Advertisement

ಪ್ರಶಾಂತ ಭೂಷಣ್‌ ವಿರುದ್ಧದ ಪ್ರಕರಣ ಕೈಬಿಡಲು ಆಗ್ರಹ

05:50 PM Aug 26, 2020 | Suhan S |

ರಾಯಚೂರು: ಹಿರಿಯ ವಕೀಲ ಪ್ರಶಾಂತಭೂಷಣ್‌ ಅವರ ವಿರುದ್ಧ ದಾಖಲಿಸಿರುವ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೂಡಲೇ ರದ್ದುಪಡಿಸಬೇಕು ಎಂದು ಜನಾಂದೋಲನ ಮಹಾಮೈತ್ರಿ ಹಾಗೂ ನಾಗರಿಕ ಹಕ್ಕುಗಳ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗೆ ಮನವಿ ಸಲ್ಲಿಸಿದರು.

Advertisement

ದುರುದ್ದೇಶಪೂರ್ವಕವಾಗಿ ಪ್ರಶಾಂತ ಭೂಷಣ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಶಾಂತ ಭೂಷಣ್‌ ಅವರದ್ದು ನ್ಯಾಯಾಲಯದ ಹೊರಗೆ ನಡೆದ ಪ್ರಕರಣಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವುಗಳನ್ನು ಪರಿಗಣಿಸಬೇಕು. ಭೂಷಣ್‌ ಅವರು ಅಸಂವಿಧಾನಾತ್ಮಕವಾಗಿ ವರ್ತಿಸಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು. ಜನಸಂಗ್ರಾಮ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಹೋರಾಟಗಾರರಾದ ಜಾನ್‌ ವೆಸ್ಲಿ, ಎಂ.ಆರ್‌.ಭೇರಿ, ಶಿವರಾಜ ಘಂಟಿ, ಶ್ರೀನಿವಾಸ ಕೊಪ್ಪರ, ಚನ್ನಬಸವ ಜಾನೇಕಲ್‌, ಲಕ್ಷ್ಮಣ ಮಂಡಲಗೇರಾ, ಆಂಜನೇಯ, ಈರಣ್ಣ ಭಂಡಾರಿ ಸೇರಿ ಅನೇಕರಿದ್ದರು.

……………………………………………………………………………………………………………………………………………………

ಬೀದಿ ವ್ಯಾಪಾರಕ್ಕೆ ಅನುವು ಮಾಡಲು ಒತ್ತಾಯ : ರಾಯಚೂರು: ಜಿಲ್ಲೆಯ ಮುದಗಲ್‌ನ ರಂಗಮಂದಿರದ ಬಯಲು ಸ್ಥಳದಲ್ಲಿ ಬೀದಿ ವ್ಯಾಪಾರ ಮಾಡಿಕೊಳ್ಳಲು ಪುನಃ ಪರವಾನಗಿ ನೀಡಬೇಕು ಎಂದು ಒತ್ತಾಯಿಸಿ ಮುದಗಲ್‌ನ ಬೀದಿ ವ್ಯಾಪಾರಿಗಳ ಸಂಘದ (ಎಫ್‌ಐಟಿಯು ಸಂಯೋಜಿತ) ಸದಸ್ಯರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪುರಸಭೆಯಿಂದ ಹಿಂದೆ ಇದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಗುರುತಿನ ಚೀಟಿ ಸಮೇತ ಪರವಾನಗಿ ನೀಡಲಾಗಿತ್ತು. ಆದರೆ, ಕೋವಿಡ್‌ 19 ಹಿನ್ನೆಲೆಯಲ್ಲಿ ವ್ಯಾಪಾರ ಮಾಡದಂತೆ ಸೂಚನೆ ನೀಡಿದ್ದಕ್ಕಾಗಿ ವ್ಯಾಪಾರಿಗಳು ಸಹಮತ ಸೂಚಿಸಿದ್ದರು. ಆದರೆ, ಈಗ ಅಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

Advertisement

ಸುಮಾರು 35-40 ಕುಟುಂಬಗಳು ಇದೇ ವ್ಯಾಪಾರದ ಮೇಲೆ ಅವಲಂಬಿತಗೊಂಡಿವೆ. ಕಳೆದ ಮೂರ್‍ನಾಲ್ಕು ತಿಂಗಳಿಂದ ವ್ಯಾಪಾರವಿಲ್ಲದೇ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿ ಪರಿಣಮಿಸಿದೆ. ಆದರೆ, ಈಗ ಎಲ್ಲ ಕಡೆ ವ್ಯಾಪಾರ ವಹಿವಾಟು ಶುರುವಾಗಿದ್ದು, ಇನ್ನಾದರೂ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಶಾನೂರ್‌, ಫರೀದ್‌ ಊಮರಿ, ರಾಜಾನಾಯಕ ಸೇರಿದಂತೆ ಅನೇಕ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next