Advertisement
ನಂಜನಗೂಡಿಗೆ ಬುಧವಾರ ಆಗಮಿಸಿದ್ದ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಯವರ ಭಾರತ ಜೋಡೋ ಯಾತ್ರೆ ಕ್ರಮಿಸುವ ಕುರಿತು ಮಾಹಿತಿ ಪಡೆದು,ಗುರುವಾರ ಮತ್ತೆ ನಂಜನಗೂಡಿಗೆ ಆಗಮಿಸಿ ಬದನವಾಳಿನ ಖಾದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುಂಡ್ಲುಪೇಟೆಯಿಂದ ಅ.1ರಂದು ಜೋಡೋ ಯಾತ್ರೆಯೊಂದಿಗೆ ಆಗಮಿಸುವ ರಾಹುಲ್ ಗಾಂಧಿ, ಅಂದು ರಾತ್ರಿಯನ್ನು ತಾಲೂಕಿನ ತಾಂಡವಪುರದ ಎಂಐಟಿ ಕಾಲೇಜಿನ ಆವರಣದ ಮೈದಾನದಲ್ಲಿ ಕಳೆದು, 2ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದ ಬದನವಾಳುವಿನ ಖಾದಿ ಕೇಂದ್ರಕ್ಕೆ ಭೇಟಿ ನೀಡಿ
ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ ಎಂದು ಹೇಳಿದರು.
Related Articles
ನಂಜನಗೂಡು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಕ್ಷೇತ್ರದಲ್ಲಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಪೈಪೋಟಿ ನಡೆಯುತ್ತಿರುವ ಕುರಿತು ಸೂಕ್ತ ಉತ್ತರ ನೀಡದೆ ನುಣಿಚಿಕೊಂಡರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಂಸದ ಆರ್.ಧ್ರುವನಾರಾಯಣ ಈಗಾಗಲೇ ಕ್ಷೇತ್ರದ ಪ್ರತಿ ಪಂಚಾಯ್ತಿಯನ್ನು ಭೇಟಿ ಮಾಡಿ ಸಂಘಟನೆಗೆ ಇಳಿದಿದ್ದಾರೆ. ಮಾಜಿ ಸಚಿವ ಡಾ.ಎಚ್
.ಸಿ.ಮಹದೇವಪ್ಪ ಜೋಡೋ ಯಾತ್ರೆ ನಂತರ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ಹಿರಿಯರ ಮಧ್ಯೆ ಕೇಶವಮೂರ್ತಿ ಇದ್ದಾರೆ. ಹೀಗಿರುವಾಗ ಪಕ್ಷದ ಪರಿಸ್ಥಿತಿ ಹೇಗೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷರು, ಭೂಮಿಯನ್ನು ಉತ್ತಿ ಹಸನು ಮಾಡಿದಷ್ಟು ಒಳ್ಳೆಯದು. ಎಲ್ಲರೂ ಉತ್ತಲಿ, ಬೀಜ ಬಿತ್ತುವಾಗ ನಾನು ಆಯ್ಕೆ ಮಾಡಿ ಘೋಷಿಸುತ್ತೇನೆ ಎನ್ನುವುದರ ಮೂಲಕ ಪಕ್ಷದ ಹುರಿಯಾಳುಗಳ ಹೆಸರನ್ನು ಗೌಪ್ಯವಾಗಿಸಿದರು.
Advertisement