Advertisement

ರಾಯಚೂರು: ಬಾಲಕಿಯಲ್ಲಿ ಜಿಕಾ ವೈರಸ್ ಪತ್ತೆ

02:12 PM Dec 12, 2022 | Team Udayavani |

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿಯ ಕೋಳಿಕ್ಯಾಂಪ್ ನ ಐದು ವರ್ಷದ ಬಾಲಕಿಯಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ರಾಜ್ಯಮಟ್ಟದ ತಂಡ ಗ್ರಾಮಕ್ಕೆ ದೌಡಾಯಿಸಿದ್ದು, ಸೂಕ್ತ ಕ್ರಮಗಳನ್ನು ಕೈಗೊಂಡಿದೆ.

Advertisement

ಜ್ವರ, ವಾಂತಿ ಭೇದಿಯಿಂದ ಬಳಲುತ್ತಿದ್ದ ಬಾಲಕಿಯನ್ನು ನ.15ರಿಂದ 18ರವರೆಗೆ ಬಳ್ಳಾರಿಯ ವಿಮ್ಸ್ ನಲ್ಲಿ ದಾಖಲಿಸಲಾಗಿತ್ತು. ಆಗ ಡೆಂಗ್ಯೂ, ಮಲೇರಿಯಾ ಸೇರಿದಂತೆ ಇನ್ನಿತರ ಸೋಂಕಿನ ಪರೀಕ್ಷೆ ನಡೆಸಲಾಗಿತ್ತು. ಆದರೆ, ಎಲ್ಲ ವರದಿಗಳು ನೆಗೆಟಿವ್ ಬಂದಿದ್ದವು. ಬಾಲಕಿ ಗುಣಮುಖಳಾಗಿದ್ದ ಕಾರಣ ಬಿಡುಗಡೆ ಮಾಡಲಾಗಿತ್ತು.

ಆದರೆ ಶಂಕೆಗೊಂಡ ವೈದ್ಯಾಧಿಕಾರಿಗಳು ಬಾಲಕಿಯ ನೆಗೆಟಿವ್ ವರದಿಗಳನ್ನು ಪುನಃ ಪರೀಕ್ಷೆಗೆ ಕಳುಹಿಸಿದಾಗ ಜಿಕಾ ಸೋಂಕು ತಗುಲಿರುವುದು ಖಚಿತಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ನ.9ರಂದು ಕೋಳಿಕ್ಯಾಂಪ್ ಗೆ ಭೇಟಿ ನೀಡಿರುವ ರಾಜ್ಯ ಮಟ್ಟದ ತಂಡ ಕುಟುಂಬದ ಮಾದರಿಗಳನ್ನು ಪಡೆದಿದೆ. ಸದ್ಯಕ್ಕೆ ಯಾರಿಗೂ ಸೋಂಕು ತಗುಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಆಸ್ತಿ ವಿಚಾರಕ್ಕೆ ತಂದೆಯ ಕೊಲೆಗೆ ಮಕ್ಕಳಿಂದಲೇ ಸುಪಾರಿ: ಶಿವಮೊಗ್ಗದಲ್ಲೊಂದು ಘಟನೆ

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೊಗ್ಯಾಧಿಕಾರಿ ಡಾ.ಸುರೇಂದ್ರ ಬಾಬು, ಈ ವೈರಸ್ ಈಗಾಗಲೇ ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಪತ್ತೆಯಾಗಿತ್ತು. ನಮ್ಮಲ್ಲೂ ಸೋಂಕು ಬಂದಿರುವುದು ಖಚಿತಗೊಂಡಿದೆ. ಆದರೆ, ಸೋಂಕಿನಿಂದ ಯಾವುದೇ ಅಪಾಯಗಳಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕೋಳಿಕ್ಯಾಂಪ್ ಸುತ್ತಲಿನ 3 ಕಿಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಮುಖ್ಯವಾಗಿ ಗರ್ಭಿಣಿಯರ ಮಾದರಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next