Advertisement
ಅವರು ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ನಾನು ಮಾಡಿರುವ ಆರೋಪ ನಿರಾಧಾರ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ. ನಾನು ಮಾಡಿರುವ ಆರೋಪಕ್ಕೆ ನನ್ನ ಬಳಿ ದಾಖಲೆ ಇದೆ. ಪೂಜಾರಿ ಅವರ ಬಗ್ಗೆ ಸಚಿವ ರೈ ಅವರು ಯಾರ ಬಳಿ ಅವಮಾನಕರವಾಗಿ ಮಾತ ನಾಡಿದ್ದಾರೆಯೋ ಅವರನ್ನೂ ಕರೆತರುತ್ತೇನೆ. ರೈ ಅವರಿಗೆ ನೈತಿಕತೆ, ಪ್ರಾಮಾಣಿಕತೆ ಮತ್ತು ಅವರೇ ಹೇಳಿದಂತೆ ಪೂಜಾರಿ ಅವರ ಮೇಲೆ ಗೌರವ ಇದ್ದಲ್ಲಿ ಧರ್ಮಸ್ಥಳಕ್ಕೆ ಬಂದು ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥ ಸ್ವಾಮಿಯ ಎದುರು ಪ್ರಮಾಣ ಮಾಡಲಿ ಎಂದರು.
ಜನಾರ್ದನ ಪೂಜಾರಿ ಅವರಿಗೆ ಎಂಪಿ ಟಿಕೇಟ್ ಕೊಡಿಸಲು ತಾನು ಶ್ರಮಿಸಿರುವುದಾಗಿ ರಮಾನಾಥ ರೈ ಹೇಳಿಕೆ ನೀಡಿದ್ದಾರೆ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ರಮಾನಾಥ ರೈ ಅವರ ಪರಿಚಯವೇ ಇಲ್ಲ ಎಂದ ಅವರು, ರಮಾನಾಥ ರೈ ಅವರಿಗೆ ಮೊದಲ ಬಾರಿಗೆ ಟಿಕೇಟ್ ದೊರಕಿಸಿಕೊಟ್ಟದ್ದು ಜನಾರ್ದನ ಪೂಜಾರಿ ಎಂದರು.
Related Articles
Advertisement