Advertisement
ಮಣಿಪುರ ರಾಜಧಾನಿ ಇಂಫಾಲ್‌ನ ಐತಿಹಾಸಿಕ ಪ್ಯಾಲೇಸ್ ಗ್ರೌಂಡ್‌ನಿಂದ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಈ ಪ್ರದೇಶದಲ್ಲಿ ಹೆಚ್ಚಿನ ಜನರ ಜಮಾವಣೆಗೆ ಮಣಿಪುರ ಸರಕಾರ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಇಂಫಾಲ್ ಬದಲಾಗಿ ಥೌಬಾಲ್‌ಗೆ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ.
ಈ ಬಾರಿ ಯಾತ್ರೆ ಬಸ್‌ನಲ್ಲೇ ಹೆಚ್ಚು ದೂರ ಕ್ರಮಿಸಲಿದ್ದು, ಕೆಲವು ಕಡೆ ಮಾತ್ರ ಪಾದಯಾತ್ರೆ ನಡೆಯಲಿದೆ. ಮಾ. 20 ಮತ್ತು 21ರಂದು ಮುಂಬಯಿಯಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಪಕ್ಷ ತಿಳಿಸಿದೆ. ನ್ಯಾಯ ಗೀತೆ ಅನಾವರಣ
ಯಾತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಶನಿವಾರ “ಸಹೋ ಮತ್, ಡರೋ ಮತ್’ (ನೋವುಣ್ಣದಿರಿ, ಧೈರ್ಯಗೆಡದಿರಿ) ಎಂಬ ಟ್ಯಾಗ್‌ಲೈನ್ ಇರುವ “ನ್ಯಾಯ ಗೀತೆ’ಯನ್ನು ಅನಾವರಣಗೊಳಿಸಿದೆ.
Related Articles
ಇದೊಂದು ಸೈದ್ಧಾಂತಿಕ ಯಾತ್ರೆಯೇ ವಿನಾ ರಾಜಕೀಯ ಯಾತ್ರೆಯಲ್ಲ. ನರೇಂದ್ರ ಮೋದಿ ಸರಕಾರದ 10 ವರ್ಷಗಳ “ಅನ್ಯಾಯ ಕಾಲ’ದ ವಿರುದ್ಧ ಇದನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಜತೆಗೆ ಸಂಸತ್ತಿನಲ್ಲಿ ಜನರ ಪರ ಧ್ವನಿಯೆತ್ತಲು ಕೇಂದ್ರ ಸರಕಾರ ನಮಗೆ ಅವಕಾಶ ನೀಡಲಿಲ್ಲ. ಈ ಕಾರಣಕ್ಕೆ ಈ ಯಾತ್ರೆ ಕೈಗೊಳ್ಳುತ್ತಿದ್ದೇವೆ. ಬಿಜೆಪಿಯು ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯತ್ತ ಗಮನ ನೆಟ್ಟಿದ್ದರೆ, ನಾವು ಈ ಯಾತ್ರೆಯ ಮೂಲಕ ದೇಶದ ಜನರ ಹೊಟ್ಟೆಪಾಡಿನ ವಿಷಯಗಳತ್ತ ಗಮನ ಹರಿಸಲಿದ್ದೇವೆ ಎಂದೂ ಪಕ್ಷ ತಿಳಿಸಿದೆ.
Advertisement
ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ರಾಹುಲ್ ಅವರ ಭಾರತ್ ಜೋಡೋ ಯಾತ್ರೆ, ರೈತರು, ಕಾರ್ಮಿಕರೊಂದಿಗಿನ ರಾಹುಲ್ ಸಂವಾದದ ತುಣುಕುಗಳನ್ನು ಈ ವೀಡಿಯೋ ಒಳಗೊಂಡಿದ್ದು, ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.
ಉ. ಪ್ರದೇಶದಲ್ಲೇ ಹೆಚ್ಚುಉತ್ತರಪ್ರದೇಶದಲ್ಲಿ ನ್ಯಾಯ ಯಾತ್ರೆಯ ಹೆಚ್ಚಿನ ಭಾಗ ನಡೆಯಲಿದೆ. ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿ ಮಾತ್ರವಲ್ಲದೆ ಅಮೇಠಿ, ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರ ವಾರಾಣಸಿಯನ್ನೂ ಯಾತ್ರೆ ಹಾದುಹೋಗಲಿದೆ. ಯಾತ್ರೆಯ ಹಾದಿ
ಕ್ರಮಿಸಲಿರುವ ಒಟ್ಟು ದೂರ 6,713 ಕಿ.ಮೀ.
ಯಾತ್ರೆ ನಡೆಯುವ ದಿನಗಳು 67
ಯಾತ್ರೆ ಸಾಗಲಿರುವ ರಾಜ್ಯಗಳು 15
ಎಷ್ಟು ಜಿಲ್ಲೆಗಳಲ್ಲಿ ಸಂಚಾರ? 115
ಎಷ್ಟು ಲೋಕಸಭಾ ಕ್ಷೇತ್ರಗಳು?100