಯನ್ನು 12ರಿಂದ 24ಕ್ಕೆ ಏರಿಸಲಾಗಿದೆ.

ನಿಮ್ಮ ಐಆರ್‌ಸಿಟಿಸಿ ಖಾತೆಯು ಆಧಾರ್‌ ಸಂಖ್ಯೆ ಯೊಂದಿಗೆ ಲಿಂಕ್‌ ಆಗಿದ್ದರೆ, ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕಿಂಗ್‌ ಮಾಡ ಬಹುದು. ಹಾಗೆ ಮಾಡು ವಾಗ ಪ್ರಯಾಣಿಕರಲ್ಲಿ ಒಬ್ಬರು ಆಧಾರ್‌ ಲಿಂಕ್‌ ಆಗಿರುವ ವ್ಯಕ್ತಿಯಾಗಿರಬೇಕು. ಹಾಗೆಯೇ ಆಧಾರ್‌ ಲಿಂಕ್‌ ಆಗಿರದ ಖಾತೆ ಬಳಸಿಕೊಂಡು ತಿಂಗಳಿಗೆ 12 ಟಿಕೆಟ್‌ಗಳವರೆಗೆ ಬುಕಿಂಗ್‌ ಮಾಡಬಹುದು. ರೈಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಐಆರ್‌ಸಿಟಿಸಿ ಸೋಮವಾರ ತಿಳಿಸಿದೆ.

ಈ ಹಿಂದೆ ಆಧಾರ್‌ ಲಿಂಕ್‌ ಆಗಿರುವ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 12 ಮತ್ತು ಆಧಾರ್‌ ಲಿಂಕ್‌ ಆಗದ ಖಾತೆಗಳ ಮೂಲಕ ತಿಂಗಳಿಗೆ ಗರಿಷ್ಠ 6 ಟಿಕೆಟ್‌ ಬುಕಿಂಗ್‌ಗೆ ಮಾತ್ರ ಅವಕಾಶವಿತ್ತು.

ರೈಲಿನಲ್ಲಿ ಸಾತ್ವಿಕ ಊಟ
ರೈಲಿನಲ್ಲಿ ತೆರಳುವ ಪ್ರಯಾಣಿಕರಿಗೆ ಊಟದ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಐಆರ್‌ಸಿಟಿಸಿ “ಫುಡ್ ಆನ್‌ ಟ್ರ್ಯಾಕ್‌’ ಹೆಸರಿನ ಹೊಸ ಆ್ಯಪ್‌ ಒಂದನ್ನು ಪರಿಚಯಿಸಿದೆ. ಈ ಆ್ಯಪ್‌ನಲ್ಲಿ ಪ್ರಯಾಣಿಕರು ತಮ್ಮ ಪಿಎನ್‌ಆರ್‌ ನಮೂದಿಸಿದರೆ, ನಿಮ್ಮ ರೈಲು ತೆರಳಲಿರುವ ಮುಂದಿನ ನಿಲ್ದಾಣಗಳಲ್ಲಿ ಸಿಗುವ ರೆಸ್ಟೋರೆಂಟ್‌ಗಳು ಕಾಣಸಿಗುತ್ತವೆ. ನೀವು ಆ ರೆಸ್ಟೋರೆಂಟ್‌ಗಳಿಂದ ನಿಮಗೆ ಇಷ್ಟವಾದ ಊಟ, ತಿಂಡಿಯನ್ನು ಆರ್ಡರ್‌ ಮಾಡಿಕೊಳ್ಳಬಹುದು. ಆ ನಿಲ್ದಾಣಕ್ಕೆ ರೈಲು ಹೋಗಿ ನಿಂತ ತತ್‌ಕ್ಷಣ ನಿಮ್ಮ ಸೀಟಿಗೇ ನೀವು ಆರ್ಡರ್‌ ಮಾಡಿದ ಆಹಾರ ಬಂದು ತಲುಪುತ್ತದೆ.

Advertisement

www.ecatering.irctc.co.in ಈ ವೆಬ್‌ಸೈಟ್‌ ಮೂಲಕವೂ ನೀವು ನಿಮ್ಮಿಷ್ಟದ ಆಹಾರವನ್ನು ಆರ್ಡರ್‌ ಮಾಡಬಹುದು ಎಂದು ಐಆರ್‌ಸಿಟಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next