ಲಕ್ನೋ( ಉತ್ತರ ಪ್ರದೇಶ): ಇಲ್ಲಿನ ಲಖೀಮಪುರ ಜಿಲ್ಲೆಯ ಕೋತವಾಲಿಯಲ್ಲಿ ತಾಯಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಮಕ್ಕಳೇ ದಲ್ಲಾಳಿಗಳಂತೆ ಸಹಕರಿಸುತ್ತಿದ್ದ ವಿಚಾರ ಪೊಲೀಸ್ ದಾಳಿಯ ವೇಳೆ ಬೆಳಕಿಗೆ ಬಂದಿದೆ.
ಖಚಿತ ಮಾಹಿತಿ ಪಡೆದು ಮಾಂಸದಂಧೆ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಐವರು ಯುವತಿಯರು ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳು ಬಳಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯನ್ನು ಸರಗನಾ ಎಂದು ಗುರುತಿಸಲಾಗಿದೆ. ಈಕೆಯ ಇಬ್ಬರು ಮಕ್ಕಳು ದಂಧೆಯಲ್ಲಿ ಈಕೆಗೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಗ್ರಾಹಕರಿಗೆ ಹುಡುಗಿಯರ ಫೋಟೋ ತೋರಿಸಿ ಅವರನ್ನು ಮನೆಗೆ ಕರೆದುಕೊಂಡು ಬರುವ ಕೆಲಸ ಇವರದಾಗಿತ್ತು ಎನ್ನಲಾಗಿದೆ.
ಗ್ರಾಹಕರಿಗಾಗಿ ಸರಗಾನಾ ಹತ್ತಿರದ ಹಳ್ಳಿಗಳಿಂದ ಯುವತಿಯರನ್ನು ಕರೆಸುತ್ತಿದ್ದಳು ಎನ್ನಲಾಗಿದೆ. ನಗರದ ಕೆಲವು ಯುವತಿಯರು, ವಿದ್ಯಾರ್ಥಿಗಳು ಕೂಡಾ ಸರಗಾನಾ ಬಳಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಡ್ ಇಲ್ಲವೆಂದು ಚಿಕಿತ್ಸೆಯನ್ನೂ ನೀಡದೆ ರೋಗಿಯನ್ನು ಆಸ್ಪತ್ರೆಯ ಹೊರಗೆ ಮಲಗಿಸಿದ ಸಿಬ್ಬಂದಿ
ಇಲ್ಲಿನ ಬೀದಿಯೊಂದರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿದ್ದು, ಈ ಕಾರಣದಿಂದ ಮಹಿಳಾ ಠಾಣೆಯ ಪೊಲೀಸರು ದಾಳಿ ಮಾಡಿದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದರು.