Advertisement

ರಾಹುಲ್‌ ಗಾಂಧಿಗೆ ಭಯ ತಂದಿರುವ ಅಮೇಠಿ ಅಭಿವೃದ್ಧಿ : ಸಚಿವೆ ಇರಾನಿ

11:31 AM Mar 04, 2019 | Team Udayavani |

ಅಮೇಠಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ತನ್ನ ಈ ಲೋಕಸಭಾ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಭಯ ಉಂಟಾಗಿದೆ ಎಂದು ಕೇಂದ್ರ ಜವಳಿ ಸಚಿವ ಸ್ಮ್ರತಿ ಇರಾನಿ ಟೀಕಿಸಿದ್ದಾರೆ. 

Advertisement

‘ಪ್ರಧಾನಿ ಮೋದಿ ಅವರು ಅಮೇಠಿಯಲ್ಲಿ ಉದ್ಘಾಟಿಸಿರುವ ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಖಾನೆಗೆ 2010ರಲ್ಲಿ ನಾನೇ ಶಿಲಾನ್ಯಾಸ ಮಾಡಿದ್ದೆ’ ಎಂದು ರಾಹುಲ್‌ ಹೇಳಿರುವುದನ್ನು ಟೀಕಿಸಿರುವ ಆಕೆ, ‘ರಾಹುಲ್‌ ಗಿಂತ ಮೊದಲೇ, ಸರಿಸುಮಾರು ಎರಡು ದಶಕಗಳ ಹಿಂದಯೇ, ಅವರ ಪಕ್ಷದ ಇನ್ನೋರ್ವ ನಾಯಕರು ಶಿಲಾನ್ಯಾಸ ಮಾಡಿದ್ದರು ಎಂಬುದನ್ನು ರಾಹುಲ್‌ ಮರೆತಂತಿದೆ’ ಎಂದು ಹೇಳಿದ್ದಾರೆ.

‘ಅಮೇಠಿಯ ಕೋರ್ವಾದಲ್ಲಿ  ಉದ್ಘಾಟನೆಗೊಂಡಿರುವ ಶಸ್ತ್ರಾಸ್ತ್ರ ಉತ್ಪಾದನಾ ಘಟಕವು ಜಂಟಿ ಉದ್ಯಮ ಎಂಬುದನ್ನು ರಾಹುಲ್‌ ಗಮನಿಸಿದಂತಿಲ್ಲ; ಭಾರತ-ರಶ್ಯ ಒಪ್ಪಂದದಡಿ ಈ ಘಟಕದಲ್ಲಿ ಎಕೆ-203 ರೈಫ‌ಲ್‌ ಗಳನ್ನು ಉತ್ಪಾದಿಸಲಾಗುತ್ತಿದೆ’ ಎಂದು ಇರಾನಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next