Advertisement
ಮುಳೂರು ನಿವಾಸಿ ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ (32 ವ) , ಮಹಮ್ಮದ್ ಅಜರುದ್ಧೀನ್ (26 ವ), ಮಹಮ್ಮದ್ ಹನೀಫ್ ಯಾನೆ ಆಸ್ಪಕ್ (28 ವ), ಮಹಮ್ಮದ್ ಇಸ್ಮಾಯಿಲ್ (22 ವ), ಚಂದ್ರನಗರ ನಿವಾಸಿ ಉಮ್ಮರಬ್ಬ (60 ವ), ಚಿಕ್ಕಮಗಳೂರು ಕೊಪ್ಪ ನಿವಾಸಿ ನವಾಜ್ (25 ವ) ಎಂಬವರನ್ನು ಬಂಧಿಸಿದ್ದು, ಇವರ ಜೊತೆಗಿದ್ದ ಇಸ್ಮಾಯಿಲ್, ರಫೀಕ್, ಅಬ್ಬು ಮಹಮ್ಮದ್ ಎಂಬವರು ಪರಾರಿಯಾಗಿದ್ದಾರೆ.
Related Articles
Advertisement
ಕಾಪು ಎಸ್ಐ ರಾಘವೇಂದ್ರ ಸಿ. ಅವರಿಗೆ ದೊರಕಿದ ಖಚಿತ ಮಾಹಿತಿಯಂತೆ, ಸಿಬಂದಿಗಳ ಜೊತೆಗೂಡಿ ಪೊಲೀಸರು ಧಾಳಿ ನಡೆಸಲಾಗಿತ್ತು. ಪೊಲೀಸರು ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡುತ್ತಿದ್ದಾಗ ಮೂಳೂರು ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬವರ ಮನೆ ಹತ್ತಿರ ಪಿಕ್‌ಅಪ್ ವಾಹನವೊಂದನ್ನು ನಿಲ್ಲಿಸಿದ್ದು, ಮನೆಯ ಸಮೀಪ ನಾಲ್ಕು ಕರುಗಳನ್ನು ಕಟ್ಟಿ ಹಾಕಿದ್ದು ಅಲ್ಲದೇ ಅಲ್ಲೇ ಸಮೀಪದಲ್ಲಿ ಮಾಂಸವನ್ನು ತಯಾರಿ ಮಾಡುತ್ತಿದ್ದು ಪತ್ತೆಯಾಗಿತ್ತು.
ಇದನ್ನೂ ಓದಿ: ನಿತ್ಯ ಎರಡು ಟನ್ ಕೋವಿಡ್ ತ್ಯಾಜ್ಯ ಸೃಷ್ಟಿ! ಖಾಸಗಿ ಸಂಸ್ಥೆಯಿಂದ ವೈಜ್ಞಾನಿಕವಾಗಿ ನಿರ್ವಹಣೆ
ಈ ವೇಳೆ ಆರೋಪಿಗಳು ಪೊಲೀಸ್ ಜೀಪನ್ನು ನೋಡಿ ಪರಾರಿಯಾಗಲೆತ್ನಿಸಿದ್ದು, ಪೊಲೀಸರು ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಮತ್ತೆ ಮೂವರು ಪರಾರಿಯಾಗಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇಸ್ಮಾಯಿಲ್‌ನೊಂದಿಗೆ ಸೇರಿಕೊಂಡು ಆತನ ಸೂಚನೆಯಂತೆ ಮಜೂರು ಪರಿಸರದಿಂದ 5 ಬಿಡಾಡಿ ದನದ ಕರುಗಳನ್ನು ಪಿಕ್ ಅಪ್ ವಾಹನದಲ್ಲಿ ಕದ್ದು ತಂದು, ಅದರಲ್ಲಿ 1 ಕರುವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.