Advertisement

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

11:53 AM Apr 28, 2024 | Team Udayavani |

ರಾಯಚೂರು: ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರು ಅಸ್ವಸ್ಥಗೊಂಡ ಘಟನೆ ತಾಲೂಕಿನ ವಡ್ಲೂರು ಗ್ರಾಮದಲ್ಲಿ ನಡೆದಿದೆ.

Advertisement

ಆರತಿ (7) ಪ್ರಿಯಾಂಕ್ (9) ಮೃತ ಮಕ್ಕಳು. ಹುಸೇನಮ್ಮ, ಮಾರುತಿ, ಲಕ್ಷ್ಮಣ ಅಸ್ವಸ್ಥಗೊಂಡಿದ್ದಾರೆ.

ಇವರು ಮೂಲತಃ ಲಿಂಗಸಗೂರು ತಾಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿಗಳಾಗಿದ್ದು, ಕೂಲಿ ಕೆಲಸಕ್ಕೆಂದು ವಡ್ಲೂರು ಗ್ರಾಮಕ್ಕೆ ಬಂದಿದ್ದರು. ಬ್ರಿಕ್ಸ್ ತಯಾರಿಕೆ ಘಟಕದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ರಜೆ ನಿಮಿತ್ತ ಪೋಷಕರ ಬಳಿ ಇಬ್ಬರು ಮಕ್ಕಳು ಕೂಡ ಆಗಮಿಸಿದ್ದರು. ನಿನ್ನೆ ರಾತ್ರಿ ಊಟಕ್ಕೆ ಚಪಾತಿ, ಹೆಸರಕಾಳು, ಅನ್ನ, ಸಾಂಬಾರ್ ಸೇವಿಸಿದ್ದರು. ಇದರಿಂದ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ, ಕೂಡಲೇ ಮಕ್ಕಳನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ಸಾಗಿಸಲಾಯಿತು.

ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಅಸ್ವಸ್ಥರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ರಾಯಚೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next