Advertisement

ರಾಯಚೂರು: ಮಹಾಶಿವರಾತ್ರಿ ಸಂಭ್ರಮ-ಜಾಗರಣೆ

06:22 PM Mar 12, 2021 | Team Udayavani |

ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ಮಹಾಶಿವರಾತ್ರಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಾಗರಣೆ ನಿಮಿತ್ತ ವಿವಿಧ ದೇವಸ್ಥಾನಗಳ ವಿಶೇಷ ಪೂಜೆ ನಡೆದರೆ, ಸಂಘ-ಸಂಸ್ಥೆಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನಗರದ ಚಂದ್ರಮೌಳೇಶ್ವರ, ನಂದೀಶ್ವರ ದೇವಸ್ಥಾನ, ಏಗನೂರು ಟೆಂಪಲ್‌, ನೀಲಕಂಠೇಶ್ವರ ದೇವಸ್ಥಾನ, ನಗರೇಶ್ವರ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳ ಪುರಾಣ ಪ್ರವಚನ, ಸಂಗೀತ ಕಾರ್ಯಕ್ರಮ, ಭಜನೆಯಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧೆಡೆ ಶಿವಪುರಾಣ ಪ್ರವಚನ ಆಯೋಜಿಸಿದ್ದರೆ ಜನ ಜಾ ಗರಣೆ ನಿಮಿತ್ತ
ಇಡೀ ದಿನ ಶಿವಧ್ಯಾನ, ಶಿವಪೂಜೆಯಲ್ಲಿ ತೊಡಗಿದ್ದು ಕಂಡು ಬಂತು.

Advertisement

ಶಿವನ ದೇವಸ್ಥಾನಗಳಲ್ಲಿ ಗುರುವಾರ ಬೆಳಗಿನ ಜಾವದಿಂದಲೇ ಪೂಜಾ, ವಿಧಿ- ವಿಧಾನ ಕೈಂಕರ್ಯಗಳನ್ನು ಜರುಗಿದವು. ಶಿವನನ್ನು ಒಲಿಸಲು ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ರುದ್ರಾಭಿಷೇಕ ನೆರವೇರಿಸಲಾಯಿತು. ದೇವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿದ್ದು ಕಂಡು ಬಂತು. ಭಕ್ತರ ದರ್ಶನಕ್ಕಾಗಿ ವಿಶೇಷವಾಗಿ ಬೊಂಬುಗಳನ್ನು ಕಟ್ಟಲಾಗಿತ್ತು.

ಐಬಿ ರಸ್ತೆಯ ರಾಮಲಿಂಗೇಶ್ವರ ದೇವಸ್ಥಾನ, ನೇತಾಜಿ ನಗರದ ನಗರೇಶ್ವರ ದೇವಸ್ಥಾನ, ಮಾವಿನಕೆರೆ ಪಕ್ಕದ ನಂದೀಶ್ವರ ದೇವಸ್ಥಾನ, ಎನ್‌ಜಿಒ ಕಾಲೋನಿಯ ನೀಲಕಂಠೇಶ್ವರ ದೇವಸ್ಥಾನ, ಬೊಳಮಾನದೊಡ್ಡಿಯ ಏಗನೂರು ದೇವಸ್ಥಾನ, ನಿಜಲಿಂಗಪ್ಪ ಕಾಲೋನಿಯ ಈಶ್ವರ ದೇವಸ್ಥಾನ ಹಾಗೂ ಮಾಣಿಕಪ್ರಭು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಇನ್ನೂ ತಾಲೂಕಿನ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನ, ಮನ್ಸಲಾಪುರದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ಜರುಗಿಸಲಾಯಿತು.

ಪ್ರಮುಖ ದೇವಸ್ಥಾನಗಳ ಮುಂದೆ ಜನದಟ್ಟಣೆ ಹೆಚ್ಚಾಗದಂತೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಕೆಲ ದೇವಸ್ಥಾನಗಳಲ್ಲಿ ಪ್ರಸಾದದ ವ್ಯವಸ್ಥೆ ಮಾಡಿದ್ದರೆ, ಕೆಲವೆಡೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜ್ಯೋತಿರ್ಲಿಂಗಗಳ ಮೆರವಣಿಗೆ:
ಮಹಾಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಗರದ ಬಸವೇಶ್ವರ ವೃತ್ತದ ಪಕ್ಕದಲ್ಲಿರುವ ವಾಲ್ಕಟ್‌ ಮೈದಾನದಲ್ಲಿ
ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ 6 ಅಡಿ ಎತ್ತರದ ವಿಶೇಷ ಶಿವಲಿಂಗ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಶಾಂತಿಯಾತ್ರೆ ಜರುಗಿತು.

Advertisement

ರಂಗಮಂದಿರ ಬಳಿ ಸಂಸ್ಥೆಯ ಸ್ಮಿತಾ ಸಹೋದರಿ ಚಾಲನೆ ನೀಡಿದರು. ಅಲ್ಲಿಂದ ಅಂಬೇಡ್ಕರ್‌ ವೃತ್ತ, ತೀನ್‌ ಕಂದಿಲ್‌, ನೇತಾಜಿ ವೃತ್ತ, ಪಟೇಲ್‌ ವೃತ್ತ, ಬಸವೇಶ್ವರ ವೃತ್ತದ ಮೂಲಕ ವಾಲ್ಕಟ್‌ ಮೈದಾನಕ್ಕೆ ಯಾತ್ರೆ ತಲುಪಿತು. ಸಂಜೆ 6ಕ್ಕೆ ವಾಲ್ಕಟ್‌ ಮೈದಾನದಲ್ಲಿ ಅವರು ಸಂಗೀತ ಕಾರ್ಯಕ್ರಮ ಜರುಗಿತು. ವಿವಿಧ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next