Advertisement

ಪ್ರಧಾನಿ ಮೋದಿ ಸಿರಿವಂತರ ಚೌಕೀದಾರ್‌ : ರಾಹುಲ್‌ ಗಾಂಧಿ ಟೀಕೆ

09:20 PM Mar 23, 2019 | Team Udayavani |

ಪೂರ್ಣಿಯ, ಬಿಹಾರ : ಬಿಹಾರದಲ್ಲಿಂದು ನಡೆಸಿದ ಚೊಚ್ಚಲ ಚುನಾವಣಾ ಪ್ರಚಾರ ರಾಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೈ ಭೀ ಚೌಕೀದಾರ್‌ ಅಭಿಯಾನವನ್ನು ಗೇಲಿ ಮಾಡಿದರು. 

Advertisement

ಪ್ರಧಾನಿ ಮೋದಿ ಅವರು ಸಿರಿವಂತರ ಮನೆ ಗೇಟ್‌ ಕಾಯುವ ಚೌಕೀದಾರನೇ ಹೊರತು ಬಡವರ ಮನೆ ಕಾಯುವ ಚೌಕೀದಾರ ಅಲ್ಲ ಎಂದು ರಾಹುಲ್‌ ಟೀಕಿಸಿದರು. ಚೌಕೀದಾರ್‌ ಚೋರ ಹೈ ಎಂಬ ಕಾಂಗ್ರೆಸ್‌ ಘೋಷಣೆಯನ್ನು ರಾಹುಲ್‌ ಮತ್ತೆ ಇಲ್ಲಿ ಕೂಗಿದರು.

ಚೌಕೀದಾರನನ್ನು ನೇಮಿಸಿಕೊಳ್ಳುವುದು ಸಿರಿವಂತರೇ ಹೊರತು ಬಡವರಲ್ಲ; ಬಡವರು ಎಂದಾದರೂ ತಮ್ಮ ಮನೆ ಕಾಯಲು ಚೌಕೀದಾರನನ್ನು ನೇಮಿಸಿಕೊಂಡದ್ದು ನೀವು ಕಂಡದ್ದಿದೆಯಾ ಎಂದು ರಾಹುಲ್‌, ಪ್ರಧಾನಿ ಮೋದಿಗೆ ನೇರವಾಗಿ ಟಾಂಗ್‌ ನೀಡುವ ರೀತಿಯಲ್ಲಿ ಗೇಲಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next