Advertisement
ಆರೆಸ್ಸೆಸ್‌ನ ಟೀಕೆಯೇ ನನಗೆ ನೆರವು: ಆರೆಸ್ಸೆಸ್ ನನ್ನ ಮೇಲೆ ಎಲ್ಲ ರೀತಿಯಿಂದಲೂ ದಾಳಿ ನಡೆಸಿರುವುದೇ ನನಗೆ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಆರೆಸ್ಸೆಸ್ಸನ್ನು ಮುಸ್ಲಿಂ ಬ್ರದರ್‌ಹುಡ್ ಉಗ್ರ ಸಂಘಟನೆಯ ಜೊತೆಗೆ ಹೋಲಿಸಿ ಮಾತನಾಡಿದ್ದು, ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ರಾಹುಲ್ ಈ ಮಾತುಗಳನ್ನಾಡಿದ್ದಾರೆ.
ಪ್ರಧಾನಿ ಮಹತ್ವಾಕಾಂಕ್ಷೆಯಿಲ್ಲ: ನನಗೆ ಪ್ರಧಾನಿಯಾಗ ಬೇಕೆಂಬ ಮಹತ್ವಾಕಾಂಕ್ಷೆಯಿಲ್ಲ. ಸೈದ್ಧಾಂತಿಕ ಹೋರಾಟದ ಮೇಲೆ ನನಗೆ ವಿಶ್ವಾಸವಿದೆ. ಈ ಬಗ್ಗೆ ನನಗೆ 2014ರಲ್ಲೇ ಅರಿವು ಮೂಡಿದೆ ಎಂದು ರಾಹುಲ್ ಹೇಳಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಅಧಿಕಾರದಿಂದ ದೂರವಿಟ್ಟ ನಂತರ, ಚುನಾವಣೆ ಮುಗಿದ ಮೇಲೆ ನಾಯಕತ್ವದ ಬಗ್ಗೆ ಚರ್ಚೆ ನಡೆಯಲಿದೆ ಎಂದಿದ್ದಾರೆ. ಎಲ್ಲ ಸಂಸ್ಥೆಗಳೂ ಛಿದ್ರ: ದೇಶದಲ್ಲಿನ ನ್ಯಾಯಾಂಗ, ಚುನಾವಣಾ ಆಯೋಗ, ಆರ್‌ಬಿಐಗಳನ್ನೆಲ್ಲ ಮೋದಿ ಸರಕಾರ ಛಿದ್ರಗೊಳಿಸಿದೆ. ಅಷ್ಟೇ ಅಲ್ಲ, 2014ಕ್ಕೂ ಮೊದಲು ಅಭಿವೃದ್ಧಿಯೇ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರತಿಯೊಬ್ಬ ಭಾರತೀಯನಿಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ವಿಶ್ವವೇ ಭಾರತಕ್ಕೆ ಭವಿಷ್ಯವಿದೆ ಎಂದಿದೆ. ಇದು ಸಾಧ್ಯವಾಗಿದ್ದು ಜನರಿಂದ. ಕಾಂಗ್ರೆಸ್ ಈ ಜನರಿಗೆ ನೆರವಾಗಿದೆ. ಅಭಿವೃದ್ಧಿಯೇ ಆಗಿಲ್ಲ ಎಂದು ಹೇಳುವ ಮೂಲಕ ಜನರನ್ನು ಮೋದಿ ಅವಮಾನಿಸುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
Related Articles
1984ರ ಸಿಕ್ಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ಕೈವಾಡವಿಲ್ಲ ಎಂದು ರಾಹುಲ್ ಹೇಳಿದ್ದರಿಂದ ಕೇಳಿಬರುತ್ತಿರುವ ಟೀಕೆಗೆ ಪ್ರತಿಕ್ರಿಯೆಯಾಗಿ, ಸಿಕ್ಖ್ ದಂಗೆ ನಂತರ ಕೈಗೊಂಡ ಕ್ರಮಗಳನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ. ಕಾಂಗ್ರೆಸ್ ಈ ಘಟನೆಯನ್ನು ಸಾವಿರಕ್ಕೂ ಹೆಚ್ಚು ಬಾರಿ ಖಂಡಿಸಿದೆ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನುಸಿಂ Ì ಹೇಳಿದ್ದಾರೆ. ಇದೇ ವೇಳೆ, ರಾಹುಲ್ ಹೇಳಿಕೆ ಬೆಂಬಲಿಸಿರುವ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಸಿಕ್ಖ್ ವಿರೋಧಿ ದಂಗೆಯಲ್ಲಿ ಪಕ್ಷವಾಗಿ ಕಾಂಗ್ರೆಸ್ ಕೈವಾಡವಿಲ್ಲ. ಯಾರು ಇದರಲ್ಲಿ ಭಾಗವಹಿಸಿದ್ದರೂ ಅವರನ್ನು ಗಲ್ಲಿಗೇರಿಸಲಿ ಎಂದಿದ್ದಾರೆ. ಪಕ್ಷದ ಕೈವಾಡವಿಲ್ಲ ಎನ್ನುವ ಮೂಲಕ ಸಿಕ್ಖರ ಗಾಯಕ್ಕೆ ಕಾಂಗ್ರೆಸ್ ಉಪ್ಪು ಸವರಿದೆ ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಆರೋಪಿಸಿದ್ದರು.
Advertisement
ಸಿಖ್ ವಿರೋಧಿ ದಂಗೆಯಿಂದ ಕಾಂಗ್ರೆಸ್ ಪಕ್ಷದ ಕೈಗೆ ಅಂಟಿರುವ ಕಳಂಕವನ್ನು ತೊಳೆಯಲು ರಾಹುಲ್ ಯತ್ನಿಸುತ್ತಿದ್ದಾರೆ. ಈಗಾಗಲೇ ಅನ್ಯಾಯದಿಂದ ನೊಂದಿರುವ ಸಿಕ್ಖರಿಗೆ ರಾಹುಲ್ ಹೇಳಿಕೆ ಇನ್ನಷ್ಟು ನೋವುಂಟು ಮಾಡಿದೆ ಮಾತ್ರವಲ್ಲ, ವಾತಾವರಣವನ್ನು ಮತ್ತಷ್ಟು ಕೆಡಿಸುವಂತಿದೆ.ಆರ್.ಪಿ. ಸಿಂಗ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ