Advertisement

ರಾಹುಲ್‌ ಮಿಲ್ಕ್; ನಮೋಗೆ ಟಾಂಗ್‌

07:45 AM Dec 18, 2017 | Harsha Rao |

ಲಕ್ನೋ: ನೀವು ಈವರೆಗೆ “ಮೋದಿ ಟೀ’ ಬಗ್ಗೆ ಕೇಳಿರುತ್ತೀರಿ. ಆದರೆ, “ರಾಹುಲ್‌ ಮಿಲ್ಕ್’, “ರಾಹುಲ್‌ ಹರ್ಬಲ್‌ ಟೀ’
ಬಗ್ಗೆ ಎಲ್ಲಾದರೂ ಕೇಳಿದ್ದಿದೆಯೇ? ಬಾಲ್ಯದಲ್ಲಿ ಚಹಾ ಮಾರಿದ್ದ ವ್ಯಕ್ತಿಯೊಬ್ಬರು ದೇಶದ ಉನ್ನತ ಹುದ್ದೆಗೇರಿದ ಖುಷಿಯಲ್ಲಿ ಅವರ ಅಭಿಮಾನಿಗಳು ಮೋದಿ ಬ್ರ್ಯಾಂಡ್‌ ಅನ್ನು ಜನಪ್ರಿಯಗೊಳಿಸಿದ್ದಾರೆ. ಈಗ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಅಭಿಮಾನಿಯೊಬ್ಬರು ಅದೇ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾರೆ.

Advertisement

ವಿಶೇಷವೆಂದರೆ, ರಾಹುಲ್‌ ಅವರ ಈ ಕಟ್ಟಾ ಅಭಿಮಾನಿ ಇರುವುದು ಉತ್ತರಪ್ರದೇಶದ ಗೋರಖ್‌ಪುರದಲ್ಲಿ. ರಾಜಕೀಯ ನಾಯಕರನ್ನು ಸಾಕ್ಷಾತ್‌ ಧರೆಗಿಳಿದು ಬಂದ ದೇವರಂತೆ ಪರಿಗಣಿಸುವ ಮಂದಿ ಸಾಕಷ್ಟಿದ್ದಾರೆ.

ರಾಜಕೀಯ ಗುರುಗಳ ಹೆಸರಲ್ಲಿ ದೇವಸ್ಥಾನಗಳನ್ನು, ಬೃಹತ್‌ ಪ್ರತಿಮೆಗಳನ್ನು ಸ್ಥಾಪಿಸಿದವರೂ ಇದ್ದಾರೆ. ಇಂಥವರ ಪಟ್ಟಿ ದಿನ ಕಳೆದಂತೆ ಬೆಳೆಯುತ್ತಲೇ ಇದೆ. ಇದಕ್ಕೆ ಹೊಸದಾಗಿ ಸೇರಿದವರೆಂದರೆ ಗೋರಖ್‌ಪುರದ ಕಾಂಗ್ರೆಸ್‌ ನಾಯಕ ಅನ್ವರ್‌ ಹುಸೇನ್‌(30). 2014ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ “ಚಾಯ್‌ ಪೇ ಚರ್ಚಾ’ ಬ್ರ್ಯಾಂಡ್‌ ಜನಪ್ರಿಯಗೊಂಡಾ ಅನ್ವರ್‌ ಅವರು ಸಣ್ಣಮಟ್ಟಿಗೆ “ರಾಹುಲ್‌ ಮಿಲ್ಕ್’ ಅನ್ನು ವಿತರಿಸಿದ್ದರು. 

ಟೀ, ಈರುಳ್ಳಿ: ಇದೀಗ ರಾಹುಲ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆಯೇ ಅನ್ವರ್‌ ಹುಸೇನ್‌ರ ಸಂಭ್ರಮ ದುಪ್ಪಟ್ಟಾಗಿದೆ.
ಈಗ ಅವರು ರಾಹುಲ್‌ ಬ್ರಾಂಡ್‌ ಅಭಿವೃದಿಟಛಿಪಡಿಸಲು ನಿರ್ಧರಿಸಿದ್ದಾರೆ. “ನಾನು ಒಮ್ಮೆ ರಾಹುಲ್‌ರನ್ನು ಭೇಟಿಯಾಗಿದ್ದೆ, ನಿಮ್ಮಂಥ ಯುವಕರು ಪಕ್ಷಕ್ಕೆ ಬೇಕು ಎಂದಿದ್ದರು’ ಎನ್ನುತ್ತಾರೆ ಅನ್ವರ್‌. ರಾಹುಲ್‌ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್‌ನ
ಬಲವರ್ಧನೆಯಾಗಲಿದೆ. ನಾನು ಪರಿಚಯಿಸಿದ “ರಾಹುಲ್‌ ಮಿಲ್ಕ್’ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ರಾಹುಲ್‌ ಹರ್ಬಲ್‌ ಟೀ’, “ರಾಹುಲ್‌ ಈರುಳ್ಳಿ’ಯನ್ನೂ ವಿತರಿಸುತ್ತಿದ್ದೇನೆ ಎಂದಿದ್ದಾರೆ.

ಕಾಫಿ ಮಗ್‌ನಲ್ಲೂ ರಾಹುಲ್‌: ಉತ್ತರಪ್ರದೇಶ ಚುನಾವಣೆ ವೇಳೆ ರಾಹುಲ್‌-ಅಖೀಲೇಶ್‌ರನ್ನು “ಕರ್ಣ-ಅರ್ಜುನ ಜೋಡಿ’ ಎಂದು ಕರೆದಿದ್ದ ಅನ್ವರ್‌, ಕಾಂಗ್ರೆಸ್‌ಗೆà ಮತ ಹಾಕುವಂತೆ ಕೋರಿ ಎಲ್ಲರಿಗೂ “ರಾಹುಲ್‌ ಗುಲಾಬಿ’ಯನ್ನು ಹಂಚಿದ್ದರು. ರಾಹುಲ್‌ ಬಗ್ಗೆ ಅನ್ವರ್‌ಗೆ ಅದೆಷ್ಟು ಪ್ರೀತಿಯೆಂದರೆ, ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ರಾಹುಲ್‌ ಅವರ ಫೋಟೋ ಇರುವ ಪ್ರತ್ಯೇಕವಾದ ಲೆಬ್ರರಿಯನ್ನೂ ತೆರೆದಿದ್ದಾರೆ. ಜತೆಗೆ, ಅನ್ವರ್‌ರ ಕಾಫಿ ಮಗ್‌ನಲ್ಲೂ ರಾಹುಲ್‌ ಚಿತ್ರವಿದೆ. ಇವರ ವಿಶಿಷ್ಟವಾದ
ಪ್ರಚಾರ ಚಟುವಟಿಕೆಗಳನ್ನು ಕಂಡು ಉಲ್ಲಸಿತವಾಗಿರುವ ಕಾಂಗ್ರೆಸ್‌, ಇತ್ತೀಚೆಗಷ್ಟೇ ಇವರನ್ನು ಪಕ್ಷದ ಜಿಲ್ಲಾ ಪ್ರಧಾನ
ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next