ರಾಯಚೂರು: ಕೋವಿಡ್ ಲಸಿಕೆಯ ಎರಡನೇ ಹಂತದ ವಿತರಣೆ ಕಾರ್ಯಕ್ರಮಕ್ಕೆ ಮಾನ್ವಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಸೋಮವಾರ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 45ರಿಂದ 59 ವರ್ಷದ ವಯಸ್ಸಿನವರು ಮಾತ್ರ ಲಸಿಕೆ ಪಡೆಯಬಹುದು. ಜಿಲ್ಲೆಯಲ್ಲಿ 2.21 ಲಕ್ಷ ಜನರಿಗೆ ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಲಾಗುತ್ತಿದೆ. ಸಾರ್ವಜನಿಕರು ನೇರವಾಗಿ ಆನ್‌ಲೈನ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಂಡಲ್ಲಿ ಶೀಘ್ರವಾಗಿ ಲಸಿಕೆ ಪಡೆಯಲು ಅರ್ಹತೆ ಪಡೆಯಬಹುದು.
ಖಾಸಗಿ ಆಸ್ಪತ್ರೆಗಳಾದ ನವೋದಯ ಮೆಡಿಕಲ್ ಕಾಲೇಜು ಮತ್ತು ಬಾಲಂಕು ಆಸ್ಪತ್ರೆಯಲ್ಲಿ 250 ರೂ. ಶುಲ್ಕ ಪಾವತಿಸಿ ಲಸಿಕೆ ಪಡೆಯಬೇಕು. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ತರಹದ ಶುಲ್ಕ ಪಾವತಿಸಬೇಕಿಲ್ಲ ಎಂದರು.
ಆರೋಗ್ಯ ಇಲಾಖೆ ಸಮೀಕ್ಷೆ ಪ್ರಕಾರ 1,74,288 ಜನರು 60 ವರ್ಷ ಮೇಲ್ಪಟ್ಟವರಿದ್ದಾರೆ. 48,306 ಜನ ಹೃದಯ ವೈಫಲ್ಯತೆ, ಹೃದಯ ಕಶಿ ಮಾಡಿಸಿಕೊಂಡವರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗೆ ಚಿಕಿತ್ಸೆಗೊಳಗಾದವರು, ಸಕ್ಕರೆ ಕಾಯಿಲೆ, ಮೂತ್ರ ಪಿಂಡ ಕಾಯಿಲೆ ಹೊಂದಿದವರು, ಮೂತ್ರ ಪಿಂಡ ರೋಗದ ಜೊತೆಗೆ ಹಿಮೋ ಡೈಲೆಸಿಸ್ ಮಾಡಿಸಿಕೊಳ್ಳವವರು, ಉಸಿರಾಟದ
ತೊಂದರೆಗೆ ಚಿಕಿತ್ಸೆ ಪಡೆಯುವವರು ಲಸಿಕೆ ಪಡೆಯಬಹುದು ಎಂದು ವಿವರಿಸಿದರು.
2ನೇ ಹಂತದ ಲಸಿಕೆಗೆ ಜಿಲ್ಲೆಯಲ್ಲಿ ರಿಮ್ಸ್, ಮಾನವಿ, ಸಿಂಧನೂರು, ದೇವದುರ್ಗ ಹಾಗೂ ಲಿಂಗಸುಗೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಾದ ನವೋದಯ ಹಾಗೂ ಬಾಲಂಕು ಆಸ್ಪತ್ರೆ ಗುರುತಿಸಲಾಗಿದೆ. ಫಲಾನುಭವಿಗಳು ಲಸಿಕಾ ಕೇಂದ್ರಗಳಿಗೆ ಬರುವಾಗ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಡಿತರ ಚೀಟಿ, ಪಾಸ್ ಪೋರ್ಟ್, ಆನ್‌ಲೈನ್‌ನಲ್ಲಿ ನೋಂದಾಯಿಸಿದಾಗ ಸಲ್ಲಿಸಿದ ಐಡಿ ಕಾರ್ಡ್, ವೈದ್ಯರಿಂದ ಪಡೆದ ಹಾಗೂ ಇಲಾಖೆ ನೀಡಿದ ಗುರುತಿನ ಚೀಟಿ ಹಾಜರು ಪಡಿಸಬೇಕು ಎಂದರು.
ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಸೇರಿದಂತೆ ಸುಮಾರು 16,000 ಜನರಿಗೆ ಲಸಿಕೆ ನೀಡಲಾಗಿದೆ. ನಂತರ ಕೊರೊನಾ ವಾರಿಯಸ್ ìಗಳಾಗಿ ಕೆಲಸ ಮಾಡಿದ ಕಂದಾಯ ಇಲಾಖೆ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪೌರ ಕಾರ್ಮಿಕರು ಸೇರಿದಂತೆ ಸುಮಾರು 5,700 ಜನರಿಗೆ ಲಸಿಕೆ ನೀಡುವ ಮೂಲಕ ಶೇ.70 ಗುರಿ ಸಾಧಿ ಸಲಾಗಿದೆ ಎಂದರು. ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ರಾಮಕೃಷ್ಣ, ಜಿಲ್ಲಾ ಆರ್‌ಸಿಎಚ್ ಅಧಿ ಕಾರಿ ಡಾ| ವಿಜಯಾ, ಮಾನವಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಚಂದ್ರಶೇಖರ್ ಸೇರಿದಂತೆ ಇತರರಿದ್ದರು.
ಸರ್ಕಾರದಿಂದ ಜಿಲ್ಲೆಗೆ 30 ಸಾವಿರ ಡೋಸ್‌ಗಳು ಬಂದಿದ್ದು, ಲಸಿಕೆ ಪಡೆಯಲು ಏಳು ಗುರುತಿನ ಚೀಟಿಗಳ ಪೈಕಿ ಯಾವುದಾದಾರೂ ಒಂದು ಚೀಟಿ ಮತದಾರ ಚೀಟಿ ತೋರಿಸಿ ಲಸಿಕೆ ಪಡೆಯಬಹುದು. ಲಸಿಕೆ ಪಡೆದವರು ಪುನಃ 28 ದಿನಗಳ ನಂತರ ತಾವು ಯಾವ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದರೆ ಅಲ್ಲಿಗೆ ಬರಬೇಕು.
ಆರ್. ವೆಂಕಟೇಶ ಕುಮಾರ್, ಜಿಲ್ಲಾಧಿಕಾರಿ