Advertisement

Raichur; ಪ್ರೀತಿಗೆ ಮನೆಯವರ ವಿರೋಧ; ಕಟ್ಟಡದಿಂದ ಜಿಗಿದು ಯುವತಿ ಆತ್ಮಹತ್ಯೆ

03:25 PM Jun 23, 2024 | Team Udayavani |

ರಾಯಚೂರು: ಇಲ್ಲಿನ ಜಲಾಲ್ ನಗರದಲ್ಲಿ ಅಂತರ್ಜಾತಿ ವಿವಾಹಕ್ಕೆ ಯುವಕನ ಮನೆಯವರು ವಿರೋಧಿಸಿದ್ದಕ್ಕೆ ಮನನೊಂದ ಯುವತಿ ಸಾಂತ್ವನ ಕೇಂದ್ರದ ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement

ಅನುರಾಧಾ ಸಾವಿಗೀಡಾದ ಯುವತಿ. ಆಕೆ ವಿನಯ್ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಮದುವೆಯಾಗಲು ನಿರ್ಧಿರಿಸಿದ್ದರು. ಆದರೆ, ಮದುವೆಗೆ ಜಾತಿ ಅಡ್ಡಿಯಾಗಿದ್ದು, ಯುವಕನ ಮನೆಯವರು ವಿರೋಧಿಸಿದ್ದರು ಎಂದು ತಿಳಿದು ಬಂದಿದೆ.

ಈ ವಿಚಾರ ಠಾಣೆ ಮೆಟ್ಟಿಲೇರಿದ್ದು, ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣಕ್ಕೆ ಪೊಲೀಸರು ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಆ ಕಟ್ಟಡದಿಂದಲೇ ಯುವತಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next