Advertisement

Delhi ಅಧಿಕೃತ ಬಂಗಲೆಯ ಕೀಲಿಕೈಗಳನ್ನು ಹಸ್ತಾಂತರಿಸಿದ ರಾಹುಲ್

10:35 PM Apr 22, 2023 | Team Udayavani |

 

Advertisement

ಹೊಸದಿಲ್ಲಿ : ‘ಮೋದಿ ಉಪನಾಮ’ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ನಂತರ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಅಧಿಕೃತ ಬಂಗಲೆಯ ಕೀಗಳನ್ನು ಲೋಕಸಭೆಯ ಕಾರ್ಯದರ್ಶಿಗೆ ಗಾಂಧಿ ಹಸ್ತಾಂತರಿಸಿದ್ದಾರೆ. ಮಾಜಿ ಕಾಂಗ್ರೆಸ್ ಅಧ್ಯಕ್ಷರು ಶುಕ್ರವಾರವೇ ಅಧಿಕೃತ ನಿವಾಸದಿಂದ ತಮ್ಮ ಎಲ್ಲಾ ವಸ್ತುಗಳನ್ನು ಸ್ಥಳಾಂತರಿಸಿದ್ದರು.

“ಮೋದಿ ಉಪನಾಮ” ಹೇಳಿಕೆಗಾಗಿ ಸೂರತ್ ನ್ಯಾಯಾಲಯವು ದೋಷಾರೋಪಣೆ ಮತ್ತು ಎರಡು ವರ್ಷಗಳ ಶಿಕ್ಷೆ ವಿಧಿಸಿ ಅನರ್ಹಗೊಳಿಸಿದ ನಂತರ ರಾಹುಲ್ ಅವರಿಗೆ ಎಪ್ರಿಲ್ 22 ರೊಳಗೆ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಹೇಳಲಾಗಿತ್ತು.

Advertisement

“ಹಿಂದೂಸ್ಥಾನದ ಜನರು ನನಗೆ 19 ವರ್ಷಗಳ ಕಾಲ ಈ ಮನೆಯನ್ನು ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸತ್ಯವನ್ನು ಮಾತನಾಡಿದ್ದಕ್ಕಾಗಿ ಬೆಲೆಯಾಗಿದೆ. ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆ ತೆರಲು ಸಿದ್ಧ…” ಎಂದು ರಾಹುಲ್ ಗಾಂಧಿ ಅವರು ಬಂಗಲೆ ಖಾಲಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆಸಿ ವೇಣುಗೋಪಾಲ್ ಈ ವೇಳೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next