Advertisement
ಹಲೋ ಲೈವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಧೋನಿ ತಂಡದಲ್ಲಿ ಇಲ್ಲದ ವೇಳೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಪಂತ್ ಅವರಿಗೆ ಹೆಚ್ಚು ಅವಕಾಶ ನೀಡದೆ ರಾಹುಲ್ ಅವರನ್ನು ಆಯ್ಕೆ ಮಾಡಲಾಯಿತು. ಯಾರನ್ನಾದರೂ ಒಂದು ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅವರಿಗೆ ಸಂಪೂರ್ಣ ಬೆಂಬಲ ಮತ್ತು ಸಮಯವನ್ನು ನೀಡಬೇಕಾದ ಅಗತ್ಯವಿದೆ ಎಂದರು.
ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆ ಸಮಿತಿಯ ನಿರ್ಧಾರಗಳು ಪಾರದರ್ಶಕವಾಗಿ ಇದ್ದರೆ ಬಹಳ ಒಳ್ಳೆಯದು. ಒಬ್ಬ ಆಟಗಾರ ಯಾಕೆ ಆಯ್ಕೆ ಆಗುತ್ತಾನೆ ಅಥವಾ ಯಾಕೆ ಆಯ್ಕೆ ಆಗಿಲ್ಲ ಎನ್ನುವುದನ್ನು ಆತನಿಗೆ ಸ್ಪಷ್ಟವಾಗಿ ತಿಳಿ ಹೇಳಬೇಕು. ಇಂಗ್ಲೆಂಡ್ ಹಾಗೂ ಇತರ ದೇಶಗಳಲ್ಲಿ ಇವನ್ನೆಲ್ಲ ಸ್ಪಷ್ಟವಾಗಿ ಹೇಳುತ್ತಾರೆ. ಭಾರತದಲ್ಲಿ ಆಯ್ಕೆ ಸಮಿತಿ ಸದಸ್ಯರು ಇದನ್ನು ಹೇಳುವುದಿಲ್ಲ. ಇದರಿಂದ ಆಯ್ಕೆ ಸಮಿತಿ ಹಾಗೂ ಆಟಗಾರರ ನಡುವೆ ಬಹಳ ದೊಡ್ಡ ಅಂತರ ಏರ್ಪಟ್ಟಿದೆ. ಇದು ದೂರವಾಗಬೇಕು ಎಂದು ಕೈಫ್ ಹೇಳಿದ್ದಾರೆ.