Advertisement

ಬನಾನಾ ಹರಕೆ, ಡಬ್ಬಿಂಗ್‌ ಗಾನಾ ಬಜಾನಾ!

10:03 PM Feb 26, 2023 | Team Udayavani |

ರಾಯಚೂರು: ಚುನಾವಣೆ ಎಂದರೆ ಎಷ್ಟು ಗಂಭೀರ ವಿಷಯವೋ ಅಷ್ಟೇ ಸ್ವಾರಸ್ಯಕರ- ವಿನೋದಭರಿತ ಸಂಗತಿಗೂ ಸಾಕ್ಷಿಯಾಗುತ್ತದೆ. ಇದಕ್ಕೊಂದು ಸೇರ್ಪಡೆ ಬಾಳೆಹಣ್ಣಿನ ಹರಕೆ ಟ್ರೆಂಡ್‌!

Advertisement

ಸಾಮಾನ್ಯವಾಗಿ ಎಪ್ರಿಲ್‌-ಮೇ ತಿಂಗಳು ಜಾತ್ರೆ ಸಮಯ ಎಂದೇ ಕರೆಯಲಾಗುತ್ತದೆ. ಇಂಥ ಜಾತ್ರೆಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಬಾಳೆಹಣ್ಣಿನ ಮೇಲೆ ಹೆಸರು ಬರೆದು ರಥಕ್ಕೆ ಎಸೆಯುವ ಹೊಸ ಪದ್ಧತಿ ಶುರುವಾಗಿದೆ. ಇದು ಎಲ್ಲೋ ಒಂದೆರಡು ಕಡೆ ನಡೆಯುತ್ತಿರುವ ಸಂಗತಿಯಲ್ಲ. ಪ್ರತೀ ಊರಲ್ಲೂ ಈ ರೀತಿಯ ಹರಕೆ ಸಾಮಾನ್ಯವಾಗುತ್ತಿದೆ. ಅಷ್ಟು ಮಾತ್ರ ವಲ್ಲ ಅದನ್ನು ಫೋಟೋ ತೆಗೆದು, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡು ತ್ತಾರೆ.

“ನಮ್ಮ ಮುಂದಿನ ಎಂಎಲ್‌ಎ ಇವರೇ’ ಎಂದು ಹೆಸರು ಬರೆಯುವುದು ಉಚ್ಛಾಯಗಳಿಗೆ, ರಥಗಳಿಗೆ ಎಸೆದು ಹರಕೆ ತೀರಿಸುವುದೇ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಕಾಯಕವಾಗಿ ಬಿಟ್ಟಿದೆ.

ಡಬ್ಬಿಂಗ್‌ ಗಾನ ಬಜಾನಾ: ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಡೆ ರಾಜಕೀಯ ಚಟುವಟಿಕೆಗಳೂ ಬಿರುಸು ಪಡೆದಿವೆ.

ಸದ್ಯಕ್ಕಂತೂ ಅಭ್ಯರ್ಥಿಗಳ ಪ್ರಚಾರದ್ದೇ ಹಾವಳಿ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ಖಾತೆಗಳನ್ನು ತೆರೆದು ಹತ್ತಾರು ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಅದರಲ್ಲೂ ಡಬ್ಬಿಂಗ್‌ ಹಾಡುಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಕೆಲವೊಂದು ಸಿನೆಮಾ ಹಾಡುಗಳನ್ನೇ ತಮ್ಮ ನಾಯಕನ ಬಣ್ಣನೆಗೆ ಬಳಸಿಕೊಳ್ಳುತ್ತಿದ್ದು, ಇಂದ್ರ ಚಂದ್ರ ಎಂದೆಲ್ಲ ಹಾಡಿ ಹೊಗಳುವುದು, ಅವರಿಲ್ಲದೇ ಹೋದರೆ ಕ್ಷೇತ್ರದ ಜನ ಅನಾಥರಾಗುತ್ತಾರೆ ಎಂಬಂಥ ಸೆಂಟಿಮೆಂಟ್‌ ಡೈಲಾಗ್‌ಗಳನ್ನು ಅಳವಡಿಸಿ ಜನರ ಮನ ಪರಿವರ್ತನೆಗೆ ಯತ್ನಿಸಲಾಗುತ್ತಿದೆ. ಇನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇನ್‌ಸ್ಟಾ ಗ್ರಾಂ ಸಹಿತ ವಿವಿಧ ಪೇಜ್‌ಗಳಲ್ಲಿ, ಸ್ಟೇಟಸ್‌ ಹಾಕಿ ಪ್ರಚಾರ ನಡೆಸಲಾಗುತ್ತಿದೆ.

Advertisement

ಇನ್ನೂ ಕೆಲವು ಅಭ್ಯರ್ಥಿಗಳು ಮತದಾರರಿಗೆ ಕರೆ ಮಾಡಿಸಿ ಬೆಂಬಲ ಯಾಚಿಸುತ್ತಿದ್ದಾರೆ. ಯುವಕ- ಯುವತಿಯರನ್ನು ಇದೇ ಕೆಲಸಕ್ಕೆ ನಿಯೋಜಿಸಿದ್ದು, ನಿತ್ಯ ಕರೆ ಮಾಡುವುದೇ ಅವರ ಕಾಯಕವಾಗಿದೆ.

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next