Advertisement
ದೊಡ್ಡ ಜಿಲ್ಲೆಯಾದ ರಾಯಚೂರಿಗೆ ಇದು ತೀರ ಮುಜುಗರ ತಂದಿತ್ತು. ಆದರೆ, ಆಗ ತಾನೇ ಜಿಲ್ಲೆಗೆ ಆಗಮಿಸಿದ್ದ ಸಿಇಒ ಲಕ್ಷ್ಮೀಕಾಂತರೆಡ್ಡಿ ಇದೇ ಜಿಲ್ಲೆಯವರಾಗಿದ್ದು, ಇಲ್ಲಿನ ಫಲಿತಾಂಶಕಂಡು ಬೇಸರ ವ್ಯಕ್ತಪಡಿಸಿದ್ದರು. ಶತಾಯಗತಾಯ ಈ ಬಾರಿ ತುಸುವಾದರೂ ಫಲಿತಾಂಶ ಚೇತರಿಕೆ ಕಾಣಬೇಕು ಎಂದು 12 ವಾರಗಳ ಕಾರ್ಯಕ್ರಮ ಪರಿಚಯಿಸಿದರು. ಇದಕ್ಕೆ ಖುದ್ದು ಶಿಕ್ಷಣ ಖಾತೆ ಸಚಿವ ಸುರೇಶಕುಮಾರ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ.
Related Articles
Advertisement
ಯಾವ ಶಾಲೆಯಲ್ಲಿ ಅಂಕ ಕಡಿಮೆ ಬಂದಿದೆ, ಹೆಚ್ಚು ಬಂದಿದೆಎಂಬುದು ತಿಳಿಯಲಿದೆ. ಕಡಿಮೆ ಅಂಕ ಬಂದ ಶಾಲೆಗಳ ಮುಖ್ಯಶಿಕ್ಷಕರಿಗೆ ಮೇಲಧಿಕಾರಿಗಳು ನೇರವಾಗಿ ಸಂಪರ್ಕಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೇ, ಬಿಇಒ, ಬಿಆರ್‌ಸಿ, ವಿಶೇಷಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ನಿರ್ದೇಶನ ನೀಡುತ್ತಿದ್ದಾರೆ. ನಗರ ಶಾಲೆಗಳಲ್ಲೇ ಕಡಿಮೆ ಅಂಕ: ಆರು ವಾರಗಳಲ್ಲಿ ಎಲ್ಲೆಡೆ ಉತ್ತಮ ಪ್ರತಿಕ್ರಿಯ ಕಂಡು ಬಂದರೆ ರಾಯಚೂರು ನಗರದ ಶಾಲೆಗಳಲ್ಲೇ ಅತಿ ಕಡಿಮೆ ಅಂಕ ಸಂಪಾದಿಸಿದ ಮಾಹಿತಿ ಲಭ್ಯವಾಗಿದೆ. ಇದರಿಂದ ನಗರ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರಿಗೆ ವಿಶೇಷ ಸಭೆ ನಡೆಸಿದ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ವಿಚಾರವನ್ನು ಗಂಭೀರವಾಗಿ
ಪರಿಗಣಿಸಲಾಗಿದೆ. ಇದಕ್ಕಾಗಿ ಜಿಪಂ ಸಿಇಒ ಅವರು ಜಾರಿಗೊಳಿಸಿದ 12 ವಾರಗಳ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ನಿತ್ಯ ಪರೀಕ್ಷೆ ನಡೆಸಿ ಮಕ್ಕಳ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಈ ಮುಂಚೆ 30 ಅಂಕಗಳಿಗೆ ಒಂದು ಎರಡು ಅಂಕ ಪಡೆಯುತ್ತಿದ್ದ ಮಕ್ಕಳು ಆರು ವಾರಗಳಲ್ಲಿ 7-8 ಅಂಕ ಪಡೆಯುವ ಮಟ್ಟಿಗೆ ಸುಧಾರಣೆ ಕಂಡಿದ್ದಾರೆ. ಇನ್ನೂ ಆರು ವಾರಗಳಲ್ಲಿ ಇದು ಇನ್ನಷ್ಟು ಸುಧಾರಿಸುವ ವಿಶ್ವಾಸವಿದೆ. ಈ ಬಾರಿ ಉತ್ತೀರ್ಣ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ.
ಬಿ.ಎಚ್.ಗೋನಾಳ,
ಡಿಡಿಪಿಐ ರಾಯಚೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ
ಹಮ್ಮಿಕೊಂಡ 12 ವಾರಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ
ಜಾರಿಯಾಗುತ್ತಿದೆ. ಮಕ್ಕಳಿಗೆ ಪದೇ ಪದೇ ಪರೀಕ್ಷೆ ಬರೆಯುವುದರಿಂದ ಅನುಭವ ಹೆಚ್ಚಲಿದೆ. ಅದು ವಾರ್ಷಿಕ ಪರೀಕ್ಷೆಗೆ ಪೂರಕವಾಗಲಿದೆ. ಪ್ರತಿ ವಾರ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶ ಪರಿಶೀಲಿಸಲಾಗುತ್ತಿದೆ. ಕಡಿಮೆ ಅಂಕ ಬಂದ ಶಾಲೆಗಳಿಗೆ ಸುಧಾರಣೆಗೆ ನಿರ್ದೇಶನ ನೀಡಲಾಗುತ್ತಿದೆ. ವಿದ್ಯಾರ್ಥಿ ನಿರಂತರ ಹಾಜರಾತಿ ಕಾಯ್ದುಕೊಳ್ಳುವಲ್ಲಿ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಬಾರಿ ಫಲಿತಾಂಶ ಹೆಚ್ಚಳದ ನಿರೀಕ್ಷೆಯಲ್ಲಿದ್ದೇವೆ.
ಯುಕೇಶ,
ಪ್ರಭಾರ ಐಎಎಸ್ ಅಧಿಕಾರಿ ಮತ್ತು
ಕಾರ್ಯಕ್ರಮ ಉಸ್ತುವಾರಿ ಅಧಿಕಾರಿ ಪಾಲಕರು-ಶಿಕ್ಷಕರ ಅಸಹಕಾರ
12 ವಾರಗಳ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಕೂಡ ಇದರಲ್ಲಿ ಪಾಲಕರು, ಶಿಕ್ಷಕರ ಅಸಹಕಾರವೇ ಹೆಚ್ಚಾಗಿ ಕಂಡು ಬರುತ್ತಿದೆ. ನಿತ್ಯ ಬೆಳಗ್ಗೆ 9 ಗಂಟೆಗೆ ಶಾಲೆ ಆರಂಭವಾಗುತ್ತಿರುವ ಕಾರಣ ಸಮಯಕ್ಕೆ ಸರಿಯಾಗಿ ಶಿಕ್ಷಕರು ಬರುತ್ತಿಲ್ಲ. ಇನ್ನು ಪಾಲಕರು ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸದೆ ಹತ್ತಿ ಬಿಡಿಸಲು, ಹೊಲದ ಕೆಲಸಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಸಿದ್ಧಯ್ಯಸ್ವಾಮಿ ಕುಕನೂರು