Advertisement
ಸಮಸ್ತ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದರು. ರಾಹುಲ್ ಗಾಂಧಿ ಹೇಳಿಕೆ ನೀಡುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ಹೊರ ಹಾಕಿದರು.
Related Articles
Advertisement
‘ಪ್ರಧಾನಿ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. ನನ್ನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ಹಾಕಲಾಗಿದೆ. ನನ್ನ ಮನೆಯನ್ನು ಕಿತ್ತುಕೊಳ್ಳಲಾಯಿತು, ಇ.ಡಿ. 55 ಗಂಟೆಗಳ ವಿಚಾರಣೆ ನಡೆಸಿತು. ಈ ಸವಾಲುಗಳ ನಡುವೆಯೂ ಸಂವಿಧಾನವನ್ನು ರಕ್ಷಿಸುವ ಸಾಮೂಹಿಕ ಪ್ರಯತ್ನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.
ನನ್ನ ನಂತರ ಬಿಜೆಪಿಯವರು ಈಗ ‘ಜೈ ಸಂವಿಧಾನ್’ ಎಂದು ಹೇಳುತ್ತಿರುವುದು ಸಂತಸ ತಂದಿದೆ. ವಿರೋಧ ಪಕ್ಷದಲ್ಲಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ನಮಗೆ ಅಧಿಕಾರಕ್ಕಿಂತ ಮಿಗಿಲಾದದ್ದು ಸತ್ಯ,” ಎಂದರು.
‘ಪ್ರಧಾನಿ ನೇರವಾಗಿ ದೇವರೊಂದಿಗೆ ಮಾತನಾಡುತ್ತಾರೆ. ನಾವೆಲ್ಲರೂ ಜೈವಿಕವಾಗಿದ್ದೇವೆ ಆದರೆ ಪ್ರಧಾನಮಂತ್ರಿ ಅವರು ಜೈವಿಕವಲ್ಲದ ಜೀವಿ ಎಂದು ಹೇಳಿಕೊಳ್ಳುತ್ತಾರೆ. ಗಾಂಧಿ ಸತ್ತಿದ್ದಾರೆ ಮತ್ತು ಅವರು ಚಲನಚಿತ್ರದಿಂದ ಪುನರುಜ್ಜೀವನಗೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ನೀವು ಅಜ್ಞಾನವನ್ನು ಅರ್ಥಮಾಡಿಕೊಳ್ಳಬಹುದೇ? ಗಾಂಧಿ ಸತ್ತಿಲ್ಲ. ಗಾಂಧಿ ಬದುಕಿದ್ದಾರೆ’ ಎಂದು ರಾಹುಲ್ ಕಿಡಿ ಕಾರಿದರು.
ಕ್ಷಮೆಗೆ ಶಾ ಪಟ್ಟು‘ತಮ್ಮನ್ನು ಹಿಂದೂಗಳೆಂದು ಗುರುತಿಸಿಕೊಳ್ಳುವುದರಲ್ಲಿ ಹೆಮ್ಮೆ ಪಡುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರು ಸದನ ಮತ್ತು ದೇಶದ ಕ್ಷಮೆ ಯಾಚಿಸಬೇಕು’ ಎಂದು ಗೃಹ ಸಚಿವ ಅಮಿತ್ ಶಾ ಪಟ್ಟು ಹಿಡಿದರು. ತುರ್ತು ಪರಿಸ್ಥಿತಿ ಮತ್ತು 1984 ರ ಸಿಖ್ ವಿರೋಧಿ ಗಲಭೆಗಳ ಬಗ್ಗೆ ಮಾತನಾಡಿದ ಶಾ, ಗಾಂಧಿ ಅವರಿಗೆ ತಿರುಗೇಟು ನೀಡಿ ‘ಕಾಂಗ್ರೆಸ್ ದೇಶದಲ್ಲಿ “ಉಗ್ರವಾದ” ಹರಡಿದ್ದು ಅಹಿಂಸೆಯ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದರು. ಎಂದಿಗೂ ಹಿಂದೂಗಳನ್ನು ಅವಮಾನಿಸುವುದಿಲ್ಲ
ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ‘ಹಿಂದೂ’ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ ‘ನನ್ನ ಸಹೋದರ ಎಂದಿಗೂ ಹಿಂದೂಗಳನ್ನು ಅವಮಾನಿಸುವುದಿಲ್ಲ. ಬಿಜೆಪಿ ಮತ್ತು ಅದರ ನಾಯಕರ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.