Advertisement

ರಾಯಚೂರು: ಆಸ್ಪತ್ರೆಗೆ ಕರೆತರುವಾಗ ದಾರಿಮಧ್ಯೆ ಆಂಬುಲೆನ್ ನಲ್ಲೇ ಹೆರಿಗೆ

03:14 PM Nov 08, 2020 | keerthan |

ರಾಯಚೂರು: ಜಿಲ್ಲೆಯಲ್ಲಿ 108 ವಾಹನದಲ್ಲಿ ಹೆರಿಗೆಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು ಇಂದು ಮತ್ತೆರಡು ಘಟನೆ ನಡೆದಿವೆ. ಒಬ್ಬ ಮಹಿಳೆ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದರೆ, ಇನ್ನೊಬ್ಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

Advertisement

ಸಿರವಾರ ತಾಲೂಕಿನ ಗಣದಿನ್ನಿ‌ ಗ್ರಾಮದ ಹನುಮಂತಿಗೆ ಶನಿವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, 108 ವಾಹನದಲ್ಲಿ ರಿಮ್ಸ್ ಆಸ್ಪತ್ರೆಗೆ ಕರೆ ತರಲಾಗುತ್ತಿತ್ತು. ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಶೂಶ್ರುಷಕಿ ಲಕ್ಷ್ಮಿ ಹಾಗೂ ಕುಟುಂಬಸ್ಥರೊಂದಿಗೆ ಆಂಬ್ಯುಲೆನ್ಸ್ ನಲ್ಲೇ ಹೆರಿಗೆ ಮಾಡಿಸಲಾಗಿದೆ.  ಅವಳಿ ಹೆಣ್ಣು‌ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ಮಾಡಿಸಿದ ಬಳಿಕ ಆರೋಗ್ಯ ಕವಚ ಸಿಬ್ಬಂದಿ ತಾಯಿ, ಮಕ್ಕಳನ್ನು ರಿಮ್ಸ್ ಗೆ ದಾಖಲಿಸಿದ್ದು, ತಾಯಿ, ಮಕ್ಕಳು‌ ಆರೋಗ್ಯವಾಗಿದ್ದಾರೆ.

ದೇವದುರ್ಗ ತಾಲೂಕಿನ ಬೆಂಚಿಮರಡಿ ತಾಂಡಾದ ಅಂಬಾರಿ ಬಾಯಿ ಕೂಡ 108 ವಾಹನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ದೇವದುರ್ಗ ಆಸ್ಪತ್ರೆಗೆ ಕರೆದೊಯ್ಯುವಾಗ ಆರೋಗ್ಯ ಕವಚ ಸಿಬ್ಬಂದಿ ಆಂಬ್ಯುಲೆನ್ಸ್ ನಲ್ಲೇ ಸುಲಭವಾಗಿ ಹೆರಿಗೆ ಮಾಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next