Advertisement

ರಾಹುಲ್‌ ಪಟ್ಟಕ್ಕೆ ಸೂಚಕರಾಗಿ ರಾಜ್ಯ ನಾಯಕರ ಸಹಿ

07:30 AM Dec 03, 2017 | Team Udayavani |

ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ರಾಹುಲ್‌ ಗಾಂಧಿ ಪರವಾಗಿ ರಾಜ್ಯದ 
20 ಜನ ಕಾಂಗ್ರೆಸ್‌ನ ಹಿರಿಯ ನಾಯಕರು ಸೂಚಕರಾಗಿ ಸಹಿ ಹಾಕಿದ್ದಾರೆ.

Advertisement

ಎಐಸಿಸಿ ಚುನಾವಣಾಧಿಕಾರಿ ಪರವಾಗಿ ಸೂಚಕರ ಸಹಿ ಪಡೆಯಲು ಆಗಮಿಸಿರುವ ಪಲ್ಲಂರಾಜು ಹಾಗೂ ಪನಬಾಕ ಲಕ್ಷ್ಮೀ ಅವರ ಸಮ್ಮುಖದಲ್ಲಿ ಪಕ್ಷದ ಹಿರಿಯ ನಾಯಕರಾದ ಎಂ.ವಿ. ರಾಜಶೇಖರನ್‌, ಜಾಫ‌ರ್‌ ಷರೀಫ್, ಸಂಸತ್ತಿನಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ವೀರಪ್ಪ ಮೊಲಿ, ಕೆ. ರೆಹಮಾನ್‌ ಖಾನ್‌, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ,  ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರಾದ ಡಿ.ಕೆ. ಶಿವಕುಮಾರ್‌, ಎಂ. ಆರ್‌. ಸೀತಾರಾಮ್‌, ಎಸ್‌.ಎಸ್‌. ಮಲ್ಲಿಕಾರ್ಜುನ, ಈಶ್ವರ್‌ ಖಂಡ್ರೆ, ಡಾ| ಶರಣ ಪ್ರಕಾಶ್‌ ಪಾಟೀಲ್‌, ಕೆ.ಜೆ. ಜಾರ್ಜ್‌, ಎಚ್‌.ಕೆ. ಪಾಟೀಲ್‌, ಶಾಸಕರಾದ ಸಿ.ಎಸ್‌. ನಾಡಗೌಡ, ಮೋಟಮ್ಮ, ಕೆ.ಸಿ. ಕೊಂಡಯ್ಯ, ಯು.ಬಿ. ವೆಂಕಟೇಶ್‌, ಬಿ.ಎಲ್‌. ಶಂಕರ್‌ ಸಹಿ ಹಾಕಿದ್ದಾರೆ. ಹತ್ತು ಜನರ ಎರಡು ಸೆಟ್‌ಗಳನ್ನು ಪ್ರತ್ಯೇಕವಾಗಿ ಸಹಿ ಮಾಡಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ನಮ್ಮಲ್ಲಿ ಸಾವಿರಾರು ಜನ ಕೆಪಿಸಿಸಿ ಸದಸ್ಯರಿದ್ದಾರೆ. ಅವರಲ್ಲಿ ಇಪ್ಪತ್ತು ಜನ ಹಿರಿಯ ನಾಯಕರಿಂದ ಸೂಚಕರಾಗಿ  ಸಹಿಸುವ ಮೂಲಕ ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಲು ಅವರ ಆಶೀರ್ವಾದ ಸಹಕಾರಿಯಾಗಲಿ ಎಂದು  ಮಾಡಿದ್ದೇವೆ ಎಂದರು.

ಪಲ್ಲಂರಾಜು ಮಾತನಾಡಿ, ರಾಹುಲ್‌ ಗಾಂಧಿಯನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕರ್ನಾಟಕದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ 19 ವರ್ಷದಿಂದ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ರಾಹುಲ್‌ ಗಾಂಧಿಯನ್ನು ನೂತನ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next