Advertisement

ಕ್ವಾಲಿಟಿ ಕಂಪನಿಯಿಂದ ಬ್ಯಾಂಕುಗಳಿಗೆ 1400ಕೋಟಿ ರೂ. ವಂಚನೆ

01:07 PM Sep 22, 2020 | Nagendra Trasi |

ನವದೆಹಲಿ: ಬ್ಯಾಂಕ್‌ ಆಫ್ ಇಂಡಿಯಾ ನೇತೃತ್ವದ 10 ಬ್ಯಾಂಕುಗಳ ಒಕ್ಕೂಟಕ್ಕೆ ಸುಮಾರು 1,400 ಕೋಟಿ ರೂ.ಗಳಷ್ಟು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಡೈರಿ ದಿಗ್ಗಜ ಕ್ವಾಲಿಟಿ ಲಿಮಿಟೆಡ್‌ ಕಂಪನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಅಲ್ಲದೆ, ಸೋಮವಾರ 3 ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ.

Advertisement

ಐಸ್‌ಕ್ರೀಂ ತಯಾರಿಕಾ ಕಂಪನಿಯಾಗಿ ವಹಿವಾಟು ಆರಂಭಿಸಿ, ನಂತರ ಹಾಲಿನ ಇತರೆ ಉತ್ಪನ್ನಗಳ ಮಾರಾಟವನ್ನೂ ಆರಂಭಿಸಿದ್ದ ಕ್ವಾಲಿಟಿ ಲಿ. ಕಂಪನಿ, ಅದರ ನಿರ್ದೇಶಕರಾದ ಸಂಜಯ್‌ ಧಿಂಗ್ರಾ, ಸಿದ್ಧಾಂತ್‌ ಗುಪ್ತಾ, ಅರುಣ್‌ ಶ್ರೀವಾಸ್ತವ ಸೇರಿದಂತೆ ಇತರರ ವಿರುದ್ಧ ಕೇಸು ದಾಖಲಿಸಲಾಗಿದೆ. ಬ್ಯಾಂಕ್‌ ಆಫ್ ಇಂಡಿಯಾ ಸಲ್ಲಿಸಿದ ದೂರಿನ ಅನ್ವಯಈಕ್ರಮ ಕೈಗೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.

ಬ್ಯಾಂಕ್‌ ಆಫ್ ಇಂಡಿಯಾ, ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡಾ, ಆಂಧ್ರ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌, ಐಡಿಬಿಐ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ಗಳಿಗೆ ಒಟ್ಟಾರೆ 1.400.62 ಕೋಟಿ ರೂ.ಗಳನ್ನು ಕಂಪನಿ ವಂಚಿಸಿದೆ ಎಂದು ಸಿಬಿಐ ವಕ್ತಾರ ಆರ್‌.ಕೆ.ಗೌರ್‌ ತಿಳಿಸಿದ್ದಾರೆ. ಬ್ಯಾಂಕಿನ ನಿಧಿ ವರ್ಗಾವಣೆ, ಸುಳ್ಳು ವಹಿವಾಟು, ನಕಲಿ ದಾಖಲೆಗಳು/ರಸೀದಿ, ಲೆಕ್ಕಪತ್ರದಲ್ಲಿ ಸುಳ್ಳು ಮಾಹಿತಿ, ಆಸ್ತಿಪಾಸ್ತಿಗಳ
ವಿವರದಲ್ಲೂ ಸುಳ್ಳು ಹೇಳುವ ಮೂಲಕ ಕಂಪನಿ ವಂಚನೆ ನಡೆಸಿದೆ ಎಂದಿದ್ದಾರೆ.

ಎಚ್‌ಎಸ್‌ಬಿಸಿ ಷೇರುಗಳ ಮೌಲ್ಯದಲ್ಲಿ ದಾಖಲೆ ಕುಸಿತ 
ಚೀನಾ ಮೂಲದ ಹಾಂಕಾಂಗ್‌ ಶಾಂಘೈ ಬ್ಯಾಂಕ್‌ ಕಾರ್ಪೊರೇಷನ್‌ (ಎಚ್‌ಎಸ್‌ಬಿಸಿ) ಬ್ಯಾಂಕ್‌ನ ಷೇರುಗಳು ಶೇ. 51ರಷ್ಟು ದಾಖಲೆಯ ಕುಸಿತ ಕಂಡಿವೆ.
ಕಳೆದ 25 ವರ್ಷಗಳಲ್ಲಿ ಹೀಗಾಗಿರುವುದು ಇದೇ ಮೊದಲು ಎನ್ನಲಾಗಿದೆ. ಚೀನಾದಲ್ಲಿ ಹುಟ್ಟಿದ್ದರೂ, ಸದ್ಯ ಕ್ಕೆ ಈ ಬ್ಯಾಂಕಿನ ಕೇಂದ್ರ ಕಚೇರಿ ಲಂಡನ್‌ನಲ್ಲಿದೆ. ಇತ್ತೀ
ಚೆಗೆ, ಚೀನಾ ಸರ್ಕಾರ ತನ್ನಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಬಹುರಾಷ್ಟ್ರೀಯ ಕಂಪನಿಗಳನ್ನು ಪಟ್ಟಿ ಮಾಡಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದೆ.

ಆ ಪಟ್ಟಿಯಲ್ಲಿ ಎಚ್‌ಎಸ್‌ಬಿಸಿ ಕೂಡ ಸೇರುವ ಭೀತಿ ಆವರಿಸಿದೆ. ಇದೇ ಕಂಪನಿಯ ಷೇರುಗಳ ಮೌಲ್ಯ ಕುಸಿಯಲು ಕಾರಣ ಎನ್ನಲಾಗಿದೆ. ಕೆಲ ತಿಂಗಳುಗಳಿಂದ ಆವರಿಸಿದ ಈ ಭೀತಿಯಿಂದಾಗಿ, ಆ ಕಂಪನಿಯ ಷೇರುಗಳ ಮೌಲ್ಯ, ಒಟ್ಟಾರೆಯಾಗಿ ಶೇ.51ರಷ್ಟು ಇಳಿಮುಖವಾಗಿ ದೆ. 1995ರಲ್ಲಿ ಕಂಪನಿಯ ಷೇರುಗಳ ಮೌಲ್ಯ ಇಂಥ ಮಹಾಕುಸಿತವನ್ನು ಕಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next