Advertisement

ಮರಳಿದ 35 ಕಾರ್ಮಿಕರು ಹೋಮ್‌ ಕ್ವಾರೆಂಟೈನ್‌ಗೆ

01:49 PM Apr 30, 2020 | Naveen |

ರಾಯಚೂರು: ಕೆಲಸಕ್ಕೆ ವಲಸೆ ಹೋಗಿದ್ದ ಜಿಲ್ಲೆಯ 35 ಕೂಲಿ ಕಾರ್ಮಿಕರು ಬುಧವಾರ ನಗರಕ್ಕೆ ಆಗಮಿಸಿದ್ದು, ಅವರ ಆರೋಗ್ಯವನ್ನು ಸ್ಥಳದಲ್ಲಿಯೇ ಪರೀಕ್ಷಿಸಿದ ಬಳಿಕ ಹೋಮ್‌ ಕ್ವಾರೆಂಟೈನ್‌ಗೆ ಕಳುಹಿಸಲಾಗಿದೆ. ಜಿಲ್ಲೆಯ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರಿಗೆ ಗುಳೆ ಹೋಗಿದ್ದರು.

Advertisement

ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ಕಾರಣ ಸಾರಿಗೆ ವ್ಯವಸ್ಥೆ ಇಲ್ಲದ್ದಕ್ಕೆ ಅವರೆಲ್ಲ ತಾವಿದ್ದ ಸ್ಥಳದಲ್ಲಿಯೇ ಸಿಲುಕಿದ್ದರು. ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ವಾಸಿಸುತ್ತಿದ್ದ ಕಾರ್ಮಿಕರು ತಮ್ಮನ್ನು ತಮ್ಮೂರಿಗೆ ಕಳುಹಿಸುವಂತೆ ಕೋರಿಕೊಂಡಿದ್ದರು. ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ನಗರಕ್ಕೆ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಲಾಯಿತು. ಬೆಂಗಳೂರಿನಿಂದ ನಾಲ್ಕು ಬಸ್‌ ಗಳಲ್ಲಿ ರಾಯಚೂರು, ಯಾದಗಿರಿ ಸೇರಿ ಒಟ್ಟು 85 ಜನರು ನಗರಕ್ಕೆ ಆಗಮಿಸಿದ್ದರು.

ಅದರಲ್ಲಿ ಸಿಂಧನೂರು ತಾಲೂಕಿನ ಐವರು, ದೇವದುರ್ಗ 13, ಮಾನ್ವಿ ಒಬ್ಬರು, ಪೋತ್ನಾಳ 3, ಮಸ್ಕಿ 2, ರಾಯಚೂರು ನಗರ ಒಬ್ಬರು, ಕೋರ್ತಕುಂದ 4, ಲಿಂಗನಖಾನದೊಡ್ಡಿ 2 ಮತ್ತು ಹುಣಿಸೆಹಾಳ ಹುಡಾ 4 ಸೇರಿ ಒಟ್ಟು 35 ಜನ ಇದ್ದಾರೆ. ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಶೀಲ್ದಾರ್‌ ಡಾ| ಹಂಪಣ್ಣ ಮತ್ತು ಪೊಲೀಸರ ಸಮಕ್ಷಮದಲ್ಲಿ ಕಾರ್ಮಿಕರ ಮಾಹಿತಿ ಪಡೆದು ಆಯಾ ಗ್ರಾಮಗಳಲ್ಲಿ ಹೋಂ ಕ್ವಾರೆಂಟೈನ್‌ಗೆ ಒಳಪಡಿಸಿ 14 ದಿನ ಮನೆಯಲ್ಲಿರುವಂತೆ ಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next