Advertisement

ರಾಯಚೂರು: 6 ಜನರಿಗೆ ಸೋಂಕು

09:24 AM Jun 28, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ಶನಿವಾರ ಮತ್ತೆ 6 ಕೋವಿಡ್ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಿಂದ 415 ಶಂಕಿತರ ಗಂಟಲಿನ ದ್ರವ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Advertisement

ದೇವದುರ್ಗ ತಾಲೂಕಿನಿಂದ 109, ಲಿಂಗಸುಗೂರು ತಾಲೂಕಿನಿಂದ 89,ಮಾನ್ವಿ ತಾಲೂಕಿನಿಂದ 56, ಸಿಂಧನೂರು ತಾಲೂಕಿನಿಂದ 99 ಮತ್ತು ರಾಯಚೂರು ತಾಲೂಕಿನಿಂದ 62 ಮಾದರಿಗಳನ್ನು ಕಳುಹಿಸಲಾಗಿದೆ. ಹಿಂದೆ ಕಳುಹಿಸಿದ ವರದಿಗಳಲ್ಲಿ 172 ನೆಗೆಟಿವ್‌ ಆಗಿವೆ.

ಈವರೆಗೆ 22,131 ಜನರ ಗಂಟಲು ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಿದ್ದು, 20,098 ವರದಿಗಳು ನೆಗೆಟಿವ್‌ ಆಗಿವೆ. ಉಳಿದ 1,564 ಸ್ಯಾಂಪಲ್‌ಗ‌ಳ ಫಲಿತಾಂಶ ಬರಬೇಕಿದೆ. ಫೀವರ್‌ ಕ್ಲಿನಿಕ್‌ಗಳಲ್ಲಿಂದು 513 ಜನರನ್ನು ಥರ್ಮಲ್‌ ಸ್ಕ್ರೀನಿಂಗ್‌ ಗೆ ಒಳಪಡಿಸಲಾಗಿದೆ. ಈವರೆಗೆ 463 ಪಾಸಿಟಿವ್‌ ಪ್ರಕರಣ ಗಳು ವರದಿಯಾಗಿವೆ. 399 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ವಿವಿಧ ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ 175 ಜನರನ್ನು ಇರಿಸಿ ನಿಗಾವಹಿಸಲಾಗಿದೆ. ಕೋವಿಡ್‌-19 ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next