Advertisement

Raichur: ಲಾಡ್ಜ್ ನಲ್ಲಿ ಮಹಿಳೆ ನೇಣಿಗೆ ಶರಣು… ಕಾರಣ ನಿಗೂಢ

12:43 PM Dec 13, 2023 | Team Udayavani |

ರಾಯಚೂರು: ನಗರದ ಲಾಡ್ಜ್ ನಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ಉತ್ತರ ಪ್ರದೇಶ ಮೂಲದ ಸೋನಿ (24) ಮೃತ ಮಹಿಳೆ. ನೇಣು ಬಿಗಿದ ಸ್ಥಿತಿಯಲ್ಲಿ ಹೊಟೆಲ್ ಕೋಣೆಯಲ್ಲಿ ಶವ ಪತ್ತೆಯಾಗಿದೆ‌.

ಪತಿ ಅವಿನಾಶ್ ಹಾಗೂ ಸೋನಿ ಕಳೆದ ಮೂರು ವರ್ಷದಿಂದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ ಸೋನಿ ಹೆರಿಗೆಯಾಗಿದ್ದು, 20 ದಿನಗಳ ಹಸುಗೂಸಿದೆ. ಸೋನಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ಪತಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸ್ ಪಿ, ಡಿವೈಎಸ್ ಪಿ ಭೇಟಿ, ಪರಿಶೀಲನೆ ನಡೆಸಿದ್ದು, ಪತಿ ಸೇರಿದಂತೆ ಹೊಟೇಲ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Madhya Pradesh ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮೋಹನ್ ಯಾದವ್, ಪ್ರಧಾನಿ ಉಪಸ್ಥಿತಿ

Advertisement

Udayavani is now on Telegram. Click here to join our channel and stay updated with the latest news.

Next