Advertisement
ಶುಕ್ರವಾರ ಬೈಂದೂರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರ ಯಡ್ತರೆ, ಬೈಂದೂರು, ಉಪ್ಪುಂದದಲ್ಲಿ ನಡೆದ ಬೃಹತ್ ರೋಡ್ ಶೋ ಹಾಗೂ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಬಿಜೆಪಿಯು ಯಾವುದೇ ತನಿಖೆಗೆ ಅಡ್ಡಿಪಡಿಸುವುದಿಲ್ಲ. ಈ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ವಿವರವಾಗಿ ಹೇಳಿದ್ದಾರೆ. ಬಿಜೆಪಿಯು ತನ್ನದೇ ಆದ ದಾರಿಯಲ್ಲಿ ಹೋಗುತ್ತಿದ್ದು, ಈ ಪ್ರಕರಣದಿಂದ ಯಾವುದೇ ರೀತಿಯ ಹಿನ್ನಡೆ ಆಗದು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸ್ಪಷ್ಟಪಡಿಸಿದರು.
Related Articles
ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಹತಾಶಗೊಂಡಿದ್ದು, ಅವರಿಗೆ ಸೋಲಿನ ಭಯ ಕಾಡಲಾರಂಭಿಸಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬಿ.ವೈ. ರಾಘವೇಂದ್ರ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಈ ದೊಡ್ಡ ಅಂತರ ನೋಡಿ ರಾಹುಲ್ ಗಾಂಧಿ ಶಿವಮೊಗ್ಗದಲ್ಲಿ ಸಮಾವೇಶ ನಡೆಸಿದ್ದಾರೆ. ಅವರ ಆ ಕಾರ್ಯಕ್ರಮದಲ್ಲಿ ಆದ ಕಾಮಿಡಿಯನ್ನು ನಾವು ನೋಡಿದ್ದೇವೆ. ಭಾಷಾಂತರವನ್ನು ಸಹ ಅರ್ಧಕ್ಕೆ ನಿಲ್ಲಿಸಿ ಕಳುಹಿಸಿದ್ದಾರೆ ಎಂದವರು ವ್ಯಂಗ್ಯವಾಡಿದರು.
Advertisement
ಕೊಲ್ಲೂರು ಕಾರಿಡಾರ್ಕೇಂದ್ರದ ಆಡಳಿತದ ಬಗ್ಗೆ ಜನರಿಗೆ ಗೊತ್ತು. ದಕ್ಷಿಣ ಭಾರತದಲ್ಲೂ ಟೆಂಪಲ್ ಕಾರಿಡಾರ್ ಆಗಬೇಕಾಗಿದೆ. ವಾರಣಾಸಿ, ಉಜ್ಜೆನಿ, ಅಯೋಧ್ಯೆ ಎಲ್ಲ ಕಡೆ ಟೆಂಪಲ್ ಕಾರಿಡಾರ್ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಕೊಲ್ಲೂರು ಕಾರಿಡಾರ್ ಮಾಡುವ ಸಮಯ ಬಂದಿದೆ. ಪ್ರಧಾನಿ ಮೋದಿ ಅವರನ್ನೇ ಕೊಲ್ಲೂರಿಗೆ ಕರೆದುಕೊಂಡು ಬರಬೇಕು. ಮೂಕಾಂಬಿಕಾ ದೇವಿಯ ದರ್ಶನ ಮಾಡಬೇಕು ಎಂದು ಜನ ಬಯಸಿದ್ದಾರೆ. ಖಂಡಿತವಾಗಿಯೂ ಕೊಲ್ಲೂರು ಕಾರಿಡಾರ್ ಆಗಿಯೇ ಆಗುತ್ತದೆ. ಈ ದೇವಿಯ ಸನ್ನಿಧಾನವು ಅಂತಾರಾಷ್ಟ್ರೀಯ ಕೇಂದ್ರವಾಗಿ ರೂಪುಗೊಳ್ಳಲಿದೆ. ನಮ್ಮ ಕೈಯಲ್ಲಿ ಖಚಿತವಾದ ಯೋಜನೆ ಇದೆ. ನಾವು ಕಾರಿಡಾರ್ ಮಾಡಿಯೇ ಮಾಡುತ್ತೇವೆ ಎಂದು ಅಣ್ಣಾಮಲೈ ತಿಳಿಸಿದರು. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ನಟಿ ತಾರಾ, ಮಾಜಿ ಶಾಸಕ ಲಾಲಾಜಿ ಮೆಂಡನ್, ಪ್ರಮುಖರಾದ ಕ್ಯಾ| ಬ್ರಿಜೇಶ್ ಚೌಟ, ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.