Advertisement

ರಾಜಿ ಸಂಧಾನಕ್ಕೆ ಬಂದವರಿಗೆ ಬೆಂಕಿ ಹಚ್ಚಿದ ಪ್ರಕರಣ : ಗಂಭೀರ ಗಾಯಗೊಂಡ ನಾಲ್ವರ ದುರ್ಮರಣ

02:43 PM Jun 30, 2022 | Team Udayavani |

ನಾರಾಯಣಪುರ: ಇಲ್ಲಿನ ಛಾಯಾ ಕಾಲೋನಿಯಲ್ಲಿ ದಂಪತಿಗಳ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಅಳಿಯನೋರ್ವ ರಾಜಿ ಸಂಧಾನಕ್ಕೆ ಬಂದ ಮಾವ ಸೇರಿ ನಾಲ್ವರಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಅಮಾನುಷ ಘಟನೆಗೆ ಸಂಬಂಧಿಸಿದಂತೆ ಗಂಭೀರ ಸುಟ್ಟು ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ನಾಲ್ವರು ಕೂಡಾ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಹೆಣ್ಣು ಕೊಟ್ಟ ಮಾವ ಸೇರಿ ಇತರೆ ಮೂವರು ಸಂಬಂಧಿಗಳನ್ನು ಬುಧವಾರ ಆರೋಪಿ ಶರಣಪ್ಪ ತನ್ನ ಮನೆಯ ಮೇಲ್ಛಾವಣಿ ಕೊಠಡಿಯಲ್ಲಿ ಮಾತುಕತೆ ನಡೆಸೊಣ ಎಂದು ನಾಲ್ವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಬಾಗಲಿಗೆ ಬೀಗ ಜಡೆದು ಕಿಟಕಿ ಮೂಲಕ ನಾಲ್ವರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ಜ್ವಾಲೆಯಿಂದ ಗಂಭೀರ ಗಾಯಗೊಂಡಿರುವ ನಾಲ್ವರನ್ನು ಸ್ಥಳೀಯರ ನೆರವಿನೊಂದಿಗೆ ಇಳಿಸಿ, ಲಿಂಗಸೂಗುರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮಾರ್ಗ ಮಧ್ಯೆಯೆ ನಾಗೇಶ ಹಗರಗುಂಡ (35) ಸಾವನಪ್ಪಿದರೆ, ಇನ್ನೋರ್ವ ಶರಣಪ್ಪ ಸರೂರ (62) ರಾಯಚೂರು ರಿಮ್ಸ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದಾನೆ. ಇನ್ನಿಬ್ಬರ ಪೈಕಿ ಆರೋಪಿ ಶರಣಪ್ಪನಿಗೆ ಹೆಣ್ಣು ಕೊಟ್ಟ ಮಾವನಾದ ಸಿದ್ದರಾಮಪ್ಪ ಮುರಾಳ (62) ಹಾಗೂ ಮುತ್ತಪ್ಪ ಮುರಾಳ (38) ಇಬ್ಬರು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವಾಗ ಬುಧವಾರ ತಡರಾತ್ರಿ ವೇಳೆಗೆ ಇಬ್ಬರು ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ.

ಇದನ್ನೂ ಓದಿ : ಮಂಗಳೂರು: ಭಾರಿ ಮಳೆಗೆ ಹಳಿ ಮೇಲೆ ಮಣ್ಣು ಕುಸಿತ ; ರೈಲುಗಳು ರದ್ದು

Advertisement

ಆರೋಪಿ ಶರಣಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯಲ್ಲಿ ನಾಲ್ಕು ಜನರ ಸಾವಾಗಿದ್ದು ಈ ಕುರಿತು ನಾರಾಯಣಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ನಾಲ್ಕು ಜನರ ಶವಗಳ ಪೈಕಿ ನಾಗೇಶ ಎಂಬುವವರ ಶವವನ್ನು ಲಿಂಗಸೂಗುರು ಆಸ್ಪತ್ರೆಯಲ್ಲೆ ಬುಧವಾರ ಶವ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಿದ್ದರೆ. ಇನ್ನುಳಿದ ಮೂವರಾದ ಶರಣಪ್ಪ ಸರೂರ, ಸಿದ್ದರಾಮಪ್ಪ ಮುರಾಳ, ಮುತ್ತಪ್ಪ ಮುರಾಳ ಅವರೆಲ್ಲರ ಶವಗಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next