ಬೆಂಗಳೂರು: “ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ತೇಜೋವಧೆ ಮಾಡಲು, ಅಸಮರ್ಥರೆಂದು ಬಿಂಬಿಸಲು ಬಿಜೆಪಿಯಲ್ಲಿ ದೊಡ್ಡ ತಂಡವೇ ಕಾರ್ಯ ನಿರ್ವಹಿಸುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, “ಕ್ಯಾಲಿಫೋರ್ನಿಯಾದಲ್ಲಿ ನಡೆದ
ಸಂವಾದದಲ್ಲಿ ರಾಹುಲ್ ಗಾಂಧಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಪಕ್ಷದವರು ತಾವೇ ಪ್ರಧಾನಿಯಾಗಬೇಕು ಎಂದು ತೀರ್ಮಾನಿಸಿದರೆ ತಾವು ಸಿದಟಛಿರಿರುವುದಾಗಿ ಹೇಳಿದ್ದಾರೆ. ಅವರು ಬಿಚ್ಚು ಮನಸ್ಸಿನಿಂದ ಮಾತನಾಡಿದ್ದು, ಅದರಲ್ಲಿ ತಪ್ಪೇನು?
ಮುಕ್ತವಾಗಿ ಮಾತನಾಡಿರುವುದನ್ನು ಸ್ವಾಗತಿಸುವ ಬದಲಿಗೆ ಟೀಕಿಸುವುದು ಸರಿಯಲ್ಲ. ಪ್ರಧಾನಿ ಮೋದಿ ಅವರ ಬಗ್ಗೆ ಟೀಕೆ ಮಾತ್ರವಲ್ಲದೆ, ಉತ್ತಮ ಸಂವಹನಕಾರರು ಎಂದೆಲ್ಲಾ ರಾಹುಲ್ ಗಾಂಧಿ ಮುಕ್ತವಾಗಿ ಉಲ್ಲೇಖೀಸಿರುವುದನ್ನು ಗಮನಿಸಬೇಕು ಎಂದು ಹೇಳಿದರು. ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ಅದು ಯಡಿಯೂರಪ್ಪ ಅವರ ಅಭಿಪ್ರಾಯ. ಯಡಿಯೂರಪ್ಪ ಅವರಿಗೂ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಇದೆ.ಅವರು
ಕನಸು ಕಾಣಲಿ. ಎಲ್ಲ ರಾಜಕಾರಣಿಗಳಿಗೂ ಉನ್ನತ ಹುದ್ದೆಗೇರಬೇಕೆಂಬ ಕನಸಿರುವುದು ಸಹಜ. ಹಾಗೆಂದು ಇನ್ನೊಬ್ಬರ ಬಗ್ಗೆ ತಿರುಕನ ಕನಸು ಎಂದು ಹೇಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.