ನವದೆಹಲಿ: ಶನಿವಾರ ಲಾಕ್ ಆಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ಇನ್ನೂ ಮರುಸ್ಥಾಪನೆಯಾಗಿಲ್ಲ. 3 ದಿನಗ ಳಾದರೂ ಲಾಕ್ ತೆರವು ಮಾಡದ್ದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಟ್ವಿಟರ್ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಪಕ್ಷದ ನಾಯಕರು ದೂರಿದ್ದಾರೆ. ಭಾನುವಾರ ಸಂಜೆ ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿ ಗಳ ಸಭೆಯಲ್ಲಿ ಟ್ವಿಟರ್‌ನ ಈ ಕ್ರಮವನ್ನು ಖಂಡಿಸಲಾಗಿದೆ. ಈ ವಿಷಯದಲ್ಲಿ ನ್ಯಾಯಕ್ಕಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಪಕ್ಷ ಸಿದ್ಧ .
ಮೋದಿ ಸರ್ಕಾರ ಸೂಚಿಸಿದಂತೆ ಟ್ವಿಟರ್ ಸಂಸ್ಥೆ ನಡೆದುಕೊಳ್ಳುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ಇದನ್ನೂ ಓದಿ:ತಿಂಗಳಂತ್ಯದಲ್ಲಿ ವಿದ್ಯಾಗಮ ನಿರ್ಧಾರ: ಶಿಕ್ಷಣ ಸಚಿವ ನಾಗೇಶ್
ಟ್ವಿಟರ್ ಕ್ರಮವನ್ನು ಖಂಡಿಸಿ, ಎನ್‌ಎಸ್‌ಯುಐ, ದೆಹಲಿ ಮಹಿಳಾ ಕಾಂಗ್ರೆಸ್ ಸೇರಿ ಅನೇಕರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.