ರಾಯಚೂರು: ಇಲ್ಲಿನ ನಗರಸಭೆ 15 ತಿಂಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದೆ.
ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನರಸಮ್ಮ ಮಾಡಗಿರಿ, ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಾಜೀದ್ ಸಮೀರ್ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 35 ಸದಸ್ಯರ ಸಂಖ್ಯಾಬಲದಲ್ಲಿ ಬಿಜೆಪಿಯ 12 ಸದಸ್ಯರು, ಜೆಡಿಎಸ್ ನ ಮೂವರು ಸದಸ್ಯರು, ನಗರ ಶಾಸಕರ ಒಂದು ಮತ ಇದ್ದರೂ ಬಿಜೆಪಿ ಕಣದಿಂದ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿತು.
ಕಾಂಗ್ರೆಸ್ ನ 11 ಸದಸ್ಯರು, ಒಂಭತ್ತು ಪಕ್ಷೇತರರು, ಸಚಿವ ಎನ್.ಎಸ್.ಭೋಸರಾಜು, ಸಂಸದ ಕುಮಾರ ನಾಯಕ , ಎಂಎಲ್ ಸಿ ವಸಂತ ಕುಮಾರ ಮತಗಳು ಕಾಂಗ್ರೆಸ್ ಪರವಿದ್ದ ಕಾರಣಕ್ಕೆ ಗೆಲುವು ಅನಾಯಾಸ ಎನ್ನುವಂತಾಗಿತ್ತು. ಆದರೆ, ಪಕ್ಷೇತರರ ಬೆಂಬಲ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆ ಕಡಿಮೆಯಾಗಿದ್ದರಿಂದ ಕಣದಿಂದ ಹಿಂದೆ ಸರಿಯುವ ಮೂಲಕ ಕಾಂಗ್ರೆಸ್ ಹಾದಿ ಸುಗಮವಾಯಿತು. ಕಳೆದ ಬಾರಿ ಬಿಜೆಪಿಯ ಲಲಿತಾ ಕಡಗೋಲು ಅಧ್ಯಕ್ಷರಿದ್ದರೆ, ಕಾಂಗ್ರೆಸ್ ನ ನರಸಮ್ಮ ಮಾಡಗಿರಿ ಉಪಾಧ್ಯಕ್ಷರಿದ್ದರು.
ಇದನ್ನೂ ಓದಿ: Vijayapura: ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಬಿಸಿಯೂಟ ಸವಿದ ರಾಷ್ಟ್ರಪಕ್ಷಿ